ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಯುವಕನ ಸ್ಥಿತಿ ಗಂಭೀರ !

0 957

ತೀರ್ಥಹಳ್ಳಿ: ಚಲಿಸುತ್ತಿದ್ದ ಬಸ್‌ನಿಂದ (Bus) ಬಿದ್ದು ಯುವಕ ಗಂಭೀರವಾಗಿ ಗಾಯಗೊಂಡ (Injuries) ಘಟನೆ ತೀರ್ಥಹಳ್ಳಿ (Thirthahalli) ಪಟ್ಟಣದ ಆಗುಂಬೆ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ (National Highway) ಮಲ್ನಾಡ್ ಕ್ಲಬ್ ಸಮೀಪದ ರಾಕ್ ವಿವ್ ಹೋಟೆಲ್ ಬಳಿ ನಡೆದಿದೆ.

ಕಲ್ಮನೆ ಸಮೀಪದ ಹೆಗ್ಗೋಡಿನ ಯುವಕನಿಗೆ ಗಂಭೀರ ಗಾಯವಾಗಿದ್ದು, ಇಂದು ಬೆಳಗ್ಗೆ 9 ಗಂಟೆ ಹೊತ್ತಿಗೆ ಬಸ್‌ನಲ್ಲಿ ಬರುವಾಗ ಬಸ್‌ನ ಬಾಗಿಲ ಬಳಿ ನೇತಾಡಿಕೊಂಡು ಬರುತ್ತಿದ್ದ ಯುವಕನಿಗೆ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಪೊಲೀಸ್ ಬ್ಯಾರಿಕೇಡ್ ತಲೆಗೆ ಹೊಡೆದಿದ್ದು ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಗಾಯಗೊಂಡ ಯುವಕನನ್ನು ಉಡುಪಿಯ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Leave A Reply

Your email address will not be published.

error: Content is protected !!