ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ 20 ಸಾವಿರಕ್ಕೂ ಅಧಿಕ ಜನ ಸೇರಿ ಗೃಹ ಸಚಿವ ಆರಗ ಜ್ಞಾನೆಂದ್ರ ನಾಮಪತ್ರ ಸಲ್ಲಿಕೆಗೆ ಜತೆಯಾಗಿದ್ದಾರೆ.
ತೀರ್ಥಹಳ್ಳಿಯ ಕುಶಾವತಿಯಿಂದ ತೀರ್ಥಹಳ್ಳಿ ತಾಲೂಕು ಕಚೇರಿ ತೆರಳಿ ಅಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲಿಂದ ರಸ್ತೆಯಲ್ಲಿ ಜನರ ಸಂತಸ ನೋಡಿ ಜ್ಞಾನೇಂದ್ರ ಅವರು ಬೈಕ್ ಅಲ್ಲಿ ರೈಡ್ ಮಾಡಿದ್ದಾರೆ. ಕುಶಾವತಿಯಿಂದ ಬಾಳೆಬೈಲಿನವರೆಗೆ ಜನ ಸೇರಿದ್ದು ಇಡೀ ಪಟ್ಟಣದಲ್ಲಿ ಬಿಜೆಪಿ ಬಾವುಟ ರಾರಾಜಿಸಿತು.
ಜ್ಞಾನೇಂದ್ರ ಪರ ಜಯಘೋಷ ನಾಮಪತ್ರ ಸಲ್ಲಿಸಿ ಬೈಕಲ್ಲೇ ಸಿಟಿ ರೌಂಡ್ಸ್ ಹಾಕಿದ ಆರಗ ಗಮನ ಸೆಳೆದರು. ಕಾರ್ಯಕರ್ತರ ಸಂತಸ, ನೃತ್ಯ ಗಮನ ಸೆಳೆಯಿತು.
ದೇಗುಲಗಳಿಗೆ ರೌಂಡ್ಸ್
ತೀರ್ಥಹಳ್ಳಿ ವಿಧಾನ ಸಭಾ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರು ಮಂಗಳವಾರ ತೀರ್ಥಹಳ್ಳಿಯ ಮಾರಿಕಾಂಬಾ, ಕುರುವಳ್ಳಿ ಗೌರಿ ಶಂಕರ, ಆಂಜನೇಯ ದೇಗುಲ ಸೇರಿ ಅನೇಕ ಕಡೆ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದು ನಾಮ ಪತ್ರ ಸಲ್ಲಿಸಿದ್ದಾರೆ.
ಅಣ್ಣಾಮಲೈ ಆಗಮನ
ತೀರ್ಥಹಳ್ಳಿ ಹೇಳಿಕಾಪ್ಟರ್ ಮೂಲಕ ಆಗಮಿಸಿದ ಅಣ್ಣಾಮಲೈ ವೇದಿಕೆಗೆ ಆಗಮಿಸಿದ್ದಾರೆ. 10 ಸಾವಿರ ಮಂದಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.