ತೀರ್ಥಹಳ್ಳಿ ; ಇಂದು ನಾಮಪತ್ರ ಸಲ್ಲಿಸಲಿರುವ ಆರಗ ಜ್ಞಾನೇಂದ್ರ

0 45

ತೀರ್ಥಹಳ್ಳಿ : ವಿಧಾನಸಭಾ ಚುನಾವಣೆಗೆ ದಿನಗಣನೇ ಆರಂಭವಾಗಿದ್ದು ಇಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಸತತ ಹತ್ತನೇ ಬಾರಿ ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಸುವ ಮೊದಲು ಪಟ್ಟಣದ ಪ್ರಮುಖ ದೇವಸ್ಥಾನಗಳಾದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ, ಮಾಧವ, ಕಲ್ಲಾರೆ ಗಣಪತಿ ಹಾಗೂ ಮಾರಿಕಾಂಬಾ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆದರು.

ತಾರಗೊಳ್ಳಿ ನಾಗರಾಜ್ ರಾಯರ ಮನೆಗೆ ಭೇಟಿ

ತಮ್ಮ ಸಾರ್ವಜನಿಕ ಬದುಕಿನ ಸೂತ್ರದಾರರು ತಮಗೆ ಬದುಕು ನೀಡಿ ಜಮೀನು ಕೊಟ್ಟು ಸಾರ್ವಜನಿಕರ ಬದುಕಿನ ಈ ಹಂತದವರೆಗೆ ಬೆಳವಣಿಗೆಗೆ ಮೂಲ ಕಾರಣಕರ್ತರಾದ ತಾರಗೊಳ್ಳಿ ನಾಗರಾಜ್ ರಾಯರ ಮನೆಗೆ ಭೇಟಿ ನೀಡಿ ಅವರ ಭಾವ ಚಿತ್ರಕ್ಕೆ ನಮನ ಸಲ್ಲಿಸಿದರು.

ಪುರುಷೋತ್ತಮ ರಾಯರ ಮನೆಗೆ ಭೇಟಿ

ತಮ್ಮ ಸಾರ್ವಜನಿಕ ಬದುಕಿನ ಮಹಾನ್ ಪೋಷಕರು ಕೃಷಿ ಋಷಿಗಳು ಆದ ಕುರುವಳ್ಳಿ ಪುರುಷೋತ್ತಮ ರಾಯರ ಮನೆಗೆ ಭೇಟಿ ನೀಡಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಶ್ರೀ ರೇಣುಕಾನಂದ ಶ್ರೀಗಳ ಆಶೀರ್ವಾದ ಪಡೆದ ಆರಗ

ಹಿಂದೂ ಸಮಾಜದ ಕ್ಷೇತ್ರದಲ್ಲಿರುವ ಎಲ್ಲಾ ಮಠದ ಸಂತರಿಗೂ ಕರೆ ಮಾಡಿ ಆಶೀರ್ವಾದವನ್ನು ಪಡೆಯಲಾಯಿತು. ಗರ್ತಿಕೆರೆ ನಿಟ್ಟೂರು ಮಠದ ಪರಮಪೂಜೆಯ ಶ್ರೀ ಶ್ರೀ ರೇಣುಕಾನಂದ ಶ್ರೀಗಳು ಮಠದಲ್ಲಿಯೇ ಇದ್ದ ಕಾರಣ ಅವರನ್ನು ನೇರವಾಗಿ ಭೇಟಿಯಾಗಿ ಆಶೀರ್ವಾದವನ್ನು ಪಡೆದರು.

ಆರಗ ಗೆಲುವಿಗೆ ಕಾರ್ಯಕರ್ತರಿಂದ ಪ್ರಾರ್ಥನೆ

ಆರಗ ಜ್ಞಾನೇಂದ್ರ ಗೆಲುವಿಗಾಗಿ ಪ್ರಾರ್ಥಿಸಿ ಬೊಮ್ಮಸಯ್ಯನ ಅಗ್ರಹಾರದ ಸೋಮೇಶ್ವರ ದೇವಸ್ಥಾನದಲ್ಲಿ ಕುರುವಳ್ಳಿಯ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

Leave A Reply

Your email address will not be published.

error: Content is protected !!