ದಾಂಧಲೆ ನಡೆಸುತ್ತಿದ್ದ ಚಿರತೆ ಆಹಾರವಿಲ್ಲದೆ ಸಾವು !

0 0

ತೀರ್ಥಹಳ್ಳಿ : ಕಳೆದ 3 ತಿಂಗಳಿನಿಂದ ನೊಣಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲೇಸರ ಸುತ್ತಮುತ್ತ ನಾಯಿಗಳನ್ನು ಹಿಡಿದು ತಿಂದು ಜಾನುವಾರುಗಳ ಮೇಲೆ ಹಲ್ಲೆ ಮಾಡುತ್ತಿದ್ದ ಚಿರತೆಯೊಂದು ಕಾಲಿಗೆ ಪೆಟ್ಟಾದ ಕಾರಣ ಓಡಾಡಲು ಸಾಧ್ಯವಾಗದೆ ಹಸಿವಿನ ಬಾಧೆಯಿಂದ ಮರಣ ಹೊಂದಿದ ಘಟನೆ ನಡೆದಿದೆ.

ಈ ಚಿರತೆಯನ್ನು ಜೀವಂತ ಹಿಡಿಯಲು ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಮಲ್ಲೇಸರರವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಕಾಡಿನಲ್ಲಿ ಬೋನ್ ತಂದಿರಿಸಿ 15 ದಿನ ಕಾದರೂ ಚಿರತೆ ಸಿಕ್ಕಿರಲಿಲ್ಲ.

ಕಳೆದ ಒಂದು ತಿಂಗಳು ನಾಪತ್ತೆಯಾಗಿದ್ದ ಚಿರತೆ ಏ. 7 ರಂದು ಮಲ್ಲೇಸರ ಕಾಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಈ ಚಿರತೆ ಐದಾರು ನಾಯಿಗಳನ್ನು ಹಿಡಿದು ತಿಂದಿದ್ದು, ಹಲವಾರು ಜಾನುವಾರುಗಳ ಮೇಲೆ ಹಲ್ಲೆ ನಡೆಸಿತ್ತು ಎನ್ನಲಾಗಿದೆ.

Leave A Reply

Your email address will not be published.

error: Content is protected !!