ಪುನೀತ್ ನೆನಪಿನೋತ್ಸವ ಕಾರ್ಯಕ್ರಮ | 30 ಮಂದಿ ನೇತ್ರದಾನ | ಕಲೆ, ಕಲಾವಿದರ ಸಮಾಗಮ | 35 ಮಂದಿಗೂ ಹೆಚ್ಚು ಸಾಧಕರು, ಸೇವಕರಿಗೆ ಸನ್ಮಾನ | ಸಣ್ಣ ಹಳ್ಳಿಯಲ್ಲಿ ಮಾದರಿ ಕೆಲಸ

0 0

ತೀರ್ಥಹಳ್ಳಿ : ವಿಶ್ವ ಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್, ಕಲ್ಲುಕೊಡಿಗೆ ಕುಪ್ಪಳಿ ಹಾಗೂ ಬೆಕ್ಕನೂರು ಸಮಸ್ತ ಗ್ರಾಮಸ್ಥರ ಸಹಯೋಗದಲ್ಲಿ ಮಾ.17ರಂದು ದಿನವಿಡಿ ಪುನೀತ್ ನೆನಪಿನೋತ್ಸವ-2023 ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮ ಹತ್ತಾರು ಸಾಮಾಜಿಕ ಕೆಲಸಗಳ ಮೂಲಕ ಮಾದರಿ ಆಯಿತು.

ಸಮುದಾಯ ಭವನ, ಮುಸ್ಸಿನಕೊಪ್ಪ, ಕಲ್ಲುಕೊಡಿಗೆ ಆವರಣದಲ್ಲಿ ಪುನೀತ್ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ, ನೇತ್ರದಾನ ಶಿಬಿರ, ಉಚಿತ ಅರೋಗ್ಯ ಶಿಬಿರ ಮಾಡಲಾಯಿತು. ತೀರ್ಥಹಳ್ಳಿ ಮುಖ್ಯ ವೈದ್ಯಾಧಿಕಾರಿ ಗಣೇಶ್ ಭಟ್ ಶಿಬಿರ ಉದ್ಘಾಟನೆ ಮಾಡಿದರು. ಈ ವೇಳೆ ಗ್ರಾಮದ ಗಣ್ಯರಾದ ಚಂದ್ರೆಗೌಡ, ರೋಟರಿ ಸಂಸ್ಥೆಯ ಅರುಣ್, ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜ್ ತಟ್ಟಾಪುರ, ಸರೋಜಾ ನಾಗಪ್ಪಗೌಡ, ಅನಂತಪದ್ಮನಾಭ, ಗುಂಡಯ್ಯ, ಸೇರಿದಂತೆ ಹಲವರುಇದ್ದರು. ಸುಮಾರು 24 ಮಂದಿ ರಕ್ತ, 30 ಮಂದಿ ನೇತ್ರದಾನ ಮಾಡಿದರು. 100ಕ್ಕೂ ಹೆಚ್ಚು ಮಂೋದಿ ಉಚಿತ ರಕ್ತ ಪರೀಕ್ಷೆ, ಬಿಪಿ, ಶುಗರ್ ಚೆಕ್ ಮಾಡಿಸಿಕೊಂಡರು. ದೇವಂಗಿ ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿ ಗೀತಾ, ರೋಟರಿ ಸಂಸ್ಥೆಯ ನಾಗರಾಜ್ ಗೌಡ ಸೇರಿದಂತೆ ಹಲವರು ಇದ್ದರು.

ಬಸ್ ನಿಲ್ದಾಣಗಳಿಗೆ ಬಣ್ಣ, ಕಲ್ಲು ಬೆಂಚು!

ಪುನೀತ್ ಹುಟ್ಟು ಹಬ್ಬದ ಅಂಗವಾಗಿ ಬೆಕ್ಕನೂರು ಗ್ರಾಮದ 5 ಬಸ್ ನಿಲ್ದಾಣಗಳ ಬಣ್ಣ, ಕಲ್ಲು ಬೆಂಚು ಸೌಲಭ್ಯವನ್ನು ಹಿರಿಯರು, ಗಣ್ಯರು ಉದ್ಘಾಟನೆ ಮಾಡಿದರು. ನಿವೃತ್ತ ಸೈನಿಕ ಸುರೇಂದ್ರ, ಹಿರಿಯರಾದ ಶೇಷಾದ್ರಿ ತಟ್ಟಾಪುರ, ವಿಶ್ವಮಾನವ ವೇದಿಕೆಯ ಸುಧಾಕರ್ ಕುಪ್ಪಳಿ, ರಾಘವೇಂದ್ರ, ಶ್ರೀರಾಮ್, ಪ್ರಸಾದ್, ಪ್ರತೀಕ್, ಸುಮಂತ, ಮಿಥುನ್ ಇತರರು ಇದ್ದರು.

ಗ್ರಾಮೀಣ ಕ್ರೀಡಾಕೂಟದ ರಂಗು!

ದೇವಂಗಿ, ಹಿರೇಕೊಡಿಗೆ ಗ್ರಾಮ ಪಂಚಾಯತ್ ಮಟ್ಟದ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಸ್ಪರ್ಧೆ ನಡೆದಿದ್ದು ನೂರಾರು ಕ್ರೀಡಾಪಟುಗಳು ಭಾಗಿಯಾದರು.
ಗಡಿಕಲ್ ತಂಡ ವಾಲಿಬಾಲ್ ಪ್ರಥಮ, ಬೆಳ್ಳಿಕೊಡಿಗೆ ತಂಡ ದ್ವಿತೀಯ, ಥ್ರೋಬಾಲ್ ಅಲ್ಲಿ ಹಿಲಿಕೆರೆ ಮಹಿಳಾ ತಂಡ, ಹಗ್ಗ ಜಗ್ಗಾಟದಲ್ಲಿ ಎರಡು ಹಿಲಿಕೆರೆ ತಂಡ ಜಯಗಳಿಸಿತು. ಗ್ರಾಮೀಣ ಕ್ರೀಡೆಯಲ್ಲಿ ಜನ ಖುಷಿಯಿಂದ ಆಟ ಆಡಿ ಸಂಭ್ರಮಿಸಿದರು. ಸಂಸ್ಥೆಯ ರಾಜೇಶ್, ನಂದೀಶ್ ಸೇರಿ ಎಲ್ಲರೂ ಆಟವನ್ನು ನಡೆಸಿಕೊಟ್ಟರು.

35ಕ್ಕೂ ಹೆಚ್ಚು ಮಂದಿಗೆ ಸನ್ಮಾನದ ಹಿರಿಮೆ!

ಪುನೀತ್ ನೆನಪಿನೋತ್ಸವದಲ್ಲಿ ಸಂಜೆ ನಡೆದ ವರ್ಣರಂಜಿತ ಅದ್ದೂರಿ ಸಭೆಯಲ್ಲಿ ಸುಮಾರು 29 ಮಂದಿ ಸ್ಥಳೀಯ ಸಾಧಕರು, ಸೇವಕರಿಗೆ ಸನ್ಮಾನ ಮಾಡಲಾಯಿತು. ಬಳಿಕ ಕಲಾವಿದರನ್ನು ಗೌರವಿಸಲಾಯಿತು.ಚಿದಂಬರ್ ಭಟ್, ಹಿರಿಯ ಅರ್ಚಕರು, ಕೃಷಿಕರು, ಮಾನಪ್ಪ ಗೌಡ ಕರ್ಕಿಬೈಲು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಸೀತಮ್ಮ ಗಡಿಕಲ್ ( ಸೂಲಗಿತ್ತಿ, ನಾಟಿ ತಜ್ಞರು, ರಾಧಾ ಪ್ರಹ್ಲಾದ್ (ನಿವೃತ್ತ ಹಿಂದಿ ಶಿಕ್ಷಕರು, ಲಾಲ್ ಬಹುದ್ದೂರ್ ಶಾಸ್ತ್ರೀ ಪ್ರೌಢ ಶಾಲೆ, ಹಿರೇಕೊಡಿಗೆ, ಗಡಿಕಲ್), ಇಸ್ಮಾಯಿಲ್, ಹಿರಿಯ ವರ್ತಕರು,ಗಣೇಶಯ್ಯ, ಹಿರಿಯ ವರ್ತಕರು, ಪುಟ್ಟಣ್ಣ ಜಿ.ಎಸ್ ಗಿಣಿಯ (ಅಂಚೆ ಇಲಾಖೆ), ಸುರೇಂದ್ರ ಟಿ.ಆರ್ ತಟ್ಟಾಪುರ ನಿವೃತ್ತ ಸೈನಿಕರು, ಮಂಜುನಾಥ್ ಕಲ್ಲುಕೊಡಿಗೆ (ಎಎಸ್ಐ ತೀರ್ಥಹಳ್ಳಿ ), ದೇವಪ್ಪ (ಜೆ.ಇ ಕೋಣಂದೂರು), ಹರೀಶ್ ಕುಪ್ಪಳಿ (ಉಪನ್ಯಾಸಕರು), ಅಣ್ಣಯ್ಯ (ನಿವೃತ್ತ ಮುಖ್ಯ ಉಪಾಧ್ಯಾಯರು, ಶೈಲಾ ಅಬ್ಬಿಗುಂಡಿ (ಹಿರಿಯ ಶಿಕ್ಷಕಿ, ಆಲೆಮನೆ ಶಿಕ್ಷಕಿ), ಶ್ರೀನಾಥ್ ಸಿಡಿಯಾ, ಮುಖ್ಯ ಶಿಕ್ಷಕರು, ನೆಮ್ಮಾರು, ರಾಘವೇಂದ್ರ ಗಣಪತಿಕಟ್ಟೆ (ಪೋಸ್ಟ್ ಮ್ಯಾನ್, ಗಡಿಕಲ್),ವಿದ್ಯಾನಂದ್ (ಶಿಕ್ಷಕರು, ಎಲ್ ಬಿ ಎಸ್ ಶಾಲೆ ) ನಾಗರತ್ಮ ಎಸ್ ಜಿ ಸನ್ಯಾಸಿಕೊಡಿಗೆ (ಅಂಗನವಾಡಿ ಶಿಕ್ಷಕಿ), ಇಂದಿರಾ ಕಲ್ಲುಕೊಡಿಗೆ (ಅಂಗನವಾಡಿ ಸಹಾಯಕರು), ಶಂಕರಮೂರ್ತಿ ಕುಪ್ಪಳಿ, ಪ್ರಗತಿಪರ,ಕೃಷಿಕ, ಗಾಯತ್ರಿ ಬೆಕ್ಕನೂರು (ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಇಲಾಖೆ, ಚಿಕ್ಕಮಗಳೂರು), ಸಂಜೀವ ನಾಯ್ಕ ತಟ್ಟಾಪುರ (ಸಾಧಕ ರೈತ),ಡಾ.ಚೈತ್ರಾ ಗಣಪತಿಕಟ್ಟೆ (ವೈದ್ಯರು, ಗಡಿಕಲ್ ಆಸ್ಪತ್ರೆ), ರಮೇಶ್ ನಾಯ್ಕ ತಟ್ಟಾಪುರ (ನಾಟಿ ಉಳುಕು ತಜ್ಞರು), ಮಂಜುನಾಥ ನಾಯ್ಕ ತಟ್ಟಾಪುರ ( ನಾಟಿ ಪಶು ಚಿಕಿತ್ಸಕರು), ರವಿಕಾಂತ್, ಸಾಹಿತಿಗಳು, ಪತ್ರಕರ್ತರು, ಚಂದ್ರಶೇಖರ್ ತಟ್ಟಾಪುರ (ಪ್ರಗತಿಪರ ಕೃಷಿಕರು)ರಾಜು ಭಂಡಾರಿ( ಸವಿತಾ ಸಮಾಜ ಪ್ರಮುಖರು, ಗಡಿಕಲ್) ಗಗನ್ ಕೆ.ಎಸ್( ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಸಾಧಕ ವಿದ್ಯಾರ್ಥಿ), ಅರ್ಚನಾ ಎಸ್ ಅಸೂಡಿ (ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದ ವಿದ್ಯಾರ್ಥಿನಿ) 35 ಮಂದಿಗೆ ಸನ್ಮಾನ ಮಾಡಲಾಯಿತು.

ಪುನೀತ್ ರಾಜ್ ಕುಮಾರ್ ಮ್ಯೂಸಿಕ್ ನೈಟ್ಸ್!

ಪುನೀತ್ ರಾಜ್ ಕುಮಾರ್ ಮ್ಯೂಸಿಕ್ ನೈಟ್ಸ್ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ನಟ ನಟಿಯರು ಭಾಗವಹಿಸಿ ಕಾರ್ಯಕ್ರಮಕ್ಕೆ ರಂಗು ತುಂಬಿದರು. ಪುನೀತ್ ಹಾಡು, ನೃತ್ಯ, ಭಾವಗೀತೆ, ಚಿತ್ರಗೀತೆಗಳು ಗಮನ ಸೆಳೆದವು. ತಾಯಿಮನೆ ಆಶ್ರಮದ ಸುದರ್ಶನ್ ತಾಯಿಮನೆ, ಹಿರಿಯರಾದ ನಟಿಯರಾದ ದಿವ್ಯಾ ಉರುಡುಗ, ಪ್ರಜ್ಞಾ ಭಟ್, ನಾಗಶ್ರೀ ಬೇಗಾರ್, ಅಭಿಷೇಕ್ ಹೆಬ್ಬಾರ್, ಕಾಮಿಡಿ ಕಲಾವಿದ ರಂಜನ್, ಜಾದೂ ಕಲಾವಿದ ನಿಶ್ಚಲ್ ಜಾದೂಗಾರ ಕಾರ್ಯಕ್ರಮದಲ್ಲಿ ಭಾಗಿಯಾದರು.
ಖ್ಯಾತ ಗಾಯಕಿಯರಾದ ಗಾಯಕಿಯರಾದ ರಂಜಿತಾ ಕೊಪ್ಪ, ಉಷಾ ಬಾಳೆಬೈಲು, ಗಿರೀಶ್ ಮೃಗವಧೆ, ವರ್ಷಿಣಿ ಪಿ ಭಟ್, ರೋಹಿತ್ ಜಮದಗ್ನಿ, ಗೋಪಾಲಕೃಷ್ಣ ಭಟ್ ತಮ್ಮ ಗಾಯನದ ಮೂಲಕ ಗಮನ ಸೆಳೆದರು. ತೀರ್ಥಹಳ್ಳಿಯ ಡಾನ್ಸ್ ಪ್ಯಾಲೇಸ್ ಅಕಾಡೆಮಿ ಕಲಾವಿದರು ನೃತ್ಯ ನಮನ ಸಲ್ಲಿಸಿದರು.

ಆಯೋಜಕರ ಶ್ರಮಕ್ಕೆ ಸಿಕ್ಕಿತು ಜಯ!

ಪುನೀತ್ ಜನ್ಮ ದಿನ ಬೆಳಿಗ್ಗೆಯಿಂದ ರಾತ್ರಿವರೆಗೆ ಸುಮಾರು 2000 ಗ್ರಾಮಸ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಕುಪ್ಪಳಿ ಬಳಿ ನಡೆದ ಕಾರ್ಯಕ್ರಮವೊಂದು ಹತ್ತು ಹಲವು ಪುನೀತ್ ಪ್ರೇರಿತ ಚಟುವಟಿಕೆಯಿಂದ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಯಿತು. ವಿಶ್ವಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆಯ ಪ್ರಮುಖರಾದ ಸುಧಾಕರ್ ತಟ್ಟಾಪುರ, ರಾಘವೇಂದ್ರ ತಟ್ಟಾಪುರ, ನವನೀತ್ ಸಿಡಿಯ, ಪ್ರತೀಕ್ ಸನ್ಯಾಸಿಕೊಡಿಗೆ, ಪ್ರವೀಣ್ ತಟ್ಟಾಪುರ, ಪ್ರಸಾದ್ ಸಿಡಿಯ, ಶ್ರೀರಾಮ್ ಮುಸ್ಸಿನಕೊಪ್ಪ, ಶಶಾಂಕ್ ಕಲ್ಲುಕೊಡಿಗೆ, ಹರೀಶ್ ಗಡಿಕಲ್, ಸುಮಂತ್ ತಟ್ಟಾಪುರ, ಮಿಥುನ್ ಕಲ್ಲುಕೊಡಿಗೆ, ರಾಜೇಶ್ ಕಲ್ಲುಕೊಡಿಗೆ, ನಂದೀಶ್ ತಟ್ಟಾಪುರ, ದಕ್ಷ ಬಿ ಆರ್ ಬೆಕ್ಕನೂರು, ಪ್ರಶಾಂತ್ ಸನ್ಯಾಸಿಕೊಡಿಗೆ, ರವಿ ಕುಪ್ಪಳಿ, ಸುಶ್ವಿತ್ ಕುಮಾರ್, ನಿಶಾನಿ, ನಿಸರ್ಗ ಇತರರು ಇದ್ದರು.

Leave A Reply

Your email address will not be published.

error: Content is protected !!