ಮಲೆನಾಡಿನಲ್ಲಿ ವರುಣನ ಅಬ್ಬರ ; ಹಲವೆಡೆ ಅನಾಹುತ
ತೀರ್ಥಹಳ್ಳಿ: ಆರಿದ್ರಾ ಮಳೆ ಆರ್ಭಟಕ್ಕೆ ಹಲವೆಡೆ ಅನಾಹುತಗಳು ಸಂಭವಿಸಿದ್ದು ತಾಲೂಕಿನ ಕೆಲವೆಡೆ ಮನೆ, ಗೋಡೆ, ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಸಾಲ್ಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟಗಾರು ಗ್ರಾಮದ ವಿಜಯ ವಿಠಲ ನಾಯಕ್ ಎಂಬುವರ ಮನೆ ಮೇಲೆ ಭಾರಿ ಗಾತ್ರದ ಮರ ಉರುಳಿ ಬಿದ್ದಿದ್ದು ಮನೆಗೆ ತೀವ್ರ ರೀತಿಯಲ್ಲಿ ಹಾನಿಯಾಗಿದೆ.

ಬಾಂಡ್ಯ ಕುಕ್ಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಟೆ ಜನಗಲ್ ಗ್ರಾಮದ ವೇದ ಎಂಬುವರ ಮನೆಯ ಕಡೆ ಕುಸಿದು ಬಿದ್ದಿದೆ. ಇನ್ನು ಶೇಡ್ಗಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮನಹಳ್ಳಿ ಗ್ರಾಮದ ಸರೋಜಾ ಎಂಬುವರಿಗೆ ಸೇರಿದ ಜಾನುವಾರು ಕೊಟ್ಟಿಗೆ ಕುಸಿದು ಬಿದ್ದಿದ್ದು ಕೊಟ್ಟಿಗೆ ಕುಸಿತದಿಂದ ಜಾನುವಾರುಗಳಿಗೂ ಪೆಟ್ಟಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ತುಂಗಾ ನದಿಯ ನೀರಿನ ಮಟ್ಟವು ಕೂಡ ಏರಿಕೆಯಾಗುತ್ತಿದೆ.