ವಿದ್ಯುತ್ ಶಾಕ್ ; ದೇವಸ್ಥಾನಕ್ಕೆ ಹೊರಟಿದ್ದ ವೃದ್ದೆ ಸಾವು !
ತೀರ್ಥಹಳ್ಳಿ : ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಹೊರಟಿದ್ದ ವೃದ್ದೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನ ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗುಂಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕಗ್ಗುಂಡಿ ಗ್ರಾಮದ ವರಮಹಾಲಕ್ಷ್ಮಿ (73) ಮೆಸ್ಕಾಂ ಇಲಾಖೆಯ ಎಡವಟ್ಟಿಗೆ ಬಲಿಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಕಗ್ಗುಂಡಿಗೆ ಬಂದಿದ್ದ ಅವರು ಬೆಂಗಳೂರಿನಲ್ಲಿ ಮಕ್ಕಳ ಜೊತೆಗೆ ವಾಸವಾಗಿದ್ದರು. ಮನೆಯ ಅವರಣಕ್ಕೆ ನಿರ್ಮಿಸಿಕೊಂಡಿದ್ದ ಬೇಲಿಗೆ ವಿದ್ಯುತ್ ತಂತಿ ತುಂಡಾಗಿ ಮನೆ ಬಿದ್ದ ಪರಿಣಾಮ ವೃದ್ದೆಗೆ ವಿದ್ಯುತ್ ತಗಲಿದೆ. ಸೋಮವಾರ ರಾತ್ರಿ ಮಳೆಬಿದ್ದ ಪರಿಣಾಮ ವಿದ್ಯುತ್ ತಂತಿ ಕಟ್ ಆಗಿತ್ತು. ವಿದ್ಯುತ್ ತಂತಿ ತುಂಬಾ ಹಳೆಯದಾದ ಪರಿಣಾಮ ಲೈನ್ ಕಟ್ ಆಗಿರಬಹುದು ಎಂದು ಹೇಳಲಾಗಿದೆ.
ಮಂಗಳವಾರ ಬೆಳಗ್ಗೆ ದೇವಸ್ಥಾನಕ್ಕೆ ಪೂಜೆಗೆಂದು ಹೊರಡುವುವಾಗ ಗೇಟ್ ಸ್ಪರ್ಶಿಸಿದಾಗ ವಿದ್ಯುತ್ ಶಾಕ್ ಹೊಡೆದಿದೆ. ಶಾಕ್ ಹೊಡೆಯುತ್ತಿದ್ದಂತೆ ರಕ್ಷಿಸಲು ಬಂದ ವರಮಹಾಲಕ್ಷ್ಮಿ ಮಕ್ಕಳಿಗೂ ವಿದ್ಯುತ್ ತಗಲಿದೆ. ಅದೃಷ್ಟವಶಾತ್ ಇವರು ಪಾರಾಗಿದ್ದಾರೆ.

ಸ್ಥಳೀಯರಾದ ಪ್ರಶಾಂತ್ ಅವರ ಸಮಯ ಪ್ರಜ್ಞೆ ಯಿಂದ ದೊಡ್ಡ ಅನಾಹುತ ತಪ್ಪಿದ್ದರು ಅಷ್ಟರಲ್ಲಿ ವರಮಹಾಲಕ್ಷ್ಮಿ ಸಾವನ್ನಪ್ಪಿದ್ದರು ಎನ್ನಲಾಗಿದೆ.