Categories: Thirthahalli

ನನ್ನ ಕಣ್ಣ ಎದುರೆ ಇನ್ನೊಬ್ಬ ಕಾರ್ಯಕರ್ತನನ್ನು ಬೆಳೆಸಬೇಕು ಎಂದುಕೊಂಡಿದ್ದೆ ಆದರೆ….

ತೀರ್ಥಹಳ್ಳಿ : ನನ್ನ ಕಣ್ಣ ಎದುರೆ ಇನ್ನೊಬ್ಬ ಕಾರ್ಯಕರ್ತನನ್ನು ಬೆಳೆಸಬೇಕು ಎಂದುಕೊಂಡಿದ್ದೆ ಆದರೆ ಪಕ್ಷದ ಹಿರಿಯರು ಇದೊಂದು ಚುನಾವಣೆಯಲ್ಲಿ ನೀವೇ ಇರಬೇಕು ಎಂದು ಹೇಳಿದ ಕಾರಣಕ್ಕೆ ಒಪ್ಪಬೇಕಾಯಿತು. ನಾನು ಕಾರ್ಯಕರ್ತರನ್ನು ನಗಣ್ಯ ಮಾಡಿ ಮುಂದೆ ಹೋಗುವವನಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಶನಿವಾರ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಮಾತನಾಡಿ, ನಮ್ಮಲ್ಲಿ ಪ್ರಾಮಾಣಿಕ ಕಾರ್ಯಕರ್ತರ ತಂಡ ಇದೆ. ನಮ್ಮ ಒಬ್ಬೊಬ್ಬ ಕಾರ್ಯಕರ್ತ ತಾನೇ ಶಾಸಕ ಎನ್ನುವ ರೀತಿ ಕೆಲಸ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರಿಬ್ಬರೂ ಒಂದಾಗಿದ್ದಾರೆ ಎಂಬ ಬಗ್ಗೆ ಗೊಂದಲ ನಮ್ಮ ಕಾರ್ಯಕರ್ತರಲ್ಲಿ ಇತ್ತು. ಆದರೆ ಅದರಿಂದ ಅವರಿಗೆ ಏನು ಪ್ರಯೋಜನವಾಗಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಮೂಲಕ ಅಧಿಕಾರಕ್ಕೆ ಬಂದಿದೆ. ಈ ಮೋಸದ ಕಾರ್ಡ್‌ನಿಂದ ಅವರು ಗೆದ್ದಿದ್ದಾರೆ. ಇಷ್ಟು ವರ್ಷ ಈ ದೇಶವನ್ನು ಆಳಿದ ಕಾಂಗ್ರೆಸ್ ಈ ರೀತಿ ಕೀಳು ಮಟ್ಟಕ್ಕೆ ಇಳಿದಿದೆ. ಬಡವರನ್ನು ಮಾನಸಿಕವಾಗಿ ಭಿಕ್ಷುಕರನ್ನಾಗಿ ಕಾಂಗ್ರೆಸ್ ಪಕ್ಷ ಮಾಡಿದೆ. ಸಾಧನೆ ಹೇಳಿಕೊಳ್ಳುವಂತಹ ಯಾವ ಕೆಲಸವನ್ನು ಅವರು ಮಾಡಿಲ್ಲ. ಅವರಿಗೆ ಮುಖದಲ್ಲಿ ಗೆಲುವಿಲ್ಲ. ಸುಳ್ಳು ಭರವಸೆ ಮಾಡಿ ಗೆದ್ದಿದ್ದಾರೆ. ಈಗಾಗಲೇ ಕರೆಂಟ್ ಬಿಲ್ ಕಟ್ಟಲ್ಲ ಎಂದು ಜನ ಸ್ಟ್ರೈಕ್ ಮಾಡುತ್ತಿದ್ದಾರೆ. ಇದರಿಂದ ಮೆಸ್ಕಾಂ ಸಿಬ್ಬಂದಿ ನಮಗೆ ಸಂಬಳ ಸಿಗುತ್ತಾ ಅಂತ ಕೇಳುತ್ತಿದ್ದಾರೆ.
ಇವರ ಕಾಲದಲ್ಲಿ ಕೇವಲ 3 ರಿಂದ 4 ಗಂಟೆ ಕರೆಂಟ್ ಕೊಡ್ತಾ ಇದ್ರೂ ಈಗ ಉಚಿತ ಕರೆಂಟ್ ಕೊಡ್ತಾರಂತೆ ಎಂದು ಲೇವಡಿ ಮಾಡಿದರು.

ಮಹಿಳೆಯರಿಗೆ 2 ಸಾವಿರ ಕೊಡುತ್ತೇವೆ ಎಂದು ಹೇಳಿ ಅತ್ತೆ – ಸೊಸೆಗೆ ಜಗಳ ಹಚ್ಚಿ ಹಾಕಿದ್ದಾರೆ. ಕುಟುಂಬ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಬಸ್ ಟಿಕೆಟ್ ಕೊಡುವುದಿಲ್ಲ ಎಂದು ಮಹಿಳೆಯರು ಗಲಾಟೆ ಮಾಡುತ್ತಿದ್ದಾರೆ. ಅಕ್ಕಿಯ ದುಡ್ಡನ್ನು ಕೇಂದ್ರ ಸರ್ಕಾರ ಕೊಡುತ್ತದೆ. ಇವರೇನು ಉಚಿತ ಕೊಡುವುದು. ಕಾಂಗ್ರೆಸ್ ನವರು ಆದಷ್ಟು ಬೇಗ ಗ್ಯಾರಂಟಿ ಕೊಡದಿದ್ದರೆ ಜನರು ಬೀದಿಗೆ ಇಳಿಯುತ್ತಾರೆ. ಬೇರೆಯವರ ಜೊತೆ ಜಗಳ ಮಾಡುವ ಬದಲು ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ರವರ ಜೊತೆ ಜಗಳ ಮಾಡಿ ಎಂದರು.

ಈಗಾಗಲೇ ರಾಜ್ಯಾದ್ಯಂತ ಟೆಂಡರ್ ಆದ ಎಲ್ಲ ಕೆಲಸಗಳು ನಿಲ್ಲಿಸಲಾಗಿದೆ. ಬಿಟ್ಟಿ ಯೋಜನೆ ಮಾಡದಿದ್ದರೆ ಜನ ಬಿಡಲ್ಲ, ಹಣ ಕೊಡದಿದ್ದರೆ ಅಭಿವೃದ್ಧಿ ಯೋಜನೆಗಳು ಆಗುವುದಿಲ್ಲ. ಗ್ಯಾರಂಟಿ ಯೋಜನೆ ಮಾಡುವಾಗ ಅವರಿಗೂ ಸರ್ಕಾರ ಬರುತ್ತೆ ಎಂಬ ಗ್ಯಾರಂಟಿ ಇರಲಿಲ್ಲ. ಮೊದಲನೇ ಕ್ಯಾಬಿನೆಟ್ ನಲ್ಲೆ ಮಾಡುತ್ತೇವೆ ಅಂತ ಹೇಳಿದ್ರು ಈಗ ಮುಂದೆ ಹಾಕುತ್ತಿದ್ದಾರೆ. ಕೊಟ್ಟ ಆಶ್ವಾಸನೆ ಹೇಗೆ ಮಾಡುತ್ತಾರೆ ಎಂದು ಜನ ನೋಡುತ್ತಿದ್ದಾರೆ ಎಂದರು.

ಗೋ ಹತ್ಯೆ ನಿಷೇಧ ಮಾಡಿರುವುದನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಹಸುವಿಗೆ ನಾವು ತಾಯಿ ಸ್ಥಾನ ಕೊಡುತ್ತೇವೆ. ವೋಟ್ ಬ್ಯಾಂಕ್‌ಗಾಗಿ ಹಸುಗಳನ್ನು ಕಡಿಯಲು ಅವಕಾಶ ಕೊಡುತ್ತಿದ್ದಾರೆ.ಅಕ್ರಮವಾಗಿ ಗೋಸಾಗಾಣಿಕೆ ನಡೆಯುತ್ತಿತ್ತು. ಅಂತವರನ್ನು ಹಿಡಿಯಲು ಪೊಲೀಸ್ ನವರಿಗೆ ಫ್ರೀ ಅವಕಾಶ ಮಾಡಿಕೊಟ್ಟಿದ್ದೆ. ಆದರೆ ಈಗ ಪೊಲೀಸರನ್ನು ಕರೆಸಿ ವಾರ್ನಿಂಗ್ ಮಾಡುತ್ತಾರೆ ಎಂದರು.

ಇನ್ನು ಮತಾಂತರ ನಿಷೇಧ ಕಾಯಿದೆ ವಾಪಾಸ್ ತೆಗೆಯುತ್ತೇವೆ ಎಂದು ಹೇಳಿದ್ದಾರೆ. ಸಂವಿಧಾನದಲ್ಲಿ ಅವಕಾಶ ಇದೆ. ಆದರೆ ಒತ್ತಾಯ ಮಾಡುವಂತಿಲ್ಲ. 30 ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಮಾಡಿಸಿದ್ದರು. ಕಾಂಗ್ರೆಸ್ ನವರು ಅಭಿವೃದ್ಧಿ ಯೋಜನೆಗಳನ್ನು ಮಾಡುವುದನ್ನು ಬಿಟ್ಟು ಹಿಂದೂ ಧರ್ಮದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ಪಿಎಸ್‌ಐ ಸ್ಕ್ಯಾಮ್ ಬಗ್ಗೆ ಪ್ರಿಯಾಂಕಾ ಖರ್ಗೆ ಮಾತನಾಡುತ್ತಾರೆ. ಇದರ ಬಗ್ಗೆ ನಾನೇ ತನಿಖೆ ಮಾಡಿಸಿದ್ದು, RD ಪಾಟೀಲ್ ಇವರ ಮನೆಯಲ್ಲೆ ಇದ್ದವನು. ಪ್ರಿಯಾಂಕಾ ಖರ್ಗೆ ವಿಧಾನಸಭೆಯ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಳಿ ಚಾಲೆಂಜ್ ಮಾಡುತ್ತೇನೆ ನಿಮ್ಮದೇ ಸರ್ಕಾರ ಇದೆ ಅಲ್ವಾ ತನಿಖೆ ನೆಡೆಸಿ ಎಂದರು.

ಇನ್ನು ತಾಲೂಕಿನಲ್ಲಿ ಒಂದು ಸಾವಿರ ರಸ್ತೆಗಳನ್ನು ಮಾಡಿಸಿದ್ದೇನೆ. ಅವರ ಕಾಲದಲ್ಲಿ ಕೇವಲ ಎಸ್ ಸಿ ಎಸ್ ಟಿ ಕಾಲೋನಿಗೆ ಮಾತ್ರ ರಸ್ತೆ ಅಂದುಕೊಂಡಿದ್ದರು. ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕಾಲು ಸಂಕಕ್ಕಾಗಿ ನೂರು ಕೋಟಿ ಹಣ ನೀಡಿದ್ದೇವೆ. ನೂರು ಕಾಲು ಸಂಕಗಳು ನನ್ನ ಕ್ಷೇತ್ರದಲ್ಲಿ ಮಾಡಿಸಿದ್ದೇನೆ. ನನ್ನ ಗೆಲುವಿಗೆ ಪಕ್ಷದ ವಿವಿಧ ಮೋರ್ಚಾ ಗಳು ಕಾರ್ಯಕರ್ತರು ಶ್ರಮಿಸಿದ್ದಾರೆ. ಇಲ್ಲಿ ಎಂ ಎಲ್ ಎ ನಾನು, ಕಾನೂನು ಪ್ರಕಾರ ಕೆಲಸ ಮಾಡಬೇಕು ನಾನು ಇಲ್ಲಿ ಕೋಮು ದ್ವೇಷ ಮಾಡಲಿಲ್ಲ. ಎಲ್ಲಾ ಧರ್ಮದ ಜನರ ಕೆಲಸ ಮಾಡಿ ಕೊಟ್ಟಿದ್ದೇನೆ. ಅವರು ಒಂದು ಸಮುದಾಯದ ವಿರುದ್ಧ ಹೋಗುತ್ತಿದ್ದಾರೆ. ಆದರೆ ನನ್ನ ಕ್ಷೇತ್ರದ ಜನತೆ ಜೊತೆ ನಾನು ಇರುತ್ತೇನೆ ಇಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ. ನಾನು ರಾಜಕಾರಣವನ್ನು ವೃತ್ತಿಯಾಗಿ ಮಾಡಿಲ್ಲ ವ್ರತವಾಗಿ ಸ್ವೀಕಾರ ಮಾಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಬಾಳೆಬೈಲು ರಾಘವೇಂದ್ರ, ನವೀನ್ ಹೆದ್ದೂರು, ನಾಗರಾಜ್ ಶೆಟ್ಟಿ, ಬೇಗುವಳ್ಳಿ ಕವಿರಾಜ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Malnad Times

Recent Posts

28 ಸ್ಥಾನ ಗೆಲ್ಲದಿದ್ದರೆ ಅಪ್ಪ, ಮಗ ರಾಜೀನಾಮೆ ಕೊಡ್ತಾರಾ…? ಬೇಳೂರು

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…

6 hours ago

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

9 hours ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

10 hours ago

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

15 hours ago

ಕೆ.ಎಸ್. ಈಶ್ವರಪ್ಪ ಚುನಾವಣಾ ಕಚೇರಿ ಮುಂದೆ ವಾಮಾಚಾರ

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…

16 hours ago

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

1 day ago