Categories: Thirthahalli

ಯುವತಿಯರ ನಗ್ನ ಚಿತ್ರ ವೈರಲ್ ; NSUI ಸಂಘಟನೆಯಿಂದ ABVP ಅಧ್ಯಕ್ಷನ ವಿರುದ್ಧ ಕಾನೂನು ಕ್ರಮಕ್ಕೆ ಮನವಿ

ತೀರ್ಥಹಳ್ಳಿ : ಜೂ.16‌ ರಂದು ವಾಟ್ಸಾಪ್ ಗ್ರೂಪ್‌ಗಳಲ್ಲಿ ತೀರ್ಥಹಳ್ಳಿ ಪ್ರತಿಷ್ಠಿತ ಕಾಲೇಜು ಯುವತಿಯರ ಅಶ್ಲೀಲ ನಗ್ನ ಚಿತ್ರಗಳನ್ನು ಹರಿಬಿಡಲಾಗಿದ್ದು, ವಿಡಿಯೋದಲ್ಲಿ ಎ.ಬಿ.ವಿ.ಪಿ ವಿದ್ಯಾರ್ಥಿ ಸಂಘಟನೆಯ ತೀರ್ಥಹಳ್ಳಿ ಘಟಕದ ಅಧ್ಯಕ್ಷನೂ ಕೂಡ ಇದ್ದು ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಎನ್.ಎಸ್.ಯು.ಐ ಸಂಘಟನೆ ವತಿಯಿಂದ ಇಂದು ಡಿವೈಎಸ್ಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸಂಘಟನೆಗೆ ಸದಸ್ಯತ್ವ ಆಮಿಷ ತೋರಿಸಿ, ವಿಡಿಯೋ ಮಾಡಿ ದೇಹದ ನಗ್ನ ದೃಶ್ಯಗಳನ್ನು ಅಶ್ಲೀಲವಾಗಿ ಚಿತ್ರಿಸಿ ವೈರಲ್ ಮಾಡುವ ಬೆದರಿಕೆ ಒಡ್ಡಿ ಬ್ಲಾಕ್‌ಮೇಲ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ‌ ಕಂಡುಬಂದಿದೆ. ಇದೊಂದು ಸಮಾಜ ತಲೆತಗ್ಗಿಸುವ ಪ್ರಕರಣವಾಗಿದ್ದು ತಾವು ಸ್ವಯಂ ದೂರು
ದಾಖಲಿಸಿಕೊಂಡು ತನಿಖೆ ನಡಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

ಈ ರೀತಿಯ ಪ್ರಕರಣ ಮುಂದುವರೆದರೆ ಮರ್ಯಾದಸ್ಥ ಕುಟುಂಬದ ಹೆಣ್ಣುಮಕ್ಕಳು ಶಾಲಾ ಕಾಲೇಜುಗಳಿಗೆ ಬರುವುದು ಕಷ್ಟ ಸಾಧ್ಯವಾಗಲಿದ್ದು ಪೊಲೀಸ್ ಇಲಾಖೆ ಪ್ರಭಾವಿಗಳ ಪ್ರಭಾವಕ್ಕೆ ಮಣಿಯದೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿಕೊಳ್ಳುತ್ತೇವೆ ಎಂದು
ಎನ್.ಎಸ್.ಯು‌‌.ಐ ಸಂಘಟನೆಯಿಂದ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ ‌

ಈ ಸಂದರ್ಭದಲ್ಲಿ ಎನ್.ಎಸ್.ಯು‌.ಐ ಅಮರಾನಾಥ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಸುಜಿತ್ ಸಾಲಿಯನ್, ಅಶ್ವಲ್ ಗೌಡ ಶರತ್ ಮಾಳೂರು ಸೇರಿ ಅನೇಕರು ಇದ್ದರು.

Malnad Times

Recent Posts

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

2 hours ago

ಹೆಮ್ಮಕ್ಕಿ ಶ್ರೀ ಭದ್ರಕಾಳಿ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಜೀರ್ಣಾಷ್ಟಬಂಧ ಮತ್ತು ಬ್ರಹ್ಮ ಕಲಶಾಭಿಷೇಕ

ಕಳಸ : ತಾಲ್ಲೂಕಿನ ಹೆಮ್ಮಕ್ಕಿಯ ಶ್ರೀ ಭದ್ರಕಾಳಿ ಅಮ್ಮನವರಿಗೆ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಮೇ 01 ರಿಂದ ಮೇ…

5 hours ago

ರಜತ ಉತ್ಸವದ ಗಣಪತಿ ಮೂರ್ತಿಯನ್ನು ದೇವಸ್ಥಾನಕ್ಕೆ ಸಮರ್ಪಣೆ

ರಿಪ್ಪನ್‌ಪೇಟೆ: ನಾಳೆ ನಡೆಯುವ ಶ್ರೀಸಿದ್ದಿವಿನಾಯಕ ಸ್ವಾಮಿ ಶ್ರೀಮನ್ಮಹಾರಥೋತ್ಸವಕ್ಕೆ ಇಲ್ಲಿನ ಗಣೇಶಪ್ರಸಾದ್ ಹೋಟೆಲ್‌ನ ದಿ.ರೇವತಿ ಹೆಬ್ಬಾರ್ ಮತ್ತು ಸತ್ಯನಾರಾಯಣ ಹೆಬ್ಬಾರ್ ಸ್ಮರಣಾರ್ಥ…

5 hours ago

ರಾಜಕೀಯದ ಪರಿಜ್ಞಾನವೇ ಇಲ್ಲದವರು ಸಂಸತ್‌ಗೆ ಹೋದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹೇಗೆ ಸಾಧ್ಯ ; ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಕಾಂಗ್ರೆಸ್ ಅಭ್ಯರ್ಥಿಗೆ ಸ್ಥಳೀಯ ಭೌಗೋಳಿಕ ಹಿನ್ನಲೆಯ ಅರಿವೇ ಇಲ್ಲದೆ, ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಸರೇ ಇಲ್ಲದ…

6 hours ago

ಒಂದೇ ಪರವಾನಗಿಯಲ್ಲಿ ಎರಡು ಕಡೆ ನಾಟಾ ಸಾಗಾಟ ; ಅಕ್ರಮದ ಶಂಕೆ !?

ಹೊಸನಗರ : ತಾಲೂಕಿನ ಪುಣಜೆ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ನೂತನ ಮನೆಗೆ ಅಕ್ರಮ ನಾಟಾ ಸರಬರಾಜು ಆಗಿರುವುದಾಗಿ ಸ್ಥಳೀಯ…

7 hours ago

ಗೀತಕ್ಕ ಗೆಲುವು ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ, ಪ್ರಚಾರ ಸಭೆಯಲ್ಲಿ ನಟ ದುನಿಯಾ ವಿಜಯ್ ಹೇಳಿಕೆ

ಸಾಗರ: ಕ್ಷೇತ್ರದ ಅಭಿವೃದ್ಧಿಗೆ ಆಸರೆಯಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಕೊಡುಗೆ ಮರೆಯಕೂಡದು. ಇಲ್ಲಿ ಗೀತಕ್ಕ ಅವರ ಗೆಲುವು…

9 hours ago