ಸಂಸ್ಕೃತಿಯ ಸಂವರ್ಧನೆಯೊಂದಿಗೆ ಧರ್ಮಪೀಠಗಳ ಕಾರ್ಯ ಮುಖ್ಯ ; ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಶ್ರೀಗಳು

ರಿಪ್ಪನ್‌ಪೇಟೆ : ಧಾರ್ಮಿಕ ಮತ್ತು ಚಾರಿತ್ರಿಕ ಉತ್ತೃಷ್ಟ ಪರಂಪರೆಯು ನಮ್ಮ ಸಂಸ್ಕೃತಿಯ ಭಗವೇ ಅಗಿದೆ. ರಾಷ್ಟ್ರದ ಸಂಸ್ಕೃತಿ ಸಂವರ್ಧನೆ ಧರ್ಮ ಪೀಠಗಳ ಪರಮ ಕರ್ತವ್ಯವಾಗಿದೆ ಎಂದು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಶ್ರೀಶಿವಲಿಂಗೇಶ್ವರ ಬೃಹನ್ಮಠದಲ್ಲಿ ಆಯೋಜಿಸಲಾದ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಾಜಕ್ಕೆ ಮಠಗಳು ಹತ್ತಿರವಾಗಬೇಕು ಮಠಗಳು ಸಮಾಜಮುಖಿ ಕಾರ್ಯದೊಂದಿಗೆ ಭಕ್ತರ ಹೃದಯ ಸಿಂಹಾಸನದಲ್ಲಿ ನೆಲಸುವಂತಾದಾಗ ಮಾತ್ರ ಮಠಗಳ ಶ್ರೀಮಂತವಾಗುವುದರಲ್ಲಿ ಕೋಣಂದೂರು ಮಠ ಸಾಕ್ಷಿಕರಿಸುತ್ತದೆಂದರು.

ಶಾಸಕ ಆರಗ ಜ್ಞಾನೇಂದ್ರ ಶಿವಲಿಂಗೇಶ್ವರ ನಿತ್ಯ ಪಂಚಾಂಗವನ್ನು ಬಿಡುಗಡೆಗೊಳಿಸಿ ಮಾತನಾಡಿ, ಕೇವಲ ಕೆಲವೇ ವೀರಶೈವ ಲಿಂಗಾಯ್ತಿ ಮಠಗಳು ನಮ್ಮ ತೀರ್ಥಹಳ್ಳಿ ಕ್ಷೇತ್ರದಲ್ಲಿದ್ದರೂ ಕೂಡಾ ಮೂರು ವೀರಶೈವ ಮಠಗಳಿದ್ದರೂ ಕೂಡಾ ಜಾತಿ ಬೇದಭಾವನೆ ತೊರದೆ ಎಲ್ಲ ಧರ್ಮದವರನ್ನು ಸಾಮರಸ್ಯದಿಂದ ಕಾಣುವ ಮೂಲಕ ಸಮಾಜ ಧರ್ಮ ಸಂಘಟನೆಯನ್ನು ಮಾಡುವುದರೊಂದಿಗೆ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕಾಣುವಂತೆ ವೀರಶೈವ ಲಿಂಗಾಯಿತ ಮಠಗಳು ಮಾಡುವುದರೊಂದಿಗೆ ನಮ್ಮ ಈ ಬೆಳವಣಿಗೆಗೆ ಸ್ಫೂರ್ತಿದಾಯಕವಾಗಿದ್ದಾರೆಂದರು.

ಇದೇ ಸಂದರ್ಭದಲ್ಲಿ ಮಠದಿಂದ ಕೊಡಮಾಡುವ ಶ್ರೀಶಿವಲಿಂಗಶ್ರೀ ಪ್ರಶಸ್ತಿಗೆ ಭಾಜನರಾದ ನಾಟಿ ವೈದ್ಯ ಶಿವಣ್ಣಗೌಡ್ರು ಮತ್ತು ಅಕ್ಷಯ ಬ್ಯಾಂಕ್ ಅಧ್ಯಕ್ಷ ದಿನೇಶ್ ತಟ್ಟೆಕೊಪ್ಪ ಹಾಗೂ ರಾಣೆಬೆನ್ನೂರು ಸೋಮಶೇಖರ ಈರಪ್ಪ ಹಿರೇಬಿದರಿ ಹಾಗೂ ರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾಗಿ ಬಾಗವಹಿಸಿದ ಕುಕ್ಕಳಲೇ ಶ್ರೀ ಜ್ಞಾನ ನಾಗಭೂಷಣ ಗುರುರಕ್ಷೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಧರ್ಮ ಸಮಾರಂಭದಲ್ಲಿ ಕ್ಯಾಸನೂರು ತೊಗರ್ಸಿ ಮಠದ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಸದಾಶಯ ನುಡಿ ಸೇವೆ ನೀಡಿದರು.

ಸಭೆಯಲ್ಲಿ ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ತೊಗರ್ಸಿ ಮಹಾಂತದೇಶಿಕೇಂದ್ರ ಶಿವಾಚಾರ್ಯರು, ಜಡೆಮಠದ ಮಹಾಂತ ಮಹಾಸ್ವಾಮಿಗಳು, ಮುಷ್ಟೂರು ರುದ್ರಮುನಿಶಿವಾಚಾರ್ಯರು, ಜಡೆಮಠದ ಅಮರೇಶ್ವರ ಶಿವಾಚಾರ್ಯರು, ಗುತ್ತಲ ಕಲ್ಮಠದ ಪ್ರಭು ಮಹಾಸ್ವಾಮಿಗಳು, ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಕೋಣಂದೂರು ಕೆ.ಆರ್.ಪ್ರಕಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಹಾರೋಹಿತ್ತಲು ಈಶ್ವರಪ್ಪಗೌಡ, ವಾಗೀಶ್‌ಸ್ವಾಮಿ, ಮುರುಗೇಂದ್ರ ತ್ಯಾರಂದೂರು, ಬೆಳಕೋಡು ಹಾಲಸ್ವಾಮಿಗೌಡರು ದೇವೇಂದ್ರಪ್ಪಗೌಡ ನೆವಟೂರು, ಚಂದ್ರಶೇಖರಪ್ಪಗೌಡ, ರಾಜಣ್ಣ ಹಂಸಬಾವಿ ಇನ್ನಿತರರು ಹಾಜರಿದ್ದರು.

ಕು.ಮೇಘನಾ ಕಾಳಶೆಟ್ಟಿಕೊಪ್ಪ ಪ್ರಾರ್ಥಿಸಿದರು. ಬೆಳಕೋಡು ಹಾಲಸ್ವಾಮಿಗೌಡರು ಸ್ವಾಗತಿಸಿದರು.
ಜೆ.ಜಿ.ಸದಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು‌. ಗೀತಾ ವಿ.ಮಠದ ಶಿವಯೋಗಿ ನಿರೂಪಿಸಿದರು. ಹೊನ್ನಾಳಿ ಡಾ.ವಿದುಷಿ ಪ್ರತಿಮ ನಿಜಗುಣ ಶಿವಯೋಗಿಸ್ವಾಮಿ ಇವರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಿತು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

3 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

3 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

3 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

3 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

3 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

4 days ago