Accident | ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

0 35

ತೀರ್ಥಹಳ್ಳಿ : ತಾಲೂಕಿನ ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ತೀರಳೆಬೈಲು ತಿರುವಿನಲ್ಲಿ ಕಾರೊಂದು ಪಲ್ಟಿ ಹೊಡೆದಿದ್ದು ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಮೂಡಿಗೆರೆಯಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಕಾರಿನಲ್ಲಿ ಚಾಲಕ ಮಾತ್ರ ಇದ್ದರು. ನಿದ್ದೆ ಮಂಪರಿನಿಂದ ಬ್ರೇಕ್ ಹಿಡಿಯಲಾಗದೆ ಕಾರು ಪಲ್ಟಿ ಹೊಡೆದಿದೆ ಎನ್ನಲಾಗಿದೆ.

ತಕ್ಷಣವೇ ಸ್ಥಳೀಯರು ಚಾಲಕನನ್ನು ಕಾರಿನಿಂದ ಹೊರ ತೆಗೆದಿದ್ದಾರೆ. ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Leave A Reply

Your email address will not be published.

error: Content is protected !!