ಶಿಕಾರಿಪುರ/ತೀರ್ಥಹಳ್ಳಿ : ಇಬ್ಬರು ವ್ಯಕ್ತಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಎರಡು ಪ್ರತ್ಯೇಕ ಘಟನೆ ವರದಿಯಾಗಿದೆ.
ಶಿಕಾರಿಪುರ ತಾಲ್ಲೂಕಿನ ಮಾಸೂರಿನ ಯುವಕನೋರ್ವ ಮದುವೆ ನಿಶ್ಚಿತಾರ್ಥ ಮುರಿದು ಬಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಂದು ವರ್ಷದ ಹಿಂದೆ ಶಿಕಾರಿಪುರ ತಾಲೂಕಿನ ಯುವತಿಯೊಂದಿಗೆ ನಿಶ್ವಿತಾರ್ಥವಾಗಿತ್ತು. ಯುವತಿಯ ತಂದೆ ಮದುವೆಗೆ ನಿರಾಕರಿಸಿದ ಕಾರಣ ಮುರಿದು ಬಿದ್ದಿತ್ತು. ಅಣ್ಣಪ್ಪ ಮೇ 10 ರಂದು ವಿಷ ಸೇವಿಸಿದ್ದನು. ಇಂದು ಬೆಳಿಗ್ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮತ್ತೊಂದು ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದ್ದು ಕೋಳಿ ಫಾರಂನಲ್ಲಿ ಕೆಲಸ ಮಾಡಿಕೊಂಡಿದ್ದ ಆದರ್ಶ ಎಂಬ ಯುವಕ ವಿಷ ಸೇವಿಸಿ ಸಾವು ಕಂಡಿದ್ದಾನೆ.
ಹುಂಚ ಸಮೀಪದ ಬನಶೆಟ್ಟಿಕೊಪ್ಪದ ಆದರ್ಶ (26) ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ. ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾನೆ. ಈತ ಕೋಣಂದೂರು ಬಳಿ ಕೋಳಿಫಾರಂಗೆ ಕೆಲಸಕ್ಕೆ ಹೋಗುತ್ತಿದ್ದನು ಎನ್ನಲಾಗಿದೆ.