Thirthahalli ; ತುಂಗಾ ಸೇತುವೆಯ ಕೆಳಗೆ ಮಹಿಳೆಯ ಮೃತದೇಹ ಪತ್ತೆ !
ತೀರ್ಥಹಳ್ಳಿ : ಪಟ್ಟಣದ ತುಂಗಾ ಸೇತುವೆ ಕೆಳ ಭಾಗದಲ್ಲಿ ವೃದ್ದೆಯೊಬ್ಬರ ಮೃತದೇಹ ಪತ್ತೆಯಾಗಿದ್ದು ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಪಟ್ಟಣದ ಸೊಪ್ಪುಗುಡ್ಡೆಗೆ ಡಾಕಮ್ಮ (80) ತಮ್ಮ ಮಗಳ ಮನೆಗೆ ಬಂದಿದ್ದರು ಎನ್ನಲಾಗಿದ್ದು ತುಂಗಾ ಸೇತುವೆ ಸಮೀಪ ಯಾಕೆ ಬಂದರು ಎಂದು ತಿಳಿದು ಬಂದಿಲ್ಲ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.