Thirthahalli | Congress | Kimmane Rathnakar | Karnataka Assembly Election | ಸಂಧಾನ ಸಭೆ ಸಕ್ಸಸ್ ; ತೀರ್ಥಹಳ್ಳಿ ಕಾಂಗ್ರೆಸ್ ಟಿಕೆಟ್ ಫೈನಲ್
ತೀರ್ಥಹಳ್ಳಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಈಗಾಗಲೇ ತನ್ನ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ. ಇತ್ತೀಚೆಗೆ ರಿಲೀಸ್ ಆದ ಮೊದಲ ಪಟ್ಟಿಯಲ್ಲಿ ತೀರ್ಥಹಳ್ಳಿ ಟಿಕೆಟ್ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರಿಗೆ ನೀಡದೆ ಕಾಂಗ್ರೆಸ್ ಶಾಕ್ ಕೊಟ್ಟಿತ್ತು.
ಕ್ಷೇತ್ರದಲ್ಲಿ ಭಾರೀ ಪೈಪೋಟಿಯಿದ್ದ ಕಾರಣ ರತ್ನಾಕರ್ ರವರಿಗೆ ಟಿಕೆಟ್ ಕೊಡದೆ ಕಾಂಗ್ರೆಸ್ ತಡೆದಿತ್ತು. ಈಗ ಕೊನೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ರೆಬೆಲ್ ಕಾಂಗ್ರೆಸ್ಸಿಗರ ಬಂಡಾಯ ಶಮನ ಮಾಡಲಾಗಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಟಿಕೆಟ್ ಕಿಮ್ಮನೆ ರತ್ನಾಕರ್ ರವರಿಗೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇನ್ನು, ಸಂಧಾನ ಸಕ್ಸಸ್ ಬಳಿಕ ಮಾತಾಡಿದ ಕಿಮ್ಮನೆ ರತ್ನಾಕರ್, ನಾನು ಮಂಜುನಾಥ್ ಗೌಡ ಒಟ್ಟಿಗೆ ಕೆಲಸ ಮಾಡಲಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈ ಬಾರಿ ಒಬ್ಬರಿಗೆ ಎಂಎಲ್ಎ ಟಿಕೆಟ್, ಮತ್ತೊಬ್ಬರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಯಾರ ವಕ್ರ ದೃಷ್ಟಿಯೂ ಬೀಳದಿರಲಿ, ಇಬ್ಬರು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ನನ್ನದೇನು ಡಿಮ್ಯಾಂಡ್ ಇಲ್ಲ. ಟಿಕೆಟ್ ವಿಚಾರ ಅಧ್ಯಕ್ಷರಿಗೆ ಬಿಟ್ಟಿದ್ದು. ಬಿಜೆಪಿ ಸೋಲಿಸೋದು ನಮ್ಮ ಗುರಿ. ನಮ್ಮ ಕ್ಷೇತ್ರದಲ್ಲಿ ಒಕ್ಕಲಿಗರ ವೋಟು ಜಾಸ್ತಿ, ಹೀಗಾಗಿ ಟಿಕೆಟ್ ಡಿ.ಕೆ ಶಿವಕುಮಾರ್ ತೀರ್ಮಾನಕ್ಕೆ ಬಿಟ್ಟಿದ್ದೇವೆ ಎಂದು ಮಂಜುನಾಥ್ ಗೌಡ ಹೇಳಿದ್ದಾರೆ.