Thirthahalli | Elephant | Forest Department | ಕೊನೆಗೂ ಹನಿಟ್ರ್ಯಾಪ್ ಮೂಲಕ ಬಲೆಗೆ ಬಿದ್ದ ಒಂಟಿ ಸಲಗ, ನಿಟ್ಟುಸಿರು ಬಿಟ್ಟ ತೀರ್ಥಹಳ್ಳಿ ಜನತೆ

0 0

ತೀರ್ಥಹಳ್ಳಿ: ತಾಲೂಕಿನಲ್ಲಿ ಕಳೆದ ನಾಲ್ಕು ತಿಂಗಳಿಂದ ಪಟ್ಟಣ ಮತ್ತು ತಾಲೂಕಿನ ದೇವಂಗಿ, ಗುಡ್ಡೆಕೊಪ್ಪ, ತುಂಬೇಸರ, ಅಂಥಿ, ಬಳಗಟ್ಟೆ ಭಾಗದಲ್ಲಿ ಹಾವಳಿ ಕೊಡುತ್ತಿದ್ದ ಕಾಡಾನೆಯನ್ನು ತಡ ರಾತ್ರಿ ಹಾರೋಗೋಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳೂರು ಗುಡ್ಡದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಕಾಡಾನೆಯನ್ನು ಹಿಡಿಯಲು ಸಕ್ರೆಬೈಲು ಆನೆ ಬಿಡಾರದಿಂದ ನಾಲ್ಕೈದು ಆನೆ ತರಿಸಿ ಸರಿ ಸುಮಾರು 9ದಿನಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಕೊನೆಗೂ ಹನಿಟ್ರ್ಯಾಪ್ ಗೆ ಕಾಡಾನೆ ಸಿಕ್ಕಿ ಹಾಕಿಕೊಂಡಿದ್ದು ಸೆರೆ ಹಿಡಿದ ಆನೆಯನ್ನು ಬಂಡೀಪುರ ಅಭಯಾರಣ್ಯಕ್ಕೆ ರವಾನೆ ಮಾಡಲಾಗಿದೆ. ಇದರಿಂದ ತೀರ್ಥಹಳ್ಳಿ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಕಾಡಾನೆ ಹಿಡಿಯುವಲ್ಲಿ ತೀರ್ಥಹಳ್ಳಿ ಅರಣ್ಯ ಇಲಾಖೆ ಹಾಗೂ ಸಕ್ರೆಬೈಲು ತಂಡ ಯಶಸ್ವಿಯಾಗಿದ್ದು ಈ ತಂಡಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿನಂದನೆ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!