SSLC ಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ವೀರಶೈವ ಲಿಂಗಾಯಿತ ಪರಿಷತ್‌ನಿಂದ ಸನ್ಮಾನ

0
539

ರಿಪ್ಪನ್‌ಪೇಟೆ: ಎಸ್.ಎಸ್,ಎಲ್.ಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ 625 ಅಂಕಗಳಿಗೆ 616 ಅಂಕ ಪಡೆದು ಉತ್ತೀರ್ಣರಾದ ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಗುಡಿ ಗ್ರಾಮದ ರೈತ ಕುಟುಂಬದ ಕುಮಾರಿ ಸ್ಪಂದನ ಷಣ್ಮುಖಪ್ಪನವರಿಗೆ ಹೊಸನಗರ ತಾಲ್ಲೂಕ್ ವೀರಶೈವ-ಲಿಂಗಾಯಿತ ಪರಿಷತ್ ಅಧ್ಯಕ್ಷ ಮೆಣಸೆ ಆನಂದ ಮತ್ತು ಪದಾಧಿಕಾರಿಗಳು ಮನೆಗೆ ತೆರಳಿ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಹೊಸನಗರ ತಾಲ್ಲೂಕ್ ವೀರಶೈವ-ಲಿಂಗಾಯಿತ ಪರಿಷತ್ ಅಧ್ಯಕ್ಷ ಮೆಣಸೆ ಅನಂದ,ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ, ಸಚಿನ್‌ಗೌಡ, ಪ್ರವೀಣ ಎಂ. ಗುಡ್ಡೆಕೊಪ್ಪ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here