ರಿಪ್ಪನ್ಪೇಟೆ: ಕಳೆದ ಮಾರ್ಚ್ನಲ್ಲಿ ನಡೆದ ಎಸ್.ಎಸ್.ಎಲ್.ಸಿ.ಪಬ್ಲಿಕ್ ಪರೀಕ್ಷೆಯಲ್ಲಿ ರಿಪ್ಪನ್ಪೇಟೆ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶೇ. 100 ರಷ್ಟು ಫಲಿತಾಂಶ ಬಂದಿದೆ ಎಂದು ಮುಖ್ಯೋಪಾಧ್ಯಾಯ ರವಿ ಆರ್ ತಿಳಿಸಿದರು.
ಎಸ್.ಎಸ್.ಎಲ್.ಸಿ.ಪಬ್ಲಿಕ್ ವಾರ್ಷಿಕ ಪರೀಕ್ಷೆಗೆ 51 ವಿದ್ಯಾರ್ಥಿಗಳು ಹಾಜರಾಗಿದ್ದು 51 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇ. 100 ರಷ್ಟು ಫಲಿತಾಂಶ ಗಳಿಸುವುದರೊಂದಿಗೆ ಶಾಲೆಯ ಸಾಧನೆಯನ್ನು ಬೆಳಗಿಸಿದ್ದಾರೆಂದು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.
ಕುಮಾರಿ ದೀಪಿಕಾ ಜಿ.(609), ಅಬ್ದುಲ್ ಸಹಾಲ್ (604), ಜೀವನ್ ಬಿ.ಸಿ.(604), ಅಶುತೋಷ (600), ಸಂಜನಾ (591), ಶಶಾಂಕ ಪಿ.ವಿ (590) ಅನ್ವಿತಾ ವಿ.ಪಿ.(589) ಅನಿಶ್ ಎಂ.ಡಿ.(583), ಭಾನುಪ್ರಸಾದ್ (580), ಜಯಂತ್ ಹೆಚ್,ಜೆ.(576) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.
Related