ರಿಪ್ಪನ್ಪೇಟೆ: ಮಾರ್ಚ್ – ಏಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ.ಪಬ್ಲಿಕ್ ಪರೀಕ್ಷೆಯಲ್ಲಿ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಶೇಕಡಾ 64 ರಷ್ಟು ಫಲಿತಾಂಶ ಬಂದಿದೆ ಇದರೊಂದಿಗೆ ಶ್ರೀಗುರುಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇಕಡಾ 88 ರಷ್ಟು ಹಾಗೂ ಮೇರಿಮಾತಾ ಪ್ರೌಢಶಾಲೆ ಶೇಕಡಾ 87 ರಷ್ಟು ಫಲಿತಾಂಶ ಬಂದಿದೆ ಎಂದು ಸರ್ಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯ ಕೆಸವಿನಮನೆ ರತ್ನಾಕರ್ ಮತ್ತು ಬಸವೇಶ್ವರ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಚಂದ್ರಪ್ಪ ಮತ್ತು ಮೇರಿಮಾತಾ ಪ್ರೌಢಶಾಲೆ ಮುಖ್ಯೋಪಾದ್ಯಾಯ ಸಿಸ್ಟರ್ ಪಾತಿಮಾ ತಿಳಿಸಿದರು.
ರಿಪ್ಪನ್ಪೇಟೆ ಸರ್ಕಾರಿ ಪ್ರೌಢಶಾಲೆ:
163 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 105 ವಿದ್ಯಾರ್ಥಿಗಳಲ್ಲಿ ಎ ಪ್ಲಸ್ ಗ್ರೇಡ್ನಲ್ಲಿ 22 ಮತ್ತು ಪ್ರಥಮ ಶ್ರೇಣಿಯಲ್ಲಿ 56, ದ್ವಿತೀಯ ಶ್ರೇಣಿಯಲ್ಲಿ 21 ಹಾಗೂ ತೃತೀಯ ದರ್ಜೆಯಲ್ಲಿ 6 ಒಟ್ಟು 105 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದು ಆಂಗ್ಲ ಮಾಧ್ಯಮದಲ್ಲಿ ವಿನಯ್ ಬಿ.ಎಸ್ 616 ಕನ್ನಡ ಮಾಧ್ಯಮದಲ್ಲಿ ಭೂಮಿಕ 608 ನರೇಶ್ಚಂದ್ರು 606 ಹಾಗೂ ಹೆಚ್.ಎಂ.ವಿಮರ್ಶ 605 ಅಂಕಗಳಿಸಿದ್ದಾರೆಂದು ಸರ್ಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯ ಕೆಸವಿನಮನೆ ರತ್ನಾಕರ್ ವಿವರಿಸಿದರು.
ಶ್ರೀಗುರುಬಸವೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ:
25 ವಿದ್ಯಾರ್ಥಿಗಳು ಪರೀಕ್ಷೆ ಬರದಿದ್ದು 22 ವಿದ್ಯಾರ್ಥಿಗಳಲ್ಲಿ ಎ ಪ್ಲಸ್ ಗ್ರೇಡ್ 12 ಮತ್ತು ಪ್ರಥಮ ಶ್ರೇಣಿಯಲ್ಲಿ 9 ದ್ವಿತೀಯ ದರ್ಜೆಯಲ್ಲಿ 1 ಉತ್ತೀರ್ಣಾರಾಗಿದ್ದು ನಿರ್ಮಲ ಎಂಬ ವಿದ್ಯಾರ್ಥಿನಿ 606 ಅಂಕಗಳಿಸಿದ್ದಾಳೆಂದು ಮುಖ್ಯೋಪಾಧ್ಯಾಯ ಚಂದ್ರಪ್ಪ ತಿಳಿಸಿದರು.
ಮೇರಿಮಾತಾ ಪ್ರೌಢಶಾಲೆ:
41 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಬರೆದಿದ್ದು ಎ ಪ್ಲಸ್ ಗ್ರೇಡ್ನಲ್ಲಿ 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 19 ಹಾಗೂ ದ್ವಿತೀಯ ಶ್ರೇಣಿಯಲ್ಲಿ 7 ಮತ್ತು ತೃತೀಯ ದರ್ಜೆಯಲ್ಲಿ 1 ಸೇರಿ ಒಟ್ಟು 37 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಮುಖ್ಯೋಪಾಧ್ಯಾಯರಾಗ ಸಿಸ್ಟರ್ ಪಾತಿಮಾ ಹೇಳಿದರು.
ಅರಸಾಳು ಸರ್ಕಾರಿ ಪ್ರೌಢಶಾಲೆ:
21 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಬರೆದಿದ್ದು ಎ ಪ್ಲಸ್ ಗ್ರೇಡ್ನಲ್ಲಿ 3 ಪ್ರಥಮ ಶ್ರೇಣಿಯಲ್ಲಿ 13 ಹಾಗೂ ದ್ವಿತೀಯ 1 ಒಟ್ಟು 17 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇಕಡಾ 81 ರಷ್ಟು ಫಲಿತಾಂಶ ಬಂದಿದೆ ಎಂದು ಅರಸಾಳು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸರಿತಾ ತಿಳಿಸಿದರು.
ಬೆಳ್ಳೂರು ಸರ್ಕಾರಿ ಪ್ರೌಢಶಾಲೆ :
ಸಮೀಪದ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ 19 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ವಾರ್ಷೀಕ ಪರೀಕ್ಷೆಗೆ ಕುಳಿತ್ತಿದ್ದು 18 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇಕಡಾ 95 ರಷ್ಟು ಫಲಿತಾಂಶ ಗಳಿಸಿದ್ದಾರೆಂದು ಮುಖ್ಯೋಪಾಧ್ಯಾಯರು ತಿಳಿಸಿದರು.
ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ:
ಸಮೀಪದ ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆಯಲ್ಲಿ 46 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು 42 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇಕಡಾ 91.30 ರಷ್ಟು ಫಲಿತಾಂಶ ಗಳಿಸಿದ್ದಾರೆಂದು ಎ ಪ್ಲಸ್ ಗ್ರೇಡ್ನಲ್ಲಿ 10 ಪ್ರಥಮ ಶ್ರೇಣಿಯಲ್ಲಿ 26 ದ್ವಿತೀಯ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಯ ವಿದ್ಯಾರ್ಥಿನಿ ಬಿಂದು ಟಿ 600 ಅಂಕಗಳಿಸಿದ್ದು ಈಕೆಯ ಸಾಧನೆಗೆ ಮುಖ್ಯೋಪಾಧ್ಯಾಯರಾದ ಎನ್.ಡಿ.ಹೆಗಡೆ ಮತ್ತು ಶಿಕ್ಷಕ ವೃಂದ ಎಸ್.ಡಿ.ಎಂ.ಸಿಯವರು ಅಭಿನಂದಿಸಿದ್ದಾರೆ.
Related