SSLC ರಿಸಲ್ಟ್ ; ಶೇ. 84.60 ಫಲಿತಾಂಶದೊಂದಿಗೆ ಶಿವಮೊಗ್ಗ ಜಿಲ್ಲೆಗೆ ‘A’ ಗ್ರೇಡ್ ಸ್ಥಾನ

0
1253

ಶಿವಮೊಗ್ಗ: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಇಂದು ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದು ಜಿಲ್ಲೆಯಲ್ಲಿ ಶೇ.84.60 ಫಲಿತಾಂಶ ದೊರೆಯುವ ಮೂಲಕ ಎ ಗ್ರೇಡ್ ಸ್ಥಾನ ಪಡೆದಿದೆ.

ಜಿಲ್ಲೆಯಲ್ಲಿ ಈ ಬಾರಿ ಒಟ್ಟು 23,136 ಜನ‌ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 19,574 ಜನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯ 7 ತಾಲೂಕುಗಳ ಪೈಕಿ ತೀರ್ಥಹಳ್ಳಿಯಲ್ಲಿ 1654 ವಿದ್ಯಾರ್ಥಿಗಳಲ್ಲಿ 1516 ಜನ ಮಕ್ಕಳು ತೇರ್ಗಡೆಯಾಗಿದ್ದು ಶೇ.91.66 ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ತೀರ್ಥಹಳ್ಳಿ ತಾಲ್ಲೂಕು ಪ್ರಥಮ ಸ್ಥಾನ ಪಡೆದಿದೆ.

ಹೊಸನಗರದಲ್ಲಿ 1613 ವಿದ್ಯಾರ್ಥಿಗಳಲ್ಲಿ 1436 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.89.03 ರಷ್ಟು ಫಲಿತಾಂಶ ಬಂದರೆ, ಸಾಗರದಲ್ಲಿ 3043 ವಿದ್ಯಾರ್ಥಿಗಳಲ್ಲಿ 2657 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 87.32 ರಷ್ಟು ಫಲಿತಾಂಶ ಬಂದಿದೆ. ಸೊರಬದಲ್ಲಿ 2592 ವಿದ್ಯಾರ್ಥಿಗಳಲ್ಲಿ 2188 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ. 84.41 ಮಕ್ಕಳು ಉತ್ತೀರ್ಣರಾಗಿದ್ದಾರೆ.

ಭದ್ರಾವತಿಯಲ್ಲಿ 4186 ವಿದ್ಯಾರ್ಥಿಗಳಲ್ಲಿ 3497 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.83.54 ರಷ್ಟು ಫಲಿತಾಂಶ ಬಂದಿದೆ. ಶಿವಮೊಗ್ಗದಲ್ಲಿ 6671 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಇದರಲ್ಲಿ 5501 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 82.46 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶಿಕಾರಿಪುರದಲ್ಲಿ 3377 ವಿದ್ಯಾರ್ಥಿಗಳಲ್ಲಿ 2779 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.82.29 ಫಲಿತಾಂಶ ಬಂದಿದೆ.

ಇನ್ನೂ 625 ಅಂಕಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಜಿಲ್ಲೆಯಲ್ಲಿ 87 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿದ್ದು ಇದರಲ್ಲಿ ಭದ್ರಾವತಿಯಲ್ಲಿ 18 ಶಾಲೆ ಶೇ.100 ರಷ್ಟು ಅಂಕ ಪಡೆದರೆ, ಹೊಸನಗರದಲ್ಲಿ 6 ಶಾಲೆ, ಸಾಗರದಲ್ಲಿ 12 ಶಾಲೆ, ಶಿಕಾರಿಪುರದಲ್ಲಿ 13 ಶಾಲೆ, ಶಿವಮೊಗ್ಗದಲ್ಲಿ 17 ಶಾಲೆ, ಸೊರಬದಲ್ಲಿ 10 ಶಾಲೆ, ತೀರ್ಥಹಳ್ಳಿಯಲ್ಲಿ 11 ಶಾಲೆ ಶೇ.100 ರಷ್ಟು ಫಲಿತಾಂಶ ಪಡೆದಿವೆ.

ಜಾಹಿರಾತು

LEAVE A REPLY

Please enter your comment!
Please enter your name here