20.6 C
Shimoga
Friday, December 9, 2022

ಹಾಡಹಗಲೇ ನಿವೃತ್ತ ಎಎಸ್ಐ ಮನೆಯ ಬಾಗಿಲು ಮುರಿದು ₹ 10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು !


ರಿಪ್ಪನ್‌ಪೇಟೆ: ನಿವೃತ್ತ ಎಎಸ್‌ಐ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ರಿಪ್ಪನ್‌ಪೇಟೆಯಲ್ಲಿ ಭಾನುವಾರ ಹಾಡಹಗಲೇ ನಡೆದಿದೆ.


ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿ ವಾಸವಿರುವ ನಿವೃತ್ತ ಎಎಸ್‌ಐ ಈಶ್ವರಪ್ಪ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಈಶ್ವರಪ್ಪ ಮನೆಗೆ ಬೀಗ ಹಾಕಿಕೊಂಡು ತಮ್ಮ ಪತ್ನಿಯ ಜೊತೆ ಬೆಳಗ್ಗೆ 9 ಗಂಟೆ ಸುಮಾರಿಗೆ ತೀರ್ಥಹಳ್ಳಿ ತಾಲ್ಲೂಕಿನ ಗುಂಡಿಬೈಲು ಗ್ರಾಮದ ಸಂಬಂಧಿಕರ ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಮನೆಗೆ ವಾಪಾಸ್ಸು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.


ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ 190 ಗ್ರಾಂ ಚಿನ್ನ ಹಾಗೂ ಬೆಳ್ಳಿಯ ಅಭರಣ 17 ಸಾವಿರ ರೂ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.


ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.


ಸುತ್ತಮುತ್ತ ಕಳ್ಳತನ ಭಯಭೀತರಾದ ನಾಗರೀಕರು:

ರಾಜ್ಯ ಗೃಹ ಸಚಿವರ ಸ್ವಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮೂರ್ನಾಲ್ಕು ಕಾಲೇಜುಗಳ ಬೀಗ ಮುರಿದು ಕಳ್ಳತನ ನಡೆದಿರುವ ಬೆನ್ನಲೇ ಹಾಡಹಗಲೇ ರಿಪ್ಪನ್‌ಪೇಟೆ ತೀರ್ಥಹಳ್ಳಿ ರಸ್ತೆಯ ನಿವಾಸಿ ನಿವೃತ್ತ ಎಎಸ್‌ಐ ಈಶ್ವರಪ್ಪನವರ ಮನೆ ಕಳ್ಳತನ ಘಟನೆಯಿಂದಾಗಿ ನಾಗರೀಕರನ್ನು ಭಯಭೀತರನ್ನಾಗಿದೆ.


ಇನ್ನಾದರೂ ಪೊಲೀಸ್ ಇಲಾಖೆ ಇಂತಹ ಕೃತ್ಯವನ್ನು ಭೇದಿಸಿ ನಾಗರೀಕರ ಭಯವನ್ನು ದೂರಮಾಡುವರೆ ಕಾದು ನೋಡಬೇಕಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!