ಬಾಳೆಹೊನ್ನೂರು ; ಒತ್ತುವರಿ ಮಾಡಿದ್ದ 33 ಎಕರೆ ಅರಣ್ಯ ಪ್ರದೇಶವನ್ನು ತೆರವು ಮಾಡಿರುವ ಘಟನೆ ಬಾಳೆಹೊನ್ನೂರು ಸಮೀಪದ ಹೊನ್ನಳ್ಳಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹೊನ್ನಳ್ಳಿಯಲ್ಲಿ 33 ಎಕರೆ ಒತ್ತುವರಿ ಮಾಡಿ ಕಾಫಿ ಬೆಳೆ ಬೆಳೆಯಲಾಗಿತ್ತು. ಆದರೆ, ಹೈಕೊರ್ಟ್ ಆದೇಶ ಮೇರೆಗೆ ಅರಣ್ಯ ಇಲಾಖೆ ವತಿಯಿಂದ 33 ಎಕರೆ ಒತ್ತುವರಿ ಮಾಡಿದ್ದ ಕಾಫಿ ತೋಟವನ್ನು ತೆರವು ಮಾಡಿದ್ದಾರೆ.

ಅರಣ್ಯ ಸಿಬ್ಬಂದಿಗಳಾದ ಎಸಿಎಫ್ ಮೋಹನ್ ಕುಮಾರ್, ಆರ್.ಎಫ್.ಒ. ಮಧುಕರ್, ಡಿ.ಆರ್.ಎಫ್.ಒ. ಆದಿತ್ಯರಾವ್, ಬಿ.ಎಫ್. ಕೃಷ್ಣಮೂರ್ತಿ ಬಾಳೆಹೊನ್ನೂರ್ ಮತ್ತು ಶೃಂಗೇರಿ ವಲಯ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.