ಮಕ್ಕಳಲ್ಲಿ ಏಕಾಗ್ರತೆಯ ಶಿಕ್ಷಣ ಅಗತ್ಯ ; ಹರೀಶ್

Written by Mahesha Hindlemane

Published on:

ರಿಪ್ಪನ್‌ಪೇಟೆ ; ಶಾಲೆಯಲ್ಲಿ ಪಾಠ ಪ್ರವಚನದ ಸಂದರ್ಭದಲ್ಲಿ ಮಕ್ಕಳು ಏಕಾಗ್ರತೆಯಿಂದ ಮನಸ್ಸನ್ನು ಕೇಂದ್ರಿಕರಿಸಿಕೊಂಡು ಅಭ್ಯಾಸ ಮಾಡಿದರೆ ಸಾಧನೆ ಮಾಡಲು ಸಾಧ್ಯವೆಂದು ಯೂತ್‌ಪಾರ್ ಸೇವಾ ಮತ್ತು ಟೆಕ್ನೋ ಇನ್ಸ್ಟ್ರಮೆಂಟ್ ಸಂಸ್ಥೆಯ ಅಧಿಕಾರಿ ಹರೀಶ್ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಯೂತ್‌ಪಾರ್ ಸೇವಾ ಮತ್ತು ಟೆಕ್ನೋ ಇನ್ಸ್ಟ್ರಮೆಂಟ್ ಸಂಸ್ಥೆಯ ಕೊಡುಗೆಯಾಗಿ ನೀಡಲಾದ ಬ್ಯಾಗ್ ಮತ್ತು ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿ, ಮಕ್ಕಳು ತಮ್ಮ ವ್ಯಾಸಂಗದಲ್ಲಿ ಗುರುಗಳು ಪಾಠ ಮಾಡುವಾಗ ಶ್ರದ್ದೆಯಿಂದ ಕೇಳಿಕೊಂಡು ಮನನ ಮಾಡಿಕೊಳ್ಳುವಂತೆ ತಿಳಿಸಿ, ಏಕಾಗ್ರತೆಯಿಂದ ಇದ್ದರೆ ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯವಾಗುವುದೆಂದರು.

ಯೂತ್‌ಪಾರ್ ಸೇವಾ ಮತ್ತು ಟೆಕ್ನೋ ಇನ್ಸ್ಟ್ರಮೆಂಟ್ ಸಂಸ್ಥೆಯ ವಸಂತನ್ ಬ್ಯಾಗ್ ಮತ್ತು ಶಿಕ್ಷಣ ಸಾಮಗ್ರಿಗಳನ್ನು ವಿತರಿಸಿ ಸರ್ಕಾರಿ ಶಾಲೆಗಳಿಗೆ ಸರ್ಕಾರ ಸಾಕಷ್ಟು ಯೋಜನೆಗಳ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರೂ ಕೂಡಾ ಪೋಷಕರ ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುತ್ತಾರೆ. ಕಾರಣ ಖಾಸಗಿ ಶಾಲೆಗಳ ವ್ಯಾಮೋಹ ಆ ಕಾರಣ ಸರ್ಕಾರಿ ಶಾಲೆಗೆ ಬರುವ ಮಕ್ಕಳು ಬಡವರು ಆದ್ದರಿಂದ ಆವರಿಗೆ ಹೆಚ್ಚಿನ ಸೌಲಭ್ಯಗಳು ದೊರೆಕುವಂತಾಗುವ ಮೂಲಕ ತಾವು ಹೆಚ್ಚು ಶ್ರಮ ವಹಿಸಿ ಉತ್ತೀರ್ಣಾರಾಗುವಂತಾಗಬೇಕು ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಏಕಾಗ್ರತೆ ಮುಖ್ಯವಾಗಬೇಕು ಎಂದರು.

ಮುಖ್ಯೋಪಾಧ್ಯಾಯ ಉಮೇಶ, ರೋಟರಿ ಕ್ಲಬ್ ರೋಟರಿಯನ್ ಆರ್. ಹೆಚ್.ದೇವದಾಸ ಆಚಾರ್, ಎಸ್.ಡಿ.ಎಂ.ಸಿ. ಸದಸ್ಯರಾದ ನಾಗೇಶ, ರಜಾಕ್, ಶಿಕ್ಷಕಿಯರಾದ ಅಂಬಿಕಾ ಸಿ, ಮೇಘನಾ, ಜಿ.ಪದ್ಮಾವತಿ ಇನ್ನಿತರರು ಹಾಜರಿದ್ದರು.

ಆಂಬಿಕಾ ಸಿ ಪ್ರಾರ್ಥಿಸಿದರು. ಉಮೇಶ ಸ್ವಾಗತಿಸಿದರು. ಮೇಘನಾ ನಿರೂಪಿಸಿ ವಂದಿಸಿದರು.

Leave a Comment