Mudigere | ಕಾಫಿ ತೋಟದಲ್ಲಿ ಮರಗಸಿ (ಮರದ ರೆಂಬೆ ಕತ್ತರಿಸುವುದು) ಮಾಡುವ ವೇಳೆ ವಿದ್ಯುತ್ ಶಾಕ್ (Current Shock) ತಗುಲಿ ಮರದಲ್ಲೇ ಕಾರ್ಮಿಕ (Labor) ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ (Kunnahalli) ಗ್ರಾಮದಲ್ಲಿ ಘಟನೆ ನಡೆದಿದೆ.
ಚಂದ್ರಪ್ಪ (45) ಮೃತ ದುರ್ಧೈವಿ. ಕಾಫಿ ತೋಟದಲ್ಲಿ ಬೆಳೆದಿರುವ ಸಿಲ್ವರ್ ಮರಗಳು ನೇರವಾಗಿ ಬೆಳೆಯುವ ಉದ್ದೇಶದಿಂದ ಮರಗಸಿ ಮಾಡಲಾಗುತ್ತದೆ. ಚಂದ್ರಪ್ಪ ಮರಗಸಿ ಮಾಡುವ ವೇಳೆ ತೋಟದ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಸಿಲುಕಿ ವಿದ್ಯುತ್ ಪ್ರವಹಿಸಿ ಮರದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರದಿಂದ ಬಿದ್ದು ಸಾವು !
Mudigere | ತಾಲ್ಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಮರಗಸಿ ಮಾಡುತ್ತಿದ್ದಾಗ ಮರದಿಂದ ಬಿದ್ದು ಸುನಿಲ್ (27) ಎಂಬುವರು ಮೃತಪಟ್ಟಿ ಘಟನೆ ಗುರುವಾರ ನಡೆದಿದೆ.
ಸಕಲೇಶಪುರ ತಾಲ್ಲೂಕಿನ ಕೌಡಳ್ಳಿ ಗ್ರಾಮದವರಾದ ಸುನಿಲ್, ತಾಲ್ಲೂಕಿನ ಲೋಕವಳ್ಳಿ ಗ್ರಾಮದ ತನ್ನ ಪತ್ನಿ ಮನೆಯಲ್ಲಿ ಇದ್ದುಕೊಂಡು ಸುತ್ತಲ ಪ್ರದೇಶದಲ್ಲಿ ತೋಟದ ಕೆಲಸಕ್ಕೆ ಹೋಗುತ್ತಿದ್ದರು.
ಬಿದರಹಳ್ಳಿ ಗ್ರಾಮದ ಜಯಮ್ಮ ಎಂಬುವವರ ತೋಟದಲ್ಲಿ ಮರಗಸಿ ಮಾಡುವಾಗ ಮರದಿಂದ ಬಿದ್ದಿದ್ದು, ತಕ್ಷಣವೇ ಅವರನ್ನು ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಸುನಿಲ್‌ಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಘಟನೆ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.