ರಿಪ್ಪನ್‌ಪೇಟೆ ; ಬೆಂಗಳೂರು–ತಾಳಗುಪ್ಪ ಇಂಟರ್‌ಸಿಟಿ ರೈಲಿಗೆ ಅರಸಾಳು ರೈಲು ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ.
ಈ ಹೊಸ ನಿಲುಗಡೆ ಅ.6, ಸೋಮವಾರದಿಂದ ಜಾರಿಗೆ ಬರುವುದಾಗಿ ರೈಲ್ವೆ ಇಲಾಖೆಯು ತಿಳಿಸಿದೆ. ಬೆಂಗಳೂರಿನಿಂದ ಮಧ್ಯಾಹ್ನ ಹೊರಡುವ ರೈಲು ರಾತ್ರಿ 8.20ಕ್ಕೆ ಅರಸಾಳಿಗೆ ಬಂದು, 8.21ಕ್ಕೆ ತಾಳಗುಪ್ಪದತ್ತ ಮುಂದುವರಿಯಲಿದೆ. ತಾಳಗುಪ್ಪದಿಂದ ಬೆಳಿಗ್ಗೆ ಹೊರಡುವ ರೈಲು ಅರಸಾಳಿಗೆ 6.19ಕ್ಕೆ ಬಂದು, 6.20ಕ್ಕೆ ಬೆಂಗಳೂರಿನತ್ತ ಹೊರಡಲಿದೆ.

ಹೊಸ ನಿಲುಗಡೆಯ ಮೂಲಕ ಅರಸಾಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ನೂರಾರು ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಸ್ಥಳೀಯರಿಂದ ಈ ನಿರ್ಧಾರವನ್ನು ಸ್ವಾಗತಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.