ಚೈತ್ರ ಚೇತನ ಕವನ ಸಂಕಲನ ಲೋಕಾರ್ಪಣೆ

Written by Mahesha Hindlemane

Published on:

ರಿಪ್ಪನ್‌ಪೇಟೆ : ಪಟ್ಟಣದಲ್ಲಿನ ಸಮಾಜಮುಖಿ ಚಿಂತಕ, ಸಾಹಿತಿ-ಲೇಖಕರಾದ ಮಂಜುನಾಥ್ ಎಂ. ಭಂಡಾರಿ ಅವರ ಸ್ವಯಂ ರಚಿತ “ಚೈತ್ರ ಚೇತನ” ಕವನ ಸಂಕಲನವನ್ನು ಅವರ ಸ್ವಗೃಹದಲ್ಲಿ ಬಂಧು-ಬಳಗ ಹಾಗೂ ಸಾಹಿತ್ಯಾಭಿಮಾನಿಗಳ ಸಮಕ್ಷಮದಲ್ಲಿ ಲೋಕಾರ್ಪಣೆ ಮಾಡಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

‘ಚೈತ್ರ ಚೇತನ’ ಕವನ ಸಂಕಲನವು ಜೀವನ, ಸಮಾಜ ಹಾಗೂ ಪ್ರಕೃತಿಯ ಬಗೆಗಿನ ಸೂಕ್ಷ್ಮ ಚಿಂತನೆಗಳನ್ನು ಆಳವಾಗಿ ಅನಾವರಣಗೊಳಿಸುವ ಪ್ರಯತ್ನವಾಗಿದ್ದು, ಸರಳ ಭಾಷಾಶೈಲಿ ಹಾಗೂ ಹೃದಯಸ್ಪರ್ಶಿ ಅಭಿವ್ಯಕ್ತಿಯು ಇದರ ವೈಶಿಷ್ಟ್ಯವಾಗಿದೆ.

ಕಾರ್ಯಕ್ರಮದಲ್ಲಿ ಉಡುಪಿ ಮೂಲದ ಸಾಹಿತ್ಯಾಸಕ್ತ ವಿಠ್ಠಲ್ ಎಸ್.ಬಿ, ರೋಹಿಣಿ, ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯ ತಜ್ಞ ವೈದ್ಯರು ಡಾ. ಚಂದ್ರಕಾಂತ್, ಶಕುಂತಲಾ ಚಂದ್ರಕಾಂತ್, ಮಂಜಯ್ಯ-ಉಷಾ, ಡಾ. ಖುಷಿ ಹಿರೇಮಠ್, ಡಾ. ಸುಮಂತ್, ಹರ್ಷ ಎಂ. ಹಿರೇಮಠ್, ಇಂಜಿನಿಯರ್ ಪದವೀಧರೆ ಚೇತನಾ ಎಂ. ಭಂಡಾರಿ, ಸಿಂಚನ ಎಂ. ಭಂಡಾರಿ, ಪತ್ನಿ ಗೀತಾ ಮಂಜುನಾಥ್, ಉಡುಪಿಯ ರಕ್ಷಿತ್ ಭಂಡಾರಿ, ಪ್ರಿಯ ಮಂಜುನಾಥ್, ಸ್ಮಿತಾ ಬಸವರಾಜ್, ರಮಣಿ ಯತಿರಾಜ್, ಆರ್.ಟಿ. ಗೋಪಾಲ್, ಸಾಯಿನಾಥ್ ಭಂಡಾರಿ, ಗಣಪತಿ ಭಂಡಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಾಹಿತಿ ಮಂಜುನಾಥ್ ಎಂ. ಭಂಡಾರಿಯವರಿಗೆ ಶಾಲು ಹೊದೆಸಿ, ಪುಷ್ಪ ಹಾರ ಹಾಕಿ ಸನ್ಮಾನಿಸಲಾಯಿತು.

Leave a Comment