ರಿಪ್ಪನ್ಪೇಟೆ ; ಶಾಲೆ ವರ್ಗಾವಣೆ ಪತ್ರದಲ್ಲಿ ಶಾರದಾ ರಾಮಕೃಷ್ಣ ಶಾಲೆಯ ಹೆಸರು ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿ ಇನ್ನೊಂದು ಸರ್ಕಾರಿ ಪ್ರೌಢಶಾಲೆಯ ಹೆಸರು ಇದರಿಂದಾಗಿ ನಮ್ಮ ಮಕ್ಕಳ ಮುಂದಿನ ಭವಿಷ್ಯದಲ್ಲಿ ಸಾಕಷ್ಟು ಸಂಕಷ್ಟ ಎದುರಾಗಲಿದೆ ಎಂದು ಆರೋಪಿಸಿ ಇಂದು ರಿಪ್ಪನ್ಪೇಟೆಯ ಶಾರದಾ ರಾಮಕೃಷ್ಣ ವಿದ್ಯಾಲಯದ ವಿರುದ್ಧ ಪೋಷಕರು ದಿಢೀರ್ ಪ್ರತಿಭಟನೆ ನಡೆಸಿದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/19vsAhn9hQ/
ಕಳೆದ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಪರೀಕ್ಷೆಗೆ ಪ್ರವೇಶ ಪತ್ರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಎಂದು ಪ್ರವೇಶ ಪತ್ರ ಬಂದಿರುವುದನ್ನು ಕಂಡು ವಿದ್ಯಾರ್ಥಿ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು ಪರೀಕ್ಷೆ ಮುಗಿದು ಅಂಕಪಟ್ಟಿ ಪಡೆಯುವ ಸಂದರ್ಭದಲ್ಲಿ ವರ್ಗಾವಣೆ ಪತ್ರದಲ್ಲಿ ಶಾರದಾ ರಾಮಕೃಷ್ಣ ಶಾಲೆಯ ಎಂದು ಅಂಕಪಟ್ಟಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ರಿಪ್ಪನ್ಪೇಟೆ ಎಂದು ಬರುತ್ತಿರುವ ಬಗ್ಗೆ ಇನ್ನಷ್ಟು ಗೊಂದಲಕ್ಕೆ ಎಡೆಮಾಡಿದಂತಾಗಿ ಶಾಲಾ ಸಂಸ್ಥಾಪಕ ಅಧ್ಯಕ್ಷರಲ್ಲಿ ವಿಚಾರಣೆ ನಡೆಸಿದರೆ ಸಮರ್ಪಕ ಉತ್ತರ ನೀಡದೆ ಜಾರಿಕೊಳ್ಳುತ್ತಿದ್ದಾರೆಂದು ಪ್ರತಿಭಟನಾ ನಿರತರು ತಮ್ಮ ಆಕ್ರೋಶವನ್ನು ಮಾಧ್ಯಮದವರ ಮುಂದೆ ವ್ಯಕ್ತಪಡಿಸಿದರು.
ಇಂದು ಪ್ರತಿಭಟನೆಯ ಸುದ್ದಿ ತಿಳಿದು ಶಾಲೆಯ ಅಡಳಿತವರ್ಗ ಈ ವಿಚಾರ ನ್ಯಾಯಾಲಯದಲ್ಲಿದೆ ಇಂದು ನಾಳೆ ಆದೇಶವಾಗಲಿದೆ ಇನ್ನು ಒಂದು ವಾರಗಳ ಕಾಲಾವಕಾಶ ನೀಡಿ ಸಹಕರಿಸಿ ಎಲ್ಲವನ್ನು ಸರಿಪಡಿಸುತ್ತೇವೆ ತಮ್ಮ ಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆಂದು ಶಾರದಾ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ದೇವರಾಜ್ ದೂರವಾಣಿಯಲ್ಲಿ ಮಾತನಾಡಿದ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಂಡರು.
ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಮ ಪಂಚಾಯಿತ್ ಸದಸ್ಯ ಆರ್.ವಿ. ನಿರೂಪ್ ಕುಮಾರ್, ಪ್ರಕಾಶ್ ಪಾಲೇಕರ್, ಉಮಾ ಸುರೇಶ, ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ನಾಗೇಶ ಚಂದಳ್ಳಿ, ನಿಂಗಪ್ಪ ಇನ್ನಿತರರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





