ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಅರಸಾಳಿನ ಕವನಶ್ರೀ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಚೆನ್ನೈನ ಎಸ್.ಆರ್.ಎಂ. ಆಡಿಟೋರಿಯಂನಲ್ಲಿ ಆಯೋಜಿಸಲಾದ ಸ್ಯಾಂಪಲ್ಸ್ ಡಿಸ್ಪ್ಲೆನಲ್ಲಿ ಅರಸಾಳಿನ ಕು. ಕವನಶ್ರೀ ಇವರು ಮದರ್ ಇಂಡಿಯಾಸ್ ಕ್ರೋಶೆಕ್ವೀನ್ಸ್ 100581 ಸ್ಕ್ವಯರ್ ಸ್ಯಾಂಪಲ್ ಮಾಡಿ ವಿಶ್ವ ದಾಖಲೆಯನ್ನು ನಿರ್ಮಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡರ್ ಆಗಿ ಅರಸಾಳಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಕೋಟೆತಾರಿಗ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಮಂಜಯ್ಯ ಟಿ. ಹಾಗೂ ಅರಸಾಳು ಗ್ರಾಮ ಪಂಚಾಯಿತ್ ಮಾಜಿ ಸದಸ್ಯೆ ಕುಸುಮಾವತಿ ಇವರ ಪುತ್ರಿಯಾದ ಕು. ಕವನಶ್ರೀ ಹೆಚ್.ಎಂ. (M.sc in fashion apparel design) ವಿದ್ಯಾಭ್ಯಾಸ ಮಾಡುತ್ತಿದ್ದು ಗಿನ್ನೆಸ್ ವರ್ಲ್ಡ್ ರೆಕಾರ್ಡರ್ ಸರ್ಟಿಫಿಕೇಟ್ ತಮ್ಮದಾಗಿಸಿಕೊಳ್ಳುವುದರೊಂದಿಗೆ ವಿಶ್ವ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ.

ಇವರ ಈ ಸಾಧನೆಗೆ ಅರಸಾಳು ಗ್ರಾಮಸ್ಥರು ಅಭಿನಂದಿಸಿದ್ದಾರೆ.

Leave a Comment