Ripponpete

ಒಂದು ಕೋಟಿ ರೂ. ವೆಚ್ಚದ ಶಾಂತಪುರ-ಗರ್ತಿಕೆರೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

ರಿಪ್ಪನ್‌ಪೇಟೆ ; ತತ್ವಸಿದ್ದಾಂತದ ಮೇಲೆ ಬೆಳೆದು ಬಂದವನನ್ನು ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಕೆಲಸ ಮಾಡಿ ಜನರಿಗೂ ಸಂತೋಷವಾಗುವುದರೊಂದಿಗೆ ಸಂಘಟನೆಗೂ ಪಕ್ಷಕ್ಕೂ ಲಾಭವಾಗುತ್ತದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅಮೃತ-ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಂತಪುರ-ಗರ್ತಿಕೆರೆ ಸಂಪರ್ಕದ ರಸ್ತೆಗೆ ಪಿಎಂ.ಜಿ.ಎಸ್.ವೈ ಯೋಜನೆಯಡಿ 1 ಕೋಟಿ ರೂ. ವೆಚ್ಚದ ಅನುದಾನವನ್ನು ಬಿಡುಗಡೆ ಮಾಡಿಸುವ ಮೂಲಕ ಸಂಪರ್ಕ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎಂದಿಗೂ ನಾನು ಮತ ಕೊಡದವರು ಮತಕೊಟ್ಟವರು ಎಂಬ ಯಾವುದೇ ತಾರತಮ್ಯ ಮಾಡದೇ ನಮ್ಮ ಕ್ಷೇತ್ರದ ಮತದಾರರು ನಮ್ಮವರು ಎಂದು ತಿಳಿದು ಕ್ಷೇತ್ರದಲ್ಲಿ ಹಂತಹಂತವಾಗಿ ಅಭಿವೃದ್ದಿ ಕಾರ್ಯಗಳನ್ನು ಮಾಡಿಕೊಂಡು ಬಂದವನು ಎಂದರು.

ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ನಾನು ಮಂತ್ರಿಯಾಗುತ್ತೇನೆಂಬ ಕನಸು ಕಂಡವನಲ್ಲ. ಮಂತ್ರಿಯಾಗಿ ಚಿಕ್ಕಮಗಳೂರಿಗೆ ತೆರಳುವ ವೇಳೆಯಲ್ಲಿ ನನ್ನ ವಾಹನದ ಮುಂದೆ ಪೊಲೀಸ್ ಭದ್ರತಾ ವಾಹನ ಹೊರಟಾಗ ಸೈರನ್ ಹಾಕಬೇಡಿ ನಾನು ಸದಾ ಜನರ ಜೊತೆ ಬೆಳೆದು ಬಂದವನ್ನು ಅಧಿಕಾರ ಎಂದಿಗೂ ಶಾಶ್ವತವಲ್ಲ ನಮಗೆ ಮತದಾರರೇ ಶಾಶ್ವತ ಎಂದು ತಿಳಿದವನು ಎಂದು ಹೇಳಿದೆ. ಅದೇ ರೀತಿಯಲ್ಲಿ ನಡೆದುಕೊಂಡೆ ಎಂದು ತಮ್ಮ ರಾಜ್ಯ ಗೃಹ ಸಚಿವನಾಗಿದ್ದಾಗಿನ ತಮ್ಮ ಅನುಭವದ ಮಾತುಗಳನ್ನು ಮೇಲಕು ಹಾಕಿದ ಅವರು, ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ವಹಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಆದೇಶಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಕೋಡೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ, ಅಮೃತ ಗ್ರಾ.ಪಂ. ಮಾಜಿ ಅಧ್ಯಕ್ಷ ಸಚಿನಗೌಡ, ಸದಸ್ಯರಾದ ಲಿಂಗರಾಜು, ವಿಶ್ವನಾಥ್ ಗಂದ್ರಳ್ಳಿ, ಮಂಜುಳಾ, ದೇವರಾಜ್ ಸೋಮಣ್ಣ, ದಿನೇಶ್, ಶೇಖರಪ್ಪ, ಯೋಗೇಂದ್ರಪ್ಪ, ಗ್ರಾಮಸ್ಥರು ಪಕ್ಷದ ಮುಖಂಡರು ಇನ್ನಿತರರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>