ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಡುಪಿ ಜಿಲ್ಲೆಯ ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜುನಾಥ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಲೋಕಾಯುಕ್ತರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ತವ್ಯನಿರತ ವೈದ್ಯಾಧಿಕಾರಿಗಳು ಇಲ್ಲದೆ ಇರುವುದು ಹೊರ ರೋಗಿಗಳು ವೈದ್ಯರಿಗಾಗಿ ಕಾದು ಕುಳಿತಿರುವುದನ್ನು ಕಂಡು ತೀವ್ರ ಅಸಮದಾನ ವ್ಯಕ್ತಪಡಿಸಿದರು.

ಇನ್ನೂ ಫಾರ್ಮಸಿಸ್ಟ್ ಸರಿಯಾಗಿ ಕೆಲಸಕ್ಕೆ ಹಾಜರಾಗದಿರುವುದು ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯ ಬಳಿ ಮಾಹಿತಿ ಪಡೆದ ಅವರು ಕ್ಲರ್ಕ್ ಸಹ ಸಮಯಕ್ಕೆ ಮುನ್ನವೇ ಹೋಗಿರುವುದು ಹಾಗೂ ಆಸ್ಪತ್ರೆಯ ಒಳಗೆ, ಹೊರಗಡೆ ಗೋಡೆಯ ಮೇಲೆ ಲೋಕಾಯುಕ್ತರ ನಾಮಫಲಕ ಅಳವಡಿಸದಿರುವುದು ಮತ್ತು ನಾಮಫಲಕದಲ್ಲಿ ಫೋನ್ ನಂಬರ್ ಸಹ ಹಾಕದಿರುವುದರ ಬಗ್ಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ನಾಮಫಲಕ ಅಳವಡಿಸುವಂತೆ ಸೂಚನೆ ನೀಡಿದ ಅವರು, ಶಿವಮೊಗ್ಗ ಜಿಲ್ಲೆಯ ಮೊರಾರ್ಜಿ ಅಂಬೇಡ್ಕರ್ ಬಿ.ಸಿ.ಎಂ. ವಸತಿ ನಿಲಯಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು ಕೋಡೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಯಳಗಲ್ಲು ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಸತಿ ನಿಲಯದ ವಿದ್ಯಾರ್ಥಿಗಳಲ್ಲಿ ವಿಚಾರಿಸಿ ಆಗ ನಾಮಫಲಕದಲ್ಲಿ ಹಾಕಲಾದಂತೆ ಆಹಾರವನ್ನು ನೀಡುತ್ತಿಲ್ಲ ನಮಗೆ ಮೊಳಕೆ ಕಟ್ಟಿದ ಕಾಳಿನ ಪಲ್ಯ, ಬೆಂಡೆಕಾಯಿ ಸಾರು ಎಂದು ನಿತ್ಯದ ಆಹಾರದ ಬಗ್ಗೆ ಅಳವಡಿಸಲಾದ ಫಲಕದಂತೆ ನೀಡದೆ ಇರುವುದರ ಕುರಿತು ಸಂಬಂಧಪಟ್ಟ ಮೇಲ್ವಿಚಾರಕರನ್ನು ತರಾಟೆ ತಗೆದುಕೊಂಡು ಸರ್ಕಾರ ಕೊಡುವ ಸೌಲಭ್ಯವನ್ನು ಸಮರ್ಪಕವಾಗಿ ನೀಡುವಂತೆ ಆದೇಶಿಸಿದರು.

ಹೊಸನಗರ ತಾಲ್ಲೂಕು ಆಸ್ಪತ್ರೆಯಲ್ಲಿ ಔಷಧಿಯಿದ್ದರೂ ಕೂಡಾ ಹೊರಗಡೆ ಖಾಸಗಿ ಮೆಡಿಕಲ್ಗಳಿಗೆ ಚೀಟಿ ನೀಡಿ ಬಡರೋಗಿಯೊಬ್ಬರಿಂದ ಔಷಧಿ ತರಿಸಿರುವ ಕುರಿತು ರೋಗಿಯಿಂದ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಮಂಜುನಾಥ್ ಕೂಡಲೇ ವೈದ್ಯಾಧಿಕಾರಿಯನ್ನು ಕರೆಯಿಸಿ ಖಾಸಗಿ ಔಷಧಿ ಅಂಗಡಿಯಿಂದ ತಂದ ರೋಗಿಗೆ ವಾಪಸ್ಸು 400 ರೂಪಾಯಿ ಹಣವನ್ನು ಮರಳಿಸಿದ ಪ್ರಸಂಗ ಸಹ ನಡೆದಿದೆ.

ಈಗಾಗಲೇ ನಾವು ಭೇಟಿ ನೀಡಲಾಗಿರುವ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರು ಸಮಯಕ್ಕೆ ಮುನ್ನ ಹೋಗಿರುವ ಬಗ್ಗೆ ಕ್ರಮ ಜರುಗಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೋಟಿಸ್ ನೀಡಲಾಗುವುದೆಂದು ವಿವರಿಸಿದ ಅವರು, ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಮಾಧ್ಯಮದವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ಲೋಕಾಯುಕ್ತ ಕಛೇರಿ ಸಿಬ್ಬಂದಿವರ್ಗ, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತ್ ಸಿಬ್ಬಂದಿಗಳಾದ ನಾಗೇಶ ಮೋರೆ, ರಾಜೇಶ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಹಾಜರಿದ್ದರು.

Leave a Comment