ರಿಪ್ಪನ್ಪೇಟೆ : ಇಲ್ಲಿನ ಸಾಗರ-ತೀರ್ಥಹಳ್ಳಿ ಮಾರ್ಗದ ರಾಜ್ಯ ಹೆದ್ದಾರಿಯ ತಲಾ ಒಂದೊಂದು ಕಿ.ಮೀ ರಸ್ತೆ ಅಗಲೀಕರಣ ಬಾಕ್ಸ್ ಚರಂಡಿ ಹಾಗೂ ಪಾದಚಾರಿಗಳಿಗಾಗಿ ಓಡಾಡಲು ನಿರ್ಮಿಲಾಗುತ್ತಿರುವ ಇಂಟರ್ಲಾಕ್ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ಪೂರ್ಣ ಹಂತ ತಲುಪುವಂತಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.
ಕಾಮಗಾರಿ ಆರಂಭಕ್ಕೆ ಸರ್ಕಾರ 4.85 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೀಲನಕ್ಷೆಗೆ ಅನುಮೋದನೆ ನೀಡಲಾಗಿ ಟೆಂಡರ್ ಸಹ ಮುಗಿದು ಕುಂದಾಪುರದ ಸೇರಿಗಾರ್ ಎಂಬುವರಿಗೆ ಗುತ್ತಿಗೆಯಾಗಿ ಕಾಮಗಾರಿ ಆರಂಭಿಸಲಾಗಿ ಮೂರು ವರ್ಷಗಳಾಗುತ್ತಾ ಬಂದರು ಕೂಡಾ ಕಾಮಗಾರಿ ಅಪೂರ್ಣವಾಗಿಯೇ ಉಳಿಯುವಂತಾಯಿತು.
ಸಾಗರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ವಿನಾಯಕ ವೃತ್ತದಿಂದ ತಲಾ ಒಂದೊಂದು ಕಿ.ಮೀ. ಉದ್ದದ ದ್ವಿಪಥ ರಸ್ತೆಗೆ ಸರ್ಕಾರ 4.85 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಬಾಕ್ಸ್ ಚರಂಡಿ ಮತ್ತು ರಸ್ತೆ ಅಗಲೀಕರಣ ಹಾಗೂ ಪಾದಚಾರಿಗಳಿಗೆ ಓಡಾಡುವ ರಸ್ತೆ ಇಕ್ಕೆಲಕ್ಕೆ ಇಂಟರ್ಲಾಕ್ ಜೋಡಣೆ ಸೇರಿ ಈ ಕಾಮಗಾರಿಗೆ ನೀಲನಕ್ಷೆ ಸಿದ್ದಗೊಂಡು ಕಾಮಗಾರಿಗೆ ಟೆಂಡರ್ ಮಾಡಲಾಗಿದ್ದು ಗುತ್ತಿಗೆದಾರನ ಬೇಜವ್ದಾರಿಯಿಂದಾಗಿ ಕಾಮಗಾರಿ ಕಳಪೆ ದರ್ಜೆಯಲ್ಲಿ ಮಾಡುವ ಮೂಲಕ ಪೂರ್ಣ ಹಂತ ತಲುಪಿದೆ ಎಂದು ಸಾರ್ವಜನಿಕರು ದೂರುವಂತಾಗಿದೆ.
ಶಾಸಕ ಗೋಪಾಲಕೃಷ್ಣರ ಗಮನಕ್ಕೆ ತರಲಾಗಿದ್ದು ಆಗ ಶಾಸಕರು ಇಂಟರ್ಲಾಕ್ ಜೋಡಣೆಯನ್ನು ಖುದ್ದು ವೀಕ್ಷಣೆ ಮಾಡಿ ಕಾಮಗಾರಿ ಮಾಡದಂತೆ ಸೂಚಿಸಿ ನಿಲ್ಲಿಸಲಾಗಿದ್ದರೂ ಕೂಡಾ ಗುತ್ತಿಗೆದಾರ ಈಗ ಅವರ ಸೂಚನೆಯನ್ನು ಲೆಕ್ಕಿಸಿದೇ ಕಳಪೆಯಾಗಿ ಪೂರ್ಣಗೊಳಿಸುವ ಹಂತ ತಲುಪಿದ್ದಾನೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
ಶಾಸಕರ ಮಹಾದಾಸೆ ಈಡೇರುವುದೇ ?
ಶಾಸಕ ಗೋಪಾಕೃಷ್ಣ ಬೇಳೂರು ರಿಪ್ಪನ್ಪೇಟೆಯನ್ನು ಸಿಂಗಾಪುರ ಮಾಡುವ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಇಲ್ಲಿನ ನಾಲ್ಕು ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ವಿನಾಯಕ ವೃತ್ತಕ್ಕೆ ಸರ್ಕಾರದಿಂದ ವಿಶೇಷ ಅನುದಾನ ಹೆಚ್ಚುವರಿಯಾಗಿ 1.50 ಕೋಟಿ ರೂ. ಬಿಡುಗಡೆಗೊಳಿಸಿ ಟೆಂಡರ್ ಪ್ರಕ್ರಿಯೆ ಸಹ ಮುಗಿದು ಕಾಮಗಾರಿಗೆ ಶಂಕುಸ್ಥಾಪನೆಯನ್ನು ಮಾಡುವ ಮೂಲಕ ಚಾಲನೆ ನೀಡಲಾದರೂ ಕೂಡಾ ಅಂಗಡಿ, ಹೋಟೆಲ್ ಇನ್ನಿತರರು ಲೋಕೋಪಯೋಗಿ ಇಲಾಖೆಯವರು ಗುರುತಿಸಿದ ಜಾಗಕ್ಕೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ತೆರವು ಕಾರ್ಯಚರಣೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಶಾಸಕರ ಮಹಾದಾಸೆ ಈಡೇರುವುದು ಕನಸಾಗಿಯೇ ಉಳಿಯುವಂತಾಗಿದೆ.
ಒಟ್ಟಾರೆಯಾಗಿ ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳು ಎಂಬಂತಾಗಿದೆ ಎನ್ನಲು ಇಲ್ಲಿನ ವಿನಾಯಕ ವೃತ್ತದಲ್ಲಿ ಭರದಿಂದ ಸಾಗಬೇಕಾದ ರಸ್ತೆ ಅಗಲೀಕರಣ ಕಾಮಗಾರಿ ಆಮೆ ಗತಿಗೆ ಸಾಗಿರುವುದು ಸ್ಪಷ್ಟ ಉದಾಹರಣೆಯಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





