ಕ್ಯಾನ್ಸರ್, ಹೃದಯರೋಗ ಪೀಡಿತ ವೃದ್ಧೆಗೆ ಪಡಿತರ ಕಾರ್ಡ್ ನೀಡಲು ಅಧಿಕಾರಿಗಳ ನಿರಾಶಕ್ತಿ !?

Written by Mahesha Hindlemane

Published on:

ರಿಪ್ಪನ್‌ಪೇಟೆ ; ಕ್ಯಾನ್ಸರ್ ಹೃದಯ ರೋಗ ಪೀಡಿತ ವಯೋವೃದ್ದ ಮಹಿಳೆಗೆ ಬಿಪಿಎಲ್ ಕಾರ್ಡ್ ಸೌಲಭ್ಯ ನೀಡಲು ಕಂದಾಯ ಆಹಾರ ಇಲಾಖೆಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಇದರಿಂದಾಗಿ ರೋಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಅಲೆಯುವಂತಾಗಿದೆ ಎಂದು ಜರೀನಾ ಬೇಗಂ ತನ್ನ ನೋವನ್ನು ಮಾಧ್ಯಮದವರ ಮುಂದೆ ತೋಡಿಕೊಂಡಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನಾನು ಈ ಹಿಂದೆ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದು ಮಗ ಚಾಲಕನಾಗಿ ಕೆಲಸ ಮಾಡುತ್ತಿದ್ದು ತೆರಿಗೆ ಕಟ್ಟಿದ್ದಾನೆಂಬ ಒಂದೇ ಕಾರಣದಿಂದ ನನ್ನ ಬಿಪಿಎಲ್ ಕಾರ್ಡ್ ವಜಾ ಮಾಡಿದ್ದಾರೆ. ಆದರೆ ನನ್ನ ಮಗ ಬೇರೆ ಸಂಸಾರ ಮಾಡಿಕೊಂಡಿದ್ದು ಈಗ ನನಗೆ ಮಾರಕ ರೋಗದಿಂದಾಗಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಜೀವನ್ಮರಣದಲ್ಲಿ ನಾನು ಬದುಕುವಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಹೊಸನಗರ ತಾಲ್ಲೂಕು ಆಹಾರ ಇಲಾಖೆಯವರಲ್ಲಿ ಮತ್ತು ತಹಸೀಲ್ದಾರ್ ಬಳಿ ಸಹ ಹೋಗಿ ನನ್ನ ಪರಿಸ್ಥಿತಿಯನ್ನು ತಿಳಿಸಿದರೂ ನನಗೆ ಬಿ.ಪಿ.ಎಲ್ ಕಾರ್ಡ್ ನೀಡಲು ಅಸಡ್ಡೆ ತೋರಿದ್ದಾರೆಂದು ವೃದ್ದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ದುಡಿಮೆ ಮಾಡಲು ಆಗದೇ ದುಬಾರಿ ವೆಚ್ಚ ಮಾಡಿ ಚಿಕಿತ್ಸೆ ಪಡೆಯುವಷ್ಟು ಶಕ್ತಳಲ್ಲದ ನನಗೆ ಉಳಿದಿರುವುದು ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ಬಾಕಿ ಎಂದು ತನ್ನ ಮನದಾಳದ ನೋವನ್ನು ವ್ಯಕ್ತಪಡಿಸಿದ ಜರೀನಾ ಬೇಗಂ, ನಾನು ಸಾಕಷ್ಟು ಬಾರಿ ತಹಶೀಲ್ದಾಹರ್ ಹಾಗೂ ಆಹಾರ ಇಲಾಖೆಯ ಕಚೇರಿಗೆ ಅಲೆದಾಡಿದರೂ ನನ್ನ ಕಷ್ಟಕ್ಕೆ ಸ್ಪಂದಿಸದೇ ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿ ಬಡವರಾದ ನಮಗೆ ಇನ್ನೂ ಯಾರು ಗತಿ ಸ್ವಾಮಿ ಎಂದು ಹೇಳಿ ಸರ್ಕಾರ ತುರ್ತಾಗಿ ಅಗತ್ಯವಿರುವವರಿಗೆ ಸ್ಪಂದಿಸಿ ಬಿ.ಪಿ.ಎಲ್ ಕಾರ್ಡ್ ಮಾಡಿಕೊಡುವಂತೆ ತಿಳಿಸಿದರೂ ಕೂಡಾ ದೇವರು ವರ ಕೊಟ್ಟರೂ ಪೂಜಾರಿ ಕೂಡೆನು ಎಂಬಂತೆ ತನ್ನ ಅನಾರೋಗ್ಯ ಪೀಡಿತ ವೃದ್ದೆ ಜರೀನಾ ಬೇಗಂ ತನ್ನ ನೋವನ್ನು ಮಾಧ್ಯಮದವರಲ್ಲಿ ತೋಡಿಕೊಂಡರು.

ಇನ್ನಾರೂ ನಮ್ಮ ಈ ಸಮಸ್ಯೆಗೆ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಂದಿಸಿ ಪರಿಹಾರ ಕಲ್ಪಿಸುವರೇ ಕಾದುನೋಡುವಂತಾಗಿದೆ.

Leave a Comment