ಹೊಸನಗರದ 7 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಮೊದಲ ದಿನ ಪರೀಕ್ಷೆಗೆ 1566 ವಿದ್ಯಾರ್ಥಿಗಳು ಹಾಜರು, 9 ವಿದ್ಯಾರ್ಥಿಗಳು ಗೈರು ; ಬಿಇಒ ವೈ ಗಣೇಶ್

Written by Mahesha Hindlemane

Published on:

ಹೊಸನಗರ ; ಇಂದಿನಿಂದ ಏಪ್ರಿಲ್ 2 ರವರೆಗೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು ಹೊಸನಗರ ತಾಲ್ಲೂಕಿನಲ್ಲಿ 7 ಕೇಂದ್ರಗಳನ್ನು ಪರೀಕ್ಷೆಗಾಗಿ ಸಿದ್ದತೆ ಮಾಡಿಕೊಂಡಿದ್ದು ಇಂದು ನಡೆದ ಕನ್ನಡ ಪರೀಕ್ಷೆ ಸುಸುತ್ರವಾಗಿ ಯಾವುದೇ ಸಮಸ್ಯೆಗಳಿಲ್ಲದೆ ಪೂರ್ಣಗೊಂಡಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಒಟ್ಟು ತಾಲ್ಲೂಕಿನಲ್ಲಿ 1575 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದು ಅದರಲ್ಲಿ 1566 ವಿದ್ಯಾರ್ಥಿಗಳು ಹಾಜರಾಗಿದ್ದು 9 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದಿದ್ದಾರೆ ಎಂದು ಹೊಸನಗರದ ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್‌ ತಿಳಿಸಿದರು.

ತಾಲ್ಲೂಕಿನಲ್ಲಿ ದೂರದ ಊರುಗಳಿಂದ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆಯಲು ಕಷ್ಟಕರವಾಗಲಿದೆ ಎಂದು ಅಲ್ಲಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇಂದ್ರಗಳನ್ನು ಸಿದ್ದತೆ ಮಾಡಿಕೊಂಡಿದ್ದು ಅದರಂತೆ ಏಳು ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ಸರ್ಕಾರಿ ಪದವಿಪೂರ್ವ ಕಾಲೇಜ್ ಹೊಸನಗರದಲ್ಲಿ 344 ವಿದ್ಯಾರ್ಥಿಗಳು, ಖಾಸಗಿ ಹೋಲಿ ರೆಡೀಮರ್ ಪ್ರೌಢ ಶಾಲೆಯಲ್ಲಿ 346 ವಿದ್ಯಾರ್ಥಿಗಳು, ಸರ್ಕಾರಿ ಪದವಿಪೂರ್ವ ಕಾಲೇಜ್ ಪ್ರೌಢ ಶಾಲೆ ವಿಭಾಗದಲ್ಲಿ 341 ವಿದ್ಯಾರ್ಥಿಗಳು, ಮೇರಿ ಮಾತ ಪ್ರೌಢ ಶಾಲೆ ರಿಪ್ಪನ್‌ಪೇಟೆಯಲ್ಲಿ 168 ವಿದ್ಯಾರ್ಥಿಗಳು, ನಗರ ಪ್ರೌಢ ಶಾಲೆಯಲ್ಲಿ 139 ವಿದ್ಯಾರ್ಥಿಗಳು, ಮಾರುತಿಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ 159 ವಿದ್ಯಾರ್ಥಿಗಳು, ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಿಟ್ಟೂರಿನಲ್ಲಿ 110 ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ವಿಂಗಡಿಸಲಾಗಿದೆ ಎಂದರು.

ಬಿಇಒ ವೈ. ಗಣೇಶ್

ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 1575 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಾಗಿದ್ದು ಒಟ್ಟು 1566 ವಿದ್ಯಾರ್ಥಿಗಳು ಕನ್ನಡ ಪರೀಕ್ಷೆಗೆ ಹಾಜರಾಗಿದ್ದು 9 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 1575 ವಿದ್ಯಾರ್ಥಿಗಳಲ್ಲಿ 793 ಬಾಲಕರು ಹಾಗೂ 782 ಬಾಲಕಿಯರು ಪರೀಕ್ಷೆಗಾಗಿ ಹೆಸರು ನೊಂದಾಯಿಸಿದ್ದಾರೆ ಎಂದು ತಿಳಿಸಿದರು.

ಹೊಸನಗರ ತಾಲ್ಲೂಕಿನಲ್ಲಿ 7 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ತಹಸೀಲ್ದಾರ್ ಭರತ್‌ರಾಜ್ ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಹಾಗೂ ತಾಲ್ಲೂಕಿನ ಕೆಲವು ಅಧಿಕಾರಿಗಳು ಪರೀಕ್ಷ ಕೇಂದ್ರಗಳಿಗೆ ಭೇಟಿ ನೀಡುವುದರ ಜೊತೆಗೆ ಪರೀಕ್ಷೆ ಸುಲಲಿತವಾಗಿ ನಡೆಯಲು ಸಹಕರಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ವ್ಯವಸ್ಥಾಪಕರಾದ ಗಣೇಶ್, ದೈಹಿಕ ಶಿಕ್ಷಣಾ ಇಲಾಖೆಯ ಪರಿವೀಕ್ಷಣಾಧಿಕಾರಿ ವಿನಯ್ ಕರ್ಕಿ, ಕರಿಬಸಪ್ಪ, ನೋಡಲ್ ಅಧಿಕಾರಿ ರಾಜೇಂದ್ರಪ್ಪ, ರಂಗನಾಥ್, ಸುಮಾರಾಣಿ, ವೃಥ್ವಿರಾಜ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Comment