Ripponpete ಶಿವಮೊಗ್ಗ

ರಿಪ್ಪನ್‌ಪೇಟೆ ಹೊಳೆ ಸಾಲಿನ ಅಪ್ಪೆಮಿಡಿ ಉಪ್ಪಿನಕಾಯಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೇಡಿಕೆ

ರಿಪ್ಪನ್‌ಪೇಟೆ ; ಊಟಕ್ಕೆ ಜೀರಿಗೆ ಅಪ್ಪೆ ಮಿಡಿ ಉಪ್ಪಿನಕಾಯಿ ಎಂದರೆ ಎಂತವರಿಗೂ ಬಾಯಿಯಲ್ಲಿ ನೀರು ಬರುತ್ತದೆ. ಹಾಗೇಯ ಮಲೆನಾಡಿನ ಅದರಲ್ಲೂ ರಿಪ್ಪನ್‌ಪೇಟೆಯ ಅರಸಾಳು ಅಪ್ಪೆ. ಕುಮದ್ವತಿ ನದಿಯ ಬಟಾಣಿಜಡ್ಡು, ಸೂಡೂರು, ಕೊಳವಂಕ, ಕುರಂಬಳ್ಳಿ ಹಾಗೂ ಶರ್ಮಿಣ್ಯಾವತಿ ಹೊಳೆಯ ಕ್ವಾಡ್ರಿಗೆ ಹೊಳೆಸಾಲಿನ ಜೀರಿಗೆ ಅಪ್ಪೆ ಮಿಡಿ,  ಉದ್ದ ಮಿಡಿ, ದುಂಡನೆ ಕರ್ಪೂರ ಮಿಡಿ ಖರೀದಿಸಲು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಸಿದ್ದಾಪುರ ಯಲ್ಲಾಪುರ, ಕಡೆಯಿಂದ ಮಿಡಿ ಮಾವಿನಕಾಯಿ ಖರೀದಿಸಲು ಜನರು  ನಾ… ಮುಂದೆ, ತಾ..
ಮುಂದೆ ಎಂದು ಬರುತ್ತಿದ್ದಾರೆ.

inshot_20260410_2030411605578023730110151004.jpg
ಉಪ್ಪಿನಕಾಯಿ ತಯಾರಿಕಾ ಘಟಕದಲ್ಲಿ ಮಿಡಿಗಳನ್ನು ಸಂಸ್ಕರಣೆ ಮಾಡಲು ಖರೀದಿಸಲಾದ ಮಾವಿನಮಿಡಿಗಳ ರಾಶಿ.

ಇಲ್ಲಿನ ಆರ್.ಆರ್.ಪಿಕಲ್ಸ್ ಮತ್ತು ಹೆಬ್ಬಾರ್‌ಪಿಕಲ್ಸ್ ಮಾವಿನ ಮಿಡಿ ವ್ಯಾಪಾರಕ್ಕೆ  ತರುವವರನ್ನು ತಡೆದು ಅಲ್ಲಿಯೇ  ಕೆ.ಜಿ. ಲೆಕ್ಕದಲ್ಲಿ ಕಡಿಮೆ ಹಣಕ್ಕೆ ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಈ ಬಾರಿ ಮಲೆನಾಡಿನ ವ್ಯಾಪ್ತಿಯಲ್ಲಿ ಮಾವಿನ ಫಸಲು ಸಿಕ್ಕಾಪಟ್ಟೆಯಾಗಿ ಬಂದಿದ್ದರೂ ಕೂಡಾ ಗುಡುಗು ಸಿಡಿಲು ಅಕಾಲಿಕ ಮಳೆಯೊಂದಿಗೆ ಇಬ್ಬನಿ ಸುರಿಯುವುದರಿಂದ ಮಾವಿನ ಫಸಲು ನಿರೀಕ್ಷೆಯಷ್ಟು ದೊರೆಯದೆ ಮಾವಿನ ಹೂ (ತೆನೆ) ಉದುರಿ ಭೂಮಿಯ ಪಾಲಾಗುವಂತಾಯಿತು.

ಕಳೆದ ಎರಡೂವರೆ ದಶಕದ ಹಿಂದೆ ಶೇಷಮ್ಮ ಎಂಬುವರು ಸಣ್ಣದಾಗಿ ಇಲ್ಲಿನ ಬೈರಾಪುರ ಗುರುರಾಘವೇಂದ್ರ ಮಠದ ಬಳಿ ಮನೆ ಮಾಡಿಕೊಂಡು ಅಪ್ಪೆ ಜೀರಿಗೆಮಿಡಿ ಉಪ್ಪಿನಕಾಯಿ ಉದ್ಯಮವನ್ನು ಆರಂಭಿಸಿ ಆಗಲೇ ಅರಸಾಳು, ಸೂಡೂರು ಕುಮದ್ವತಿ ಹೊಳೆಸಾಲಿನ ಮಿಡಿ ಉಪ್ಪಿನ ಕಾಯಿ ಅಂತರಾಷ್ಟ್ರೀಯ ಖ್ಯಾತಿ ಪಡೆಯಲು ಕಾರಣವಾಗಿ ಅದು ನಿರಂತರವಾಗಿ ಮುಂದುವರಿಯುತ್ತಾ ಈಗ ಉಪ್ಪಿನಕಾಯಿ ಉದ್ಯಮವಾಗಿ ಪ್ರಖ್ಯಾತಿ ಹೊಂದಿರುವುದು ರಿಪ್ಪನ್‌ಪೇಟೆ ಆರ್.ಆರ್.ಪಿಕಲ್ಸ್ ಮತ್ತು ಹೆಬ್ಬಾರ್‌ಪಿಕಲ್ಸ್ ಉದ್ಯಮದ ವಿಶೇಷವಾಗಿದೆ.

inshot_20260410_2031077447729846224786099021.jpg

ದಶಕಗಳ ಹಿಂದೆ ಸಾಂಪ್ರದಾಯಿಕವಾಗಿ ಗುರುತಿಸಿಕೊಂಡಿದ್ದ ರಿಪ್ಪನ್‌ಪೇಟೆ ಮಾವಿನಮಿಡಿ ಉಪ್ಪಿನಕಾಯಿ ಪ್ರಸ್ತುತ ಉದ್ಯಮವಾಗಿ ವಿಸ್ತಾರಗೊಂಡು ದೇಶ-ವಿದೇಶಗಳಲ್ಲಿ ತನ್ನ ಬೇಡಿಕೆ ಹೆಚ್ಚಿಸಿಕೊಳ್ಲುತ್ತಿದೆ. ನೈಸರ್ಗಿಕವಾಗಿ ಸಿಗುವ ಮಾವಿನಮಿಡಿ ರಾಸಾಯನಿಕ ಬಳಸದೆ ತಯಾರಾದ ಉಪ್ಪಿನಕಾಯಿ ಆರೋಗ್ಯವರ್ಧಕ ರುಚಿಯೊಂದಿಗೆ ಖಾದ್ಯ ಪ್ರಯರ ಮನಗೆದ್ದು ಗ್ರಾಮೀಣ ಪ್ರದೇಶದಿಮದ ಅಂತರಾಷ್ಟ್ರೀಯ ಖ್ಯಾತಿಗಳಿಸುವತ್ತಾ ಸಾಗಿದೆ.

ಈಗಾಗಲೇ 1990 ರಲ್ಲಿ ಪ್ರಾರಂಭವಾದ ಉಪ್ಪಿನಕಾಯಿ ಗೃಹ ಉದ್ಯಮ ಬೇರೆಯವರಿಂದ ಮುಂದುವರಿದ ಹತ್ತಾರು ಕಡೆಗಳಲ್ಲಿ ವ್ಯವಹಾವಾಗಿ ಬದಲಾಗಿದೆ. ನೂರಾರು ವಿದ್ಯಾವಂತ ಅವಿದ್ಯಾವಂತ ಯುವತಿಯರಿಗೆ ಮಹಿಳೆಯರಿಗೆ ದೈನಂದಿನ ಉದ್ಯೋಗ ನೀಡುವುದರೊಂದಿಗೆ ಗ್ರಾಮಾಂತರ ಪ್ರದೇಶದಲ್ಲಿ ಉಪ್ಪಿನಕಾಯಿ ವ್ಯಾಪಾರದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಾ ಅನ್ನದಾತರಾಗಿದ್ದಾರೆ.

inshot_20260410_2032350284171834698826165517.jpg
ಉಪ್ಪಿನಕಾಯಿ ತಯಾರಿಕಾ ಘಟಕದಲ್ಲಿ ಮಿಡಿಗಳನ್ನು ಸಂಸ್ಕರಣೆ ಮಾಡಿ ಮಾರಾಟಕ್ಕೆ ಬಾಟಲ್‌ಗೆ ತುಂಬುತ್ತಿರುವುದು.

ಹೆಸರುವಾಸಿ ತರವಾರಿ ತಳಿಗಳು :

ಅರಸಾಳು ಅಪ್ಪೆ, ಬಟಾಣಿಜಡ್ಡು ಜೀರಿಗೆ, ಕೊಳಂವಕ ಜೀರಿಗೆ, ಕ್ವಾಡ್ರಿಗೆ ಜೀರಿಗೆ, ಸೂಡೂರು ಅಪ್ಪೆ, ಕೊಳವಂಕ ಸಾದಾ ಅಪ್ಪೆ, ಕೂರಂಬಳ್ಳಿ ಕರ್ಪೂರ ಅಪ್ಪೆ. ಹೀಗೆ ವಿವಿಧೆಡೆಯಿಂದ ಬರುವ ಮಾವಿನಕಾಯಿ ಮಿಡಿಗಳಿಂದ ವಿವಿಧ ಉತ್ಪನ್ನ ತಯಾರಿಸಿದ ಚಟ್ನಿ, ಅಪ್ಪೆ ರಸ, ಮಾವಿನ ತಿಕ್ಕು, ಗೊಜ್ಜು ಇನ್ನಿತರ ಖಾದ್ಯಗಳನ್ನು ಸಿದ್ದಪಡಿಸಿ ವರ್ಷಕಾಲ ಬಳಸಲು ಮಾರಾಟ ಮಾಡಲು ಮಹಿಳಾ ಉದ್ಯೋಗಿಗಳು ಶ್ರಮಿಸುತ್ತಾರೆ.

Leave a Comment