ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಗಂಡನನ್ನು ಕೊಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್ !

Written by Mahesha Hindlemane

Published on:

ಶಿವಮೊಗ್ಗ ; ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಭದ್ರಾವತಿಯ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ಗುರುವಾರ ಆದೇಶ ಹೊರಡಿಸಿದೆ.

WhatsApp Group Join Now
Telegram Group Join Now
Instagram Group Join Now

ಏನಿದು ಪ್ರಕರಣ ?

📢 Stay Updated! Join our WhatsApp Channel Now →

ಭದ್ರಾವತಿಯ ಪೇಪರ್ ಟೌನ್ ಪೊಲೀಸ್‌ ಠಾಣಾ ವ್ಯಾಪ್ತಿಯ ಸುರಗಿತೋಪಿನ ನಿವಾಸಿಯಾಗಿದ್ದ ಪ್ರಕಾಶ್ ಬಾಬು ಎಂಬುವವರು 2020ರ ಜನವರಿ 15ರಂದು ಕೊಲೆಯಾಗಿದ್ದರು. ಪ್ರಕಾಶ್ ಬಾಬು ಅವರ ಪತ್ನಿ ಫ್ಲೋರಾ ನ್ಯಾನ್ಸಿ, ರಾಜಶೇಖರಯ್ಯ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ತಮ್ಮ ಈ ಸಂಬಂಧಕ್ಕೆ ಪ್ರಕಾಶ್ ಬಾಬು ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಇಬ್ಬರೂ ಸೇರಿ ಪ್ರಕಾಶ್ ಬಾಬು ಅವರನ್ನು ಮುಗಿಸಲು ಸಂಚು ರೂಪಿಸಿದ್ದರು.

ಕೊಲೆ ಮಾಡಿದ್ದು ಹೇಗೆ?

ಘಟನೆಯ ದಿನದಂದು ಫ್ಲೋರಾ ನ್ಯಾನ್ಸಿ ಮತ್ತು ರಾಜಶೇಖರಯ್ಯ ಸೇರಿ ಪ್ರಕಾಶ್ ಬಾಬುಗೆ ಮೊದಲು ಮತ್ತು ಬರುವ ಔಷಧಿಯನ್ನು ನೀಡಿದ್ದರು. ಪ್ರಕಾಶ್ ಬಾಬು ಪ್ರಜ್ಞೆ ತಪ್ಪುತ್ತಿದ್ದಂತೆಯೇ ಅವರನ್ನು ಉಸಿರುಗಟ್ಟಿಸಿ ಅತ್ಯಂತ ಅಮಾನುಷವಾಗಿ ಕೊಲೆ ಮಾಡಿದ್ದರು.

ಕೋರ್ಟ್ ತೀರ್ಪು !

ಈ ಪ್ರಕರಣದ ವಿಚಾರಣೆ ನಡೆಸಿದ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾ‌ರ್ ಅವರು, ಆರೋಪಿಗಳ ಕೃತ್ಯವು ಅಪರೂಪದ ಪ್ರಕರಣ ಎಂದು ಪರಿಗಣಿಸಿ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Leave a Comment