ಹೊಸನಗರ ; ತಾಲ್ಲೂಕಿನ ಎಂ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದಲ್ಲಿ ನೂರಾರು ಮನೆಗಳಿವೆ, ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮವಾಗಿದ್ದು, ಹೊಸನಗರ ಪಟ್ಟಣದಿಂದ ಗಂಗನಕೊಪ್ಪ ಗ್ರಾಮದ ಪಕ್ಕದಲ್ಲಿರುವ ಕೋಟೆಕಾನು, ವರಕೋಡು, ಗಂಗನಕೊಪ್ಪದ ನಿವಾಸಿಗಳು ಹಾಗೂ ಖಾತೆದಾರರೂ ಸ್ವಂತ ಮನೆಯುಳ್ಳವರೂ, ಎಸ್.ಸಿ, ಎಸ್.ಟಿ ಜನಾಂಗ ಮತ್ತು ಶಾಲಾ ಮಕ್ಕಳಿಗೆ ಓಡಾಟ ನಡೆಸಲು ಗಂಗನಕೊಪ್ಪದ ರಸ್ತೆಯೊಂದೇ ಮಾರ್ಗವಾಗಿದ್ದು, ಆದರೆ ಈಗ ಇಲ್ಲಿ ಓಡಾಟ ನಡೆಸುವ ಜನರಿಗೆ ರಸ್ತೆ ಮಾರ್ಗವಿಲ್ಲದೇ ಕಂಗಾಲಾಗಿದ್ದಾರೆ. ರಾಣೆಬೆನ್ನೂರುನಿಂದ ಬೈಂದೂರಿಗೆ ರಾಷ್ಟ್ರೀಯ ಹೆದ್ದಾರಿ ಈಗಾಗಲೇ ಕಾಮಗಾರಿ ಪ್ರಾರಂಭವಾಗಿದ್ದು, ಹೊಸನಗರ ತೋಟಗಾರಿಕೆ ಇಲಾಖೆಯ ಆವರಣದ ಒಳಗೆ ದಾಟಿ ಗಂಗನಕೊಪ್ಪ ಗ್ರಾಮದಲ್ಲಿ ರಸ್ತೆಯ ಅಡ್ಡಲಾಗಿ ಹೈವೆ ರಸ್ತೆ ಹೋಗುತ್ತಿರುವುರಿಂದ ನೂರಾರು ಮನೆಗಳು ಅತಂತ್ರ ಸ್ಥಿತಿಯಲ್ಲಿದ್ದು ಬ್ಯಾನಗಳಲೆಯಿಂದ ಹೊಸನಗರ ಪಟ್ಟಣಕ್ಕೆ ಹಾಗೂ ಪಟ್ಟಣದಿಂದ ಬ್ಯಾನಗಳಲೆ ಗ್ರಾಮಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ತಕ್ಷಣ ತಾವು ಹಾಗೂ ನ್ಯಾಶನಲ್ ಹೈವೆ ಇಂಜಿನಿಯರ್‌ಗಳೂ ಸ್ಥಳಕ್ಕೆ ಕರೆಸಿ ಎಂದು ಆ ಭಾಗದ ಗ್ರಾಮಸ್ಥರು ರಸ್ತೆಯ ಮಧ್ಯೆ ನಿಂತಿದ್ದು ಸ್ಥಳಕ್ಕೆ ತಹಸೀಲ್ದಾರ್ ಭರತ್‌ರಾಜ್, ಹೈವೆ ಇಂಜಿನಿಯರ್ ರೆವಿನ್ಯೂ ಇನ್ಸ್‌ಪೆಕ್ಟರ್ ಆಂಜನೇಯ ಹಾಗೂ ಗ್ರಾಮ ಆಡಳಿತಾಧಿಕಾರಿ ಲೋಹಿತ್, ಗಣೇಶ್‌ರವರು ಪ್ರತಿಭಟನ ಸ್ಥಳಕ್ಕೆ ಆಗಮಿಸಿದರು.

ತಹಸೀಲ್ದಾರ್ ಸ್ಪಂದನೆ:
ತಹಸೀಲ್ದಾರ್ ಭರತ್‌ರಾಜ್‌ರವರು ಹೈವೇ ಇಂಜಿನಿಯರ್‌ರನ್ನು ಸ್ಥಳಕ್ಕೆ ಕರೆಸಿ ಈಗ ಓಡಾಟ ನಡೆಸುತ್ತಿರುವ ದಾರಿಗೆ ಯಾವುದೇ ತೊಂದರೆ ನೀಡಬೇಡಿ ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೇವೆ ನಂತರ ಈ ಭಾಗದ ಗ್ರಾಮಸ್ಥರಿಗೆ ಓಡಾಟ ನಡೆಸಲು ಸ್ಥಳ ನಿಗದಿಪಡಿಸಿದ ನಂತರ ಹೈವೇ ರಸ್ತೆಯವರು ಓಡಾಟ ನಡೆಸುವ ರಸ್ತೆಗೆ ತೊಂದರೆ ನೀಡಬೇಡಿ. ಉಳಿದ ಹೈವೆ ಕೆಲಸ ಮಾಡಿಕೊಳ್ಳಿ ಎಂದು ತಾಕಿತು ಮಾಡಿದರು.
ಹೈವೇ ಇಂಜಿನಿಯರ್ ತಹಶೀಲ್ದಾರ್ ಆದೇಶವನ್ನು ಪಾಲಿಸುವುದಾಗಿ ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದ ಮೇಲೆ ಗ್ರಾಮಸ್ಥರು ತಹಸೀಲ್ದಾರ್ ಮಾತಿಗೆ ಮನ್ನಡೆ ನೀಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





