SSLC ಪರೀಕ್ಷೆಗೆ ರಿಪ್ಪನ್‌ಪೇಟೆ ಕೇಂದ್ರದಲ್ಲಿ 483 ವಿದ್ಯಾರ್ಥಿಗಳು

0 374

ರಿಪ್ಪನ್‌ಪೇಟೆ: ಮಾರ್ಚ್ 25 ರಿಂದ ಆರಂಭವಾಗುವ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಗೆ ರಿಪ್ಪನ್‌ಪೇಟೆಯ ಎರಡು ಪರೀಕ್ಷಾ ಕೇಂದ್ರದಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿದ್ದು ಈ ಬಾರಿ 483 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆಂದು ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಬಂಡಿ ಸೋಮಶೇಖರ್ ಮತ್ತು ಮುಖ್ಯ ಅಧೀಕ್ಷಕಿ ಸರಿತಾ ಮಾಧ್ಯಮದವರಿಗೆ ವಿವರಿಸಿದರು.

ಸರ್ಕಾರದ ನಿಯಮದಂತೆ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯ ಕೇಂದ್ರವು ಸರ್ಕಾರಿ ಪ್ರೌಢಶಾಲಾ ಕೊಠಡಿಯಲ್ಲಿಯೇ ನಡೆಸಬೇಕು ಎಂಬ ಕಟ್ಟುನಿಟ್ಟಿನ ಆದೇಶದಂತೆ ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜ್, ಪ್ರೌಢಶಾಲೆಯಲ್ಲಿ ಎರಡು ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದ್ದು ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 206 ವಿದ್ಯಾರ್ಥಿಗಳಲ್ಲಿ ಬಾಲಕರು 110 ಬಾಲಕಿಯರು 96 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪದವಿ ಪೂರ್ವ ಕಾಲೇಜ್‌ನ ಎಸ್.ಎಸ್.ಎಲ್.ಸಿ.ಪರೀಕ್ಷಾ ಕೇಂದ್ರದಲ್ಲಿ 277 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳುತ್ತಿದ್ದು ‌ಈ ಎರಡು ಪರೀಕ್ಷಾ ಕೇಂದ್ರಕ್ಕೆ ಸರ್ಕಾರಿ ಪ್ರೌಢಶಾಲೆಗಳಾದ ರಿಪ್ಪನ್‌ಪೇಟೆ, ಅರಸಾಳು, ಬೆಳ್ಳೂರು, ಹೆದ್ದಾರಿಪುರ, ಗರ್ತಿಕೆರೆ, ಚಿಕ್ಕಜೇನಿ, ಖಾಸಗಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗಳಾದ ಶ್ರೀಬಸವೇಶ್ವರ ಶಾಲೆ, ಮೇರಿಮಾತಾ, ಶಾರದಾ ರಾಮಕೃಷ್ಣ, ಕಲ್ಲುಹಳ್ಳ ಮಲೆನಾಡ ಪ್ರೌಢಶಾಲೆ ಹಾಗೂ ಹುಂಚದ ಎನ್.ಇ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು ಈ ಬಾರಿ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾರ್ಥಿಗಳು ಗೋಡೆ ಕಡೆ ಮುಖ ಮಾಡಿ ಕುಳಿತು ಕೊಳ್ಳಬೇಕು ಎಂಬ ನಿಯಮದಂತೆ ಈಗಾಗಲೇ ವಿದ್ಯಾರ್ಥಿಗಳಿಗೆ ಡೆಸ್ಕ್ ವ್ಯವಸ್ಥೆಯೊಂದಿಗೆ ಸಿಸಿ ಕ್ಯಾಮೆರಾಗಳ ಕಣ್ಗಾವಲು ಸಹ ಸಿದ್ದಗೊಳಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Leave A Reply

Your email address will not be published.