ಏ.2 ರಂದು ಕವಲೇದುರ್ಗ ಮಠದಲ್ಲಿ ಲೋಕಕಲ್ಯಾಣಾರ್ಥ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾ ಶಿವಪೂಜಾ ಧರ್ಮ ಸಮಾರಂಭ

0 242

ರಿಪ್ಪನ್‌ಪೇಟೆ: ತೀರ್ಥಹಳ್ಳಿ ತಾಲ್ಲೂಕಿನ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿದುರ್ಗ ಸಂಸ್ಥಾನ ಮಠದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ಏಪ್ರಿಲ್ 2 ರಂದು ಬೆಳಗ್ಗೆ 11:30ಕ್ಕೆ ಬಾಳೇಹೊನ್ನೂರು ರಂಭಾಪುರಿ ಜಗದ್ಗುರುಗಳವರ “ಇಷ್ಟಲಿಂಗ ಮಹಾ ಶಿವಪೂಜಾ’’ ಕಾರ್ಯಕ್ರಮ ಮತ್ತು ಧರ್ಮಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಕವಲೇದುರ್ಗ ಮಠದ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಂಭಾಪುರಿ ನರಸಿಂಹಾಸನಾಧೀಶ್ವರ ಶ್ರೀ 1008  ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರುಗಳ ದಿವ್ಯಸಾನಿಧ್ಯದಲ್ಲಿ ಧರ್ಮಜಾಗೃತಿ ಸಮಾರಂಭ ಜರುಗಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಕವಲೇದುರ್ಗ ಮಠದ ಮರುಳಸಿದ್ದಶಿವಾಚಾರ್ಯ ಸ್ವಾಮಿಜಿ ವಹಿಸುವರು. ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯರು, ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯರು, ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ನೇತೃತ್ವ ವಹಿಸುವರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಷಯ ಕುರಿತು ಮಾಧ್ಯಮ ಸಲಹೆಗಾರ ಅಂಕಣಕಾರ ಆರ್.ಎಸ್.ಪ್ರಶಾಂತ್ ಉಪನ್ಯಾಸ ನೀಡುವರು.

ಈ ಧರ್ಮಜಾಗೃತಿ ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಸಾಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಎಂ.ಸಿ. ಮಂಜುಳಾ, ಉಪಾಧ್ಯಕ್ಷ ಕೆ.ಹೆಚ್.ಜಾತಪ್ಪ ಹಾಗೂ ಕೋಣಂದೂರಿನ ಲತಾ ಕೆ.ಆರ್.ಪ್ರಕಾಶ್ ಇನ್ನಿತರರು ಭಾಗವಹಿಸುವರು.

ಈ ಧಾರ್ಮಿಕ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮಠದ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.

error: Content is protected !!