ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ, 2ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಅಂದ್ರು ಈಶ್ವರಪ್ಪ

0 334

ರಿಪ್ಪನ್‌ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ ಎಂದು ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳುವುದರೊಂದಿಗೆ ಎರಡನೇ ಸ್ಥಾನಕ್ಕೆ ಬಿಜೆಪಿ ಕಾಂಗ್ರೆಸ್ ಪೈಪೋಟಿ ನಡೆಸುತ್ತಿದ್ದಾರೆಂದರು.

ರಿಪ್ಪನ್‌ಪೇಟೆಯ ರಾಯಲ್ ಕರ್ಫಂರ್ಟ್ನ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಶಿಕಾರಿಪುರ ಹಿತ್ತಕಲ್ಮನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮತದಾರರು ಸಭೆಯಲ್ಲಿ ಭಾಗವಹಿಸಿರುವುದನ್ನು ನೋಡಿದರೆ ನನ್ನ 35 ವರ್ಷದ ರಾಜಕೀಯ ಜೀವನದಲ್ಲಿಯೂ ಇಷ್ಟು ಬೆಂಬಲ ಸಿಕ್ಕಿರುವುದನ್ನು ಕಂಡಿರುವುದೇ ಇದು ಮೊದಲು ಎಂದು ಹೇಳಿ ಅಷ್ಟು ಶಿಕಾರಿಪುರದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರರಾದ ಸಂಸದ ರಾಘವೇಂದ್ರ ಹಾಗೂ ವಿಜಯೇಂದ್ರರವರ ಮೇಲೆ ಮತದಾರರು ತೀವ್ರ ಅಸಮದಾನ ಹೊಂದಿದ್ದಾರೆ. ತಾವು ನಮ್ಮ ಮನೆಗೂ ಬರಬೇಡಿ ಕಾರಣ ನಾಳೆ ನಮ್ಮ ವಿರುದ್ದ ಏನಾದರೂ ಅಪ್ಪ ಮಕ್ಕಳು ಮಾಡುತ್ತಾರೆಂದು ಭಯ ಪಡುತ್ತಿದ್ದಾರೆ. ಏನೇ ಆಗಲಿ ನಿಮ್ಮಂತಹ ನೇರ ದಿಟ್ಟ ಹೋರಾಟಗಾರ ನಾಯಕರ ಅಗತ್ಯವಿದೆ ಎಂದು ಹೇಳಿ ನಮ್ಮ ಬೆಂಬಲ ನಿಮಗೆ ಎಂದು ಹೇಳುತ್ತಿದ್ದಾರೆಂದರು.

ನಾನು ಪಕ್ಷೇತರನಾಗಿ ಗೆದ್ದರೂ ಕೂಡಾ ಮೋದಿಜಿಗೆ ಲೋಕಸಭೆಯಲ್ಲಿ ಬಿಜೆಪಿಗೆ ಬೆಂಬಲಿಸುತ್ತೇನೆ ಯಾವುದೇ ಕಾರಣಕ್ಕೂ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಸೇರುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಒಂದೊಂದು ತರಹದ ಗೊಂದಲದ ಹೇಳಕೆ ನೀಡಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇನ್ನೂ ಹೀಗೆ ಮುಂದುವರೆದರೆ ಕರ್ನಾಟಕ ರಾಜ್ಯ ಮುಸ್ಲಿಂ ರಾಜ್ಯವಾಗುವುದಲ್ಲಿ ಯಾವುದೇ ಸಂದೇಹವಿಲ್ಲ ಎಂದ ಅವರು, ನನ್ನ ಉಸಿರಿರುವರೆಗೂ ನಾನು ಹಿಂದು ಪರವಾಗಿಯೇ ಹೋರಾಟ ಮಾಡುವುದರೊಂದಿಗೆ ಹಿಂದು ರಕ್ಷಣೆಯಲ್ಲಿ ತೊಡಗಿಕೊಂಡಿರುತ್ತೇನೆಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ :
ರಾಜ್ಯದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಆಡಳಿತ ವ್ಯವಸ್ಥೆಯಲ್ಲಿ ಹಿಡಿತವಿಲ್ಲದೆ ನಿತ್ಯ ಒಂದಲ್ಲ ಒಂದು ಗೊಂದಲದ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಬಿಜೆಪಿ ಶುದ್ದಿಕರಣಕ್ಕಾಗಿ ಪಕ್ಷೇತರನಾಗಿ ಸ್ಪರ್ಧೆ :
ರಾಜ್ಯದಲ್ಲಿ ಅಪ್ಪ, ಮಕ್ಕಳ ಕೈಯಲ್ಲಿ ಬಿಜೆಪಿ ಸಿಕ್ಕು ನಿಷ್ಟಾವಂತರಾದ ಸದಾನಂದಗೌಡ, ಪ್ರತಾಪಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ನಳಿಕುಮಾರ್ ಕಟೀಲ್, ಸಿ.ಟಿ.ರವಿ ಹೀಗೆ ಹಲವರು ಬಿಜೆಪಿಯ ಕಟ್ಟಾಳುಗಳಾಗಿದ್ದವರು ಅವರನ್ನು ದೂರವಿರಿಸುವ ಉದ್ದೇಶದಿಂದಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡು ಜಿಲ್ಲೆಯಲ್ಲಿ ತನ್ನ ಮಗನ ವಿರುದ್ದ ವೀಕ್ ಅಭ್ಯರ್ಥಿಯನ್ನು ನಿಲ್ಲಿಸಿಕೊಂಡಿದ್ದಾರೆಂದು ಹೇಳಿ ಯಾವುದೇ ಕಾರಣದಿಂದಲೂ ನಾನು ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಶುದ್ದಿಕರಣ ಮಾಡುವ ಉದ್ದೇಶದಿಂದಲೇ ಸಿದ್ದಾಂತವನ್ನು ಇಟ್ಟುಕೊಂಡು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುತ್ತಿಲ್ಲ ನನ್ನ ಗುರಿ ಮೋದಿಯವರನ್ನು ಮೊತ್ತೊಮ್ಮೆ ದೇಶದಲ್ಲಿ ಪ್ರಧಾನಿಯನ್ನಾಗಿ ಮಾಡುವುದೆಯಾಗಿದೆ ಎಂದರು.

ಈ ಸಭೆಯಲ್ಲಿ ವಾಟಗೋಡು ಸುರೇಶ್, ತ.ಮ.ನರಸಿಂಹ, ವಿಶಾಲ, ಜಯಸುಬ್ಬರಾವ್, ಲೀಲಾವತಿ, ನಿರೂಪ್ ಕುಮಾರ್,ಇನ್ನಿತರರು ಇದ್ದರು.

Leave A Reply

Your email address will not be published.

error: Content is protected !!