ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 75.02 ರಷ್ಟು ಮತದಾನ

0 47

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.75.02 ರಷ್ಟು ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮತದಾನದಲ್ಲಿ ಏರಿಕೆಯಾಗಿದೆ. ಅಂದರೆ, 2019ರಲ್ಲಿ ಶೇ. 73.17 ರಷ್ಟು ಮತದಾನವಾಗಿದ್ದರೆ, 2024ರಲ್ಲಿ ಶೇ. 75.02 ರಷ್ಟು ಮತದಾನವಾಗಿದೆ. ಈ ಬಾರಿ ಶೇ. 1.85 ರಷ್ಟು ಹೆಚ್ಚಾಗಿ ಮತದಾನವಾಗಿದೆ.

ಶೃಂಗೇರಿಯಲ್ಲಿ ಪುರುಷರು 1,68,951 ಮಹಿಳೆಯರು 1,35,678 ಶೇಕಡವಾರು 80.31, ಮೂಡಿಗೆರೆಯಲ್ಲಿ ಪುರುಷರು 1,71,642 ಮಹಿಳೆಯರು 1,32,975 ಶೇಕಡವಾರು 77.47, ಚಿಕ್ಕಮಗಳೂರುನಲ್ಲಿ ಪುರುಷರು 2,32,210, ಮಹಿಳೆಯರು 1,64,253 ಶೇಕಡವಾರು 70.73, ತರೀಕೆರೆ ಯಲ್ಲಿ ಪುರುಷರು 1,93,125 ಮಹಿಳೆಯರು, 1,43,482 ಶೇಕಡವಾರು 74.29, ಕಡೂರು ಪುರುಷರು 2,08,253, ಮಹಿಳೆಯರು 155626 ಶೇಕಡವಾರು 74.73 ಮತದಾನವಾಗಿದೆ.

ಕ್ಷೇತ್ರವಾರು ಅಂಕಿ ಅಂಶ ನೋಡಿದರೆ, ಮತದಾನದಲ್ಲಿ ಶೃಂಗೇರಿ ಕ್ಷೇತ್ರ ಮೊದಲ ಸ್ಥಾನದಲ್ಲಿದ್ದರೆ, ಚಿಕ್ಕಮಗಳೂರು ಕ್ಷೇತ್ರ ಕೊನೆಯ ಸ್ಥಾನದಲ್ಲಿದೆ. ಇನ್ನುಳಿದ 3 ಕ್ಷೇತ್ರಗಳಲ್ಲಿ ಸರಾಸರಿ ಶೇ. 75 ರಷ್ಟು ಮತದಾನ ಆಗಿದೆ. ಇನ್ನೊಂದು ಆಘಾತಕಾರಿ ವಿಷಯವೆಂದರೆ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ಹೊರತುಪಡಿಸಿ ಇನ್ನುಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಜನರಲ್ಲಿ ಮತದಾನದ ಬಗ್ಗೆ ಉತ್ಸಾಹ ಇರಲಿಲ್ಲ.

ಕೇರಳದಿಂದ ಎನ್.ಆರ್.ಪುರ ತಾಲೂಕಿನಲ್ಲಿ ರಬ್ಬರ್ ತೋಟಗಳಲ್ಲಿ ಕೆಲಸಕ್ಕಾಗಿ ಬಂದಿರುವ ಹಲವು ಮಂದಿ ಕಾರ್ಮಿಕರು ವೋಟ್ ಮಾಡಲು ತಮ್ಮ ಸ್ವಗ್ರಾಮಕ್ಕೆ ತೆರಳಲೇ ಇಲ್ಲ. ಇನ್ನು ಚಿಕ್ಕಮಗಳೂರು ಗ್ರಾಮೀಣ ಭಾಗದ ಜನರು ಗ್ರಾಮಗಳಲ್ಲಿ ಇದ್ದರೂ ಸಹ ಮತಗಟ್ಟೆಗೆ ಹೋಗಿ ಮತದಾನ ಮಾಡಲಿಲ್ಲ. ಒಟ್ಟಾರೆ ಮತದಾನದಲ್ಲಿ ಶೇಕಡವಾರು ಏರಿಕೆಯಾದರೂ ಜನರು ಊರುಗಳಲ್ಲಿ ಇದ್ದರೂ ಕೂಡ ಮತದಾನ ಮಾಡದೆ ಇರುವುದು ಯಕ್ಷ ಪ್ರಶ್ನೆಯಾಗಿದೆ.

Leave A Reply

Your email address will not be published.