ಮೇವಿನ ಅಭಾವದ ಸಂದರ್ಭದಲ್ಲಿ ಅಕ್ಷಯಪಾತ್ರೆವಾಗಬಲ್ಲ ಆಹಾರ ಅಜೋಲಾ

0 343

ರಿಪ್ಪನ್‌ಪೇಟೆ : ಪ್ರಸ್ತುತ ವರ್ಷದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬೆಳೆಯ ಉತ್ಪಾದನೆ ಕಡಿಮೆಯಾಗಿರುವುದರ ಜೊತೆಗೆ ಜಾನುವಾರುಗಳಿಗೆ ಮೇವಿನ ಅಭಾವವಾಗಿದೆ. ಇಂತಹ ಸಂದರ್ಭದಲ್ಲಿ ಅಜೋಲ್ಲಾ ಜಾನುವಾರುಗಳಿಗೆ ಅಕ್ಷಯಪಾತ್ರೆಯಾಗಬಲ್ಲದು ಎಂದು ಡಾ.ನಿಂಗರಾಜು ಹೇಳಿದರು.

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಕೃಷಿ ವಿವಿಯ ಗಂಧದ ಗುಡಿ ತಂಡದವರು ಕೋಡೂರಿನಲ್ಲಿ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ಅವರು, ಮೇವಿಗಿಂತ ಅಜೋಲಾ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿದ್ದು ಪ್ರೋಟೀನ್ ಹೇರಳವಾಗಿದ್ದು ಜಾನುವಾರುಗಳಿಗೆ ಉತ್ತಮ ಆಹಾರವಾಗಿದೆ. ಚಿಕ್ಕ ಎಲೆ, ತೆಳುವಾದ ಬೇರುಗಳನ್ನೊಳಗೊಂಡ ಅಜೋಲಾ ನೀರಿನಲ್ಲಿ ತೇಲುತ್ತಾ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸುವುದರಿಂದ ಭತ್ತದ ಗದ್ದೆಯಲ್ಲಿ ಗೊಬ್ಬರವಾಗಿ ಬೆಳೆಯಬಹುದು ಎಂದರು.

2.25 ಮೀ ಉದ್ದ , 1.5 ಮೀ ಅಗಲದ ಗುಂಡಿಯನ್ನು ತೆಗೆದು, ನೀರು, ಸ್ವಲ್ಪ ಪ್ರಮಾಣದ ಸಗಣಿ ಖನಿಜಯುತ ಮಣ್ಣನ್ನು ಹಾಕಿ ಅಜೋಲಾ ಕಲ್ಚರ್ ಗುಂಡಿಯಲ್ಲಿ ಬಿಟ್ಟು ರೈತರಿಗೆ ಪ್ರಾಯೋಗಿಕವಾಗಿ ತೋರಿಸಿದರು.

ಅಜೋಲಾವನ್ನು ಶುದ್ಧವಾಗಿ ತೊಳೆದು ಜಾನುವಾರುಗಳಿಗೆ ಪೂರೈಸಬೇಕು. ಮೇವು ಹಾಗೂ ಹಿಂಡಿಯ ಜೊತೆಗೆ ಮಿಶ್ರಣ ಮಾಡಿ ಕೊಟ್ಟರೆ, ಅಜೋಲಾ ತಿನ್ನುವ ಅಭ್ಯಾಸವಾಗುತ್ತದೆ. ಕೋಳಿ, ಕುರಿ, ಆಡು, ಮೊಲ, ಮೀನು ಮತ್ತು ಹಂದಿಗಳಿಗೂ ಅಜೋಲಾವನ್ನು ಆಹಾರವಾಗಿ ಕೊಡಬಹುದು ಎಂದು ಸಂಪನ್ಮೂಲ ವ್ಯಕ್ತಿ ಡಾ.ದಿವ್ಯ ಹೇಳಿದರು.

Leave A Reply

Your email address will not be published.

error: Content is protected !!