ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯ ಗ್ಯಾರಂಟಿ ಯೋಜನೆ ಅನುಷ್ಟಾನಕ್ಕೂ ಮೊದಲು ಮುಂಗಡ ಹಣ ಕೊಡಿ ಎಂದು ಕೇಳಿ ; ಬಿ.ವೈ.ರಾಘವೇಂದ್ರ

0 241

ರಿಪ್ಪನ್‌ಪೇಟೆ: ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ಒಂದು ಲಕ್ಷ ರೂ. ಗ್ಯಾರಂಟಿ ನೀಡುವ ಭರವಸೆ ನೀಡಿದ್ದು ಮತಯಾಚಿಸಲು ಬರುವ ಪಕ್ಷದವರಲ್ಲಿ 10 ಸಾವಿರ ರೂ. ಹಣವನ್ನು ಅಡ್ವಾನ್ಸ್ ಮಾಡಿ ಉಳಿದ 90 ಸಾವಿರ ಹಣವನ್ನು ನಂತರ ಕೊಡಿ ಎಂದು ಕೇಳಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ಗರ್ತಿಕೆರೆ ಗ್ರಾಮದಲ್ಲಿ ಆಯೋಜಿಸಲಾದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಮತಯಾಚಿಸಿ, ದೇಶದ ವರ್ಷದ ಬಜೆಟ್ 48 ಲಕ್ಷ ಕೋಟಿ ರೂ. ಆದರೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದ ಎಲ್ಲ ಮಹಿಳೆಯರಿಗೆ ಲಕ್ಷ ರೂ. ಗ್ಯಾರಂಟಿ ಎಂದು ಘೋಷಿಸಲಾಗಿದ್ದು 68 ಕೋಟಿ ಮಹಿಳೆಯರು ಇರುವ ದೇಶದಲ್ಲಿ ತಲಾ ಒಂದು ಲಕ್ಷ ರೂ. ಗ್ಯಾರಂಟಿ ಕೊಡುವ ಯೋಜನೆಗೆ 68 ಲಕ್ಷ ಕೋಟಿ ರೂ. ಕೊಡಬೇಕಾಗುತ್ತದೆ. ಹಾಗಾದರೆ ಆ ಹಣ ಎಲ್ಲಿಂದ ಕೊಡಲು ಸಾಧ್ಯ ಎಂದು ಕೇಳಿದಾಗ ಎಚ್ಚೆತ್ತ ಕಾಂಗ್ರೆಸ್, ಕುಟುಂಬದ ಓರ್ವ ಮಹಿಳೆಗೆ ಎಂದು ಹೇಳಿಕೊಳ್ಳುತ್ತಿದ್ದು ಕಾಂಗ್ರೆಸ್ ಪಕ್ಷದವರು ಮುಗ್ದ ಮನಸ್ಸಿನ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರದಲ್ಲಿ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದರು.

ವಯಸ್ಸಿನ ಮೀತಿಯಿಲ್ಲ:
ಆಯುಷ್ಮಾನ್ ಕಾರ್ಡ್‌ಗೆ 70 ವರ್ಷದೊಳಗಿನವರಿಗೆಂದು ತಿಳಿಸಲಾಗಿತ್ತು ಅದನ್ನು ಮೋದಿಜಿಯವರು ವಯಸ್ಸಿನ ಮೀತಿ ಇಲ್ಲದೆ ಎಲ್ಲರಿಗೂ ಈ ಸೌಲಭ್ಯ ದೊರಕುವಂತೆ ಮಾಡಿದ್ದಾರೆಂದರು.

ದರೋಡೆಕೋರರನ್ನು ಹಿಡಿಯ ಬೇಡಿ ಎನ್ನುವ ಕಾಂಗ್ರೆಸ್ ಸರ್ಕಾರ:
ಕಳ್ಳತನ ಸುಲಿಗೆ ಮಾಡುವ ದರೋಡೆಕೋರರನ್ನು ಹಿಡಿಯಬೇಡಿ ಎನ್ನುವ ಸಿದ್ದರಾಮಯ್ಯನವರ ನೇತೃತ್ವದ ಜೇಬುಗಳ್ಳರ ರಾಜ್ಯ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಯ ನಂತರದ ಆರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಮೊತ್ತೊಮ್ಮೆ ಬಿಜೆಪಿ ಸರ್ಕಾರ ಆಧಿಕಾರ ಹಿಡಿಯುತ್ತದೆಂಬ ಸುಳಿವು ನೀಡಿದರು.

ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಬಿ.ವೈ.ರಾಘವೇಂದ್ರ ತನ್ನ ಚಿಕ್ಕವಯಸ್ಸಿನಲ್ಲಿಯೇ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಆಭಿವೃದ್ದಿಗೆ ಟೊಂಕಕಟ್ಟಿ ನಿಂತಿದ್ದಾರೆ. ಬಡವರ ಬಗರ್ ಹುಕುಂ ರೈತರ ಪರವಾಗಿ ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಸಾಕಷ್ಟು ಬಾರಿ ಗಮನಸೆಳೆದು ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಅಲ್ಲದೇ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಭದ್ರಾವತಿ ವಿ.ಐ.ಎಸ್.ಎಲ್.ಮತ್ತು ಎಂ.ಪಿ.ಎಂ. ಹಾಗೂ ಹೊಸನಗರ ಸಾಗರ ಕುಂದಾಪುರ, ಉಡುಪಿ, ಮಂಗಳೂರು ಸಂಪರ್ಕದ ತುಮರಿ ಸೇತುವೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿಗಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ತರುವುದರೊಂದಿಗೆ ಅಭಿವೃದ್ದಿಪಡಿಸುತ್ತಿದ್ದಾರೆ. ಜಾತಿ ಭೇದ ಭಾವನೆ ತೊರದೆ ಅಲ್ಪಸಂಖ್ಯಾತರ ಮತ್ತು ಈಡಿಗ ಮಡಿವಾಳ ಒಕ್ಕಲಿಗ ಪೂಜಾರಿ ಲಿಂಗಾಯಿತ ಬಣಜಿಗ ಲಂಬಾಣಿತಾಂಡ ಹೀಗೆ ಎಲ್ಲ ಸಮುದಾಯದವರ ಸಮುದಾಯ ಭವನಗಳಿಗೆ ಹೆಚ್ಚಿನ ಅನುದಾನವನ್ನು ಕೊಡಿಸುವುದರೊಂದಿಗೆ ಅವರ ತಂದೆಯಂತೆ ಮಗನೂ ಸಹ ಜನಮನ್ನಣೆ ಗಳಿಸಿರುವ ಯುವನಾಯಕ ರಾಘವೇಂದ್ರರನ್ನು ಈ ಬಾರಿ ಗೆಲ್ಲಿಸಿ ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿ ಹೊರಹೊಮ್ಮುವಂತೆ ಮಾಡುವುದು ಮತದಾರರ ಮುಂದೆಯಿದೆ ಎಂದು ಹೇಳಿ, ತಮ್ಮ ಮತವನ್ನು ಎರಡು ನಂಬರ್ ಗುರುತಿಗೆ ಹಾಕುವಂತೆ ಮನವಿ ಮಾಡಿದರು.

ನಯಾಪೈಸೆ ಕೊಡದ ರಾಜ್ಯ ಸರ್ಕಾರ:
ರಾಜ್ಯದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕರ ಅಧಿಕಾರಕ್ಕೆ ಬಂದು 9 ಹತ್ತು ತಿಂಗಳಾದರೂ ಕೂಡ ಅಭಿವೃದ್ದಿ ಕಾರ್ಯಗಳಿಗೆ ನಯಾಪೈಸೆ ಸಹ ನೀಡಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕಿದೆ. ಕುಡುಕನೋರ್ವ ನಾನು ದಿನಕ್ಕೆ ಒಂದು ಕ್ವಾಟ್ರೂ ಎಣ್ಣೆ ಕುಡಿಯುತ್ತಿದ್ದೆ ಅದನ್ನು ಏಕಾಏಕಿ ಹೆಚ್ಚಿಸಿದ್ದು ದಿನಕ್ಕೆ 100 ರೂ. ಮೊತ್ತದಲ್ಲಿ ಕೊಂಡು ಕುಡಿಯುತ್ತಾ ಸರ್ಕಾರಕ್ಕೆ ಲೆಕ್ಕ ತಿಂಗಳಿಗೆ 3000 ಸಾವಿರ ಹಣ ಕೊಡುತ್ತೇನೆ ಆದರೆ ಸಿದ್ದರಾಮಯ್ಯ ಸರ್ಕಾರ ಮಹಿಳೆಯರಿಗೆ ಕೊಡುವ 2000 ರೂ‌. ನಿಂದ ನಾನೇ ಸಿದ್ದರಾಮಯ್ಯ ಸರ್ಕಾರಕ್ಕೆ 1 ಸಾವಿರ ಸಾಲ ಕೊಡುತ್ತಿದ್ದೇನೆಂದು ಲೆಕ್ಕ ಹಾಕಿ ಹೇಳಿದ ಎಂದು ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಹರಿಕೃಷ್ಣ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ, ಬಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎನ್.ಸತೀಶ್, ಶಿವಮೊಗ್ಗ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಪಕ್ಷದ ಮುಖಂಡರಾದ ಆರ್.ಟಿ.ಗೋಪಾಲ, ಮಾಜಿ ಅಧ್ಯಕ್ಷ ಗಣಪತಿ ಬಿಳಗೋಡು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಬಿ.ಎಸ್.ಪುರುಷೋತ್ತಮ್‌ರಾವ್, ಸುರೇಶ ಸ್ವಾಮಿರಾವ್, ಜಿಲ್ಲಾ ಎಸ್.ಎಸ್.ಟಿ.ಮೋರ್ಚಾ ಅಧ್ಯಕ್ಷೆ ಉಷಾ ನಾರಾಯಣ, ಉಮೇಶ್‌ ಕಂಚುಗಾರ್, ಎ.ವಿ.ಮಲ್ಲಿಕಾರ್ಜುನ, ಹಕ್ರೆ ಮಲ್ಲಿಕಾರ್ಜುನ, ಹಾಲಗದ್ದೆ ಉಮೆಶ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಬಿಕ್ಕಮಣತಿ ಬಿ.ಯುವರಾಜ್, ಹುಂಚ ಹೋಬಳಿ ಘಟಕದ ಅಧ್ಯಕ್ಷ ವಿನಾಯಕ ಹುಂಚ, ಎಂ.ಸುರೇಶಸಿಂಗ್, ಚಿಟ್ಟೆಗದ್ದೆ ಪುರುಷೋತ್ತಮ್, ಜೆಡಿಎಸ್ ತಾಲ್ಲೂಕು ಆಧ್ಯಕ್ಷ ಎನ್.ವರ್ತೇಶ್ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!