Udupi – Chikkamagaluru Loksabha Constituency | ಮಧ್ಯಾಹ್ನ 01 ಗಂಟೆ ಹೊತ್ತಿಗೆ ಶೇ.ಎಷ್ಟು ಮತದಾನವಾಗಿದೆ ಗೊತ್ತಾ ?

0 315

ಚಿಕ್ಕಮಗಳೂರು : ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 01 ಗಂಟೆಯ ಸುಮಾರಿಗೆ ಶೇ. 46.43 ಮತದಾನವಾಗಿದೆ.

ಉಡುಪಿಯಲ್ಲಿ 47.04% , ಕುಂದಾಪುರದಲ್ಲಿ 49.14% , ಕಾರ್ಕಳ 48.96% ಹಾಗೂ ಕಾಪು 49.58% ನಡೆದರೆ ಚಿಕ್ಕಮಗಳೂರು 40.44%, ಮೂಡಿಗೆರೆ 46.44% ಶೃಂಗೇರಿ 49.49% ಹಾಗೂ ತರೀಕೆರೆ 41.57% ಮತದಾನವಾಗಿದೆ.

ಕಾಫಿನಾಡಿನಲ್ಲಿ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಶಾಂತಿ ಯುತವಾಗಿ ಸಾಗುತ್ತಿದ್ದು, ಇಂದು ಹಸೆಮಣೆ ಏರಬೇಕಿದ್ದ ನವವಧು ಮತದಾನ ಮಾಡಿದ್ದು ವಿಶೇಷವಾಗಿದೆ.

ಮೂಡಿಗೆರೆ ತಾಲೂಕು ಕುಂದೂರು ಮತಕೇಂದ್ರದಲ್ಲಿ ನವವಧು ತಳವಾರ ಗ್ರಾಮದ ಸೌಮ್ಯ ಹಸೆಮಣೆ ಏರುವ ಮೊದಲು ತಮ್ಮ ಹಕ್ಕು ಚಲಾಯಿಸಿದರು.

ಇನ್ನೂ ಸ್ವಾಮೀಜಿಗಳು ಹಾಗೂ ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದು ಬಾಳೆಹೊನ್ನೂರು ರಂಭಾಪುರಿ ಶ್ರೀ ರಂಭಾಪುರಿ ಮಠದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಅವರು, ಮತದಾನ ಸಂವಿಧಾನ ಕೊಟ್ಟ ಅಧಿಕಾರ ಎಂಬುದನ್ನು ಮರೆಯಬೇಡಿ, ಸಧೃಡ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡಿ ಎಂದು ಮನವಿ ಮಾಡಿದರು.

ಕೊಪ್ಪ ತಾಲೂಕು ಹರಿಹರಪುರ ಶ್ರೀಮಠದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಹರಿಹರಪುರ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ವಿನಂತಿಸಿದರು.

ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ಚಿಕ್ಕಕುರುಬರಹಳ್ಳಿ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ 138 ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಇವಿಎಂ ದೋಷ ಸ್ಥಗಿತಗೊಂಡ ಯಂತ್ರ ಗಂಟೆಗೂ ಹೆಚ್ಚು ಕಾಲ ಕಾದು ಕುಳಿತ ಮತದಾರರು ಚಿಕ್ಕಮಗಳೂರು ತಾಲೂಕು ಅರೆನೂರು ಗ್ರಾಮದಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ 53ರಲ್ಲಿ ಇವಿಎಂ ಯಂತ್ರದಲ್ಲಿ ದೋಷ ಕಂಡು ಬಂದಿದ್ದು ಮತದಾರರು ಒಂದು ಗಂಟೆಗೂ ಹೆಚ್ಚುಕಾಲ ಕಾದು ಕುಳಿತುಕೊಳ್ಳಬೇಯಿತು. ಮತಗಟ್ಟೆ ಅಧಿಕಾರಿಗಳು ಇವಿಎಂ ಯಂತ್ರದಲ್ಲಿ ದೋಷವನ್ನು ಸರಿಪಡಿಸಿ ಮತದಾನ‌ ಪ್ರಕ್ರಿಯೆಗೆ ಅನುವು ಮಾಡಿಕೊಡಲಾಯಿತು.

ನರಸಿಂಹರಾಜಪುರ ತಾಲೂಕು ಮೆಣಸೂರು ಗ್ರಾಮದಲ್ಲಿ ತೆರೆಯಲಾಗಿರುವ ಮತಗಟ್ಟೆಯಲ್ಲಿ ಇವಿಎಂ ದೋಷ ಕಂಡು ಬಂದಿದ್ದು ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತ್ತು. ಕೆಲಸಕ್ಕೆ ತೆರಳುವ ಕಾರ್ಮಿಕರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇವಿಎಂ ಮಿಶಿನ್ ದುರಸ್ತಿ ನಂತರ‌ ಮತದಾನ ಪ್ರಕ್ರಿಯೆ ಮುಂದೂವರೆಯಿತು.

ಬಯಲು ಸೀಮೆ ಭಾಗದಲ್ಲಿ ಉರಿ ಬಿಸಿಲಿನ‌ ನಡುವೆ ಮತದಾರರು ಮತಗಟ್ಟೆಯಲ್ಲಿ ಸರತಿಯಲ್ಲಿ ನಿಂತು ಮತದಾನ ಮಾಡಿದರು.

Leave A Reply

Your email address will not be published.

error: Content is protected !!