ನವರಾತ್ರಿ ವಿಶೇಷ ಅಲಂಕಾರ | ಬಳೆಗಳು ಜೀವನದ ಸುರಕ್ಷಾ ಕಂಕಣ ; ಹೊಂಬುಜ ಶ್ರೀಗಳು

0 156

ರಿಪ್ಪನ್‌ಪೇಟೆ : ನವರಾತ್ರಿಯ 7ನೇ ಸುದಿನದಂದು ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪರಂಪರಾನುಗತ ಬಳೆಗಳಿಂದ ಅಲಂಕರಿಸಿದ ಅಭೀಷ್ಠವರ ಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿಯವರಿಗೆ ಆಗಮೋಕ್ತ ಶಾಸ್ತ್ರದನ್ವಯ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು.


ಅಷ್ಟವಿಧಾರ್ಚನೆ ಪೂಜೆಯ ಬಳಿಕ ಫಲ-ಪುಷ್ಪಗಳನ್ನು ಸಮರ್ಪಿಸಿ ಭಕ್ತವೃಂದದವರು ಜಿನನಾಮ ಸ್ತೋತ್ರಗಳನ್ನು ಪಠಿಸಿದರು.

ಹೊಂಬುಜದ ಪರಮಪೂಜ್ಯ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯ ನೇತೃತ್ವ, ಉಪಸ್ಥಿತಿಯಲ್ಲಿ ಪೂಜಾ ವಿಧಿ-ವಿಧಾನಗಳು ನೆರವೇರಿದವು. ಸುರಕ್ಷಾ ಕವಚದಂತೆ ಧರಿಸುವ ಬಳೆಗಳು ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಕೇವಲ ಅಲಂಕಾರ ವಸ್ತುವಾಗಿರದೇ ಶಾರೀರಿಕ-ಮಾನಸಿಕ ಆರೋಗ್ಯ ವರ್ಧಿಸುವಂತೆ ಮಾಡುತ್ತದೆ ಎಂದು ಶುಭಾಶೀರ್ವಚನ ಪ್ರವಚನದಲ್ಲಿ ಪೂಜ್ಯ ಸ್ವಸ್ತಿಶ್ರೀಗಳವರು ನೈತಿಕ ಮೌಲ್ಯಗಳು ಬಳೆಗಳಂತೆ ಪ್ರತಿಯೋರ್ವರಿಗೂ ಧರ್ಮಪಥವು ಸುಕೃತ ಫಲ ನೀಡುವಂತೆ ಚೈತನ್ಯದಾಯಕವಾಗಿದೆ ಎನ್ನುತ್ತಾ ಹರಸಿದರು.

ಶ್ರೀ ಕ್ಷೇತ್ರದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಿಧಿಯಲ್ಲಿ ಪೂರ್ವ ಪದ್ಧತಿಯಂತೆ ಧಾರ್ಮಿಕ ವಿಧಾನಗಳು ನೆರವೇರಿದವು.

ರಾತ್ರಿ ಅಷ್ಟಾವಧಾನ ಸಹಿತ ನವರಾತ್ರಿ ಪೂಜೆ, ಸಂಗೀತ ಕಾರ್ಯಕ್ರದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದರು. ಸೇವಾಕರ್ತೃರಾದ ಬೆಂಗಳೂರಿನ ಚೂಡಾಮಣಿ ಶ್ರೀ ರವಿರಾಜ್ ಜೈನ್‌ರವರನ್ನು ಶ್ರೀಗಳವರು ಹರಸಿದರು. ಪುರೋಹಿತ ಪದ್ಮರಾಜ ಇಂದ್ರರವರು ಪೂಜಾ ವಿಧಿ ನೆರವೇರಿಸಿದರು.

Leave A Reply

Your email address will not be published.

error: Content is protected !!