ರಿಪ್ಪನ್‌ಪೇಟೆ ರೋಟರಿ ಕ್ಲಬ್‌ನಿಂದ ವನ ಮಹೋತ್ಸವ

Written by Mahesha Hindlemane

Published on:

ರಿಪ್ಪನ್‌ಪೇಟೆ : ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣ ಹಂತ ತಲುಪಿದ್ದು ರಸ್ತೆಯ ಡಿವೈಡರ್‌ನ ಮಧ್ಯೆ ಗಿಡಗಳನ್ನು ಬೆಳೆಸುವ ಮೂಲಕ ಪಟ್ಟಣದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ರಿಪ್ಪನ್‌ಪೇಟೆ ರೋಟರಿ ಕ್ಲಬ್ ವತಿಯಿಂದ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ರೋಟರಿ ಕ್ಲಬ್ ಹಿರಿಯರು ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆಯ ವಿನಾಯಕ ವೃತ್ತದಿಂದ ಶಿವಮೊಗ್ಗ – ಹೊಸನಗರ ರಸ್ತೆಯಲ್ಲಿ ನಿರ್ಮಿಸಲಾಗಿರುವ ಡಿವೈಡರ್ ಮಧ್ಯದಲ್ಲಿ ಗಿಡಗಳನ್ನು ನೆಟ್ಟು ರಕ್ಷಣಾ ಬೇಲಿ ಅಳವಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಯುವ ಪೀಳಿಗೆಯಲ್ಲಿ ಪರಿಸರ ಜಾಗೃತಿ ಮೂಡಿಸುವ ಮೂಲಕ ಗಿಡಮರಗಳನ್ನು ಬೆಳಸುವುದರೊಂದಿಗೆ ಶುದ್ಧ ಗಾಳಿ ಬೆಳಕು ಸೇರಿದಂತೆ ಸ್ವಚ್ಚತೆಯೊಂದಿಗೆ ಪರಿಸರ ಸಂರಕ್ಷಣೆಯೊಂದಿಗೆ ಪ್ರಮುಖ ಬೀದಿಗಳು ಆಕರ್ಷಕವಾಗಿರುವಂತೆ ಎಲ್ಲೆಲ್ಲೂ ಹಸಿರು ವಾತಾವರಣ ಕಂಗೊಳಿಸುವಂತೆ ಸ್ವಚ್ಚ ಸುಂದರ ಪಟ್ಟಣವನ್ನಾಗಿಸುವ ಮಹಾರ್ತ್ಕಾಯಕ್ಕೆ ರೋಟರಿ ಕ್ಲಬ್ ಮುಂದಾಗಿದೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನೂತನ ಅಧ್ಯಕ್ಷ ರವೀಂದ್ರ ಬಲ್ಲಾಳ್, ಕಾರ್ಯದರ್ಶಿ ಹೆಚ್.ಎಸ್.ರಮೇಶಹೆಬ್ಬಾರ್ (ರಾಮು), ಹೆಚ್.ಎಂ.ವರ್ತೇಶ್‌ಗೌಡ, ತಾ.ನಾ.ರಾಮಜಿ, ಗಣೇಶಕಾಮತ್, ಹೆಚ್.ಎಸ್.ಸುಧೀಂದ್ರ ಹೆಬ್ಬಾರ್, ರಾಮಚಂದ್ರ, ಡಾಕಪ್ಪ ಮುಡುಬ, ನಿವೃತ್ತ ಶಿಕ್ಷಕ ರಾಧಾಕೃಷ್ಣ, ಮುಖೇಶ್ ದೇವದಾಸ್ ಆಚಾರ್, ಇನ್ನಿತರರು ಹಾಜರಿದ್ದರು.

Leave a Comment