ಚಲಿಸುತ್ತಿದ್ದ ಬೈಕ್ ಮೇಲೆ ಒಣಮರದ ರೆಂಬೆ ಬಿದ್ದು ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

Written by Mahesha Hindlemane

Published on:

ರಿಪ್ಪನ್‌ಪೇಟೆ : ಚಲಿಸುತ್ತಿದ್ದ ಬೈಕ್ ಮೇಲೆ ಒಣಮರದ ರೆಂಬೆ ಬಿದ್ದು 26 ವರ್ಷದ ಯುವಕ ಸ್ಥಳದಲ್ಲೇ ಮೃತರಾದ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದ ನಿವಾಸಿ ಸಂತೋಷ್ (26) ಮೃತ ಯುವಕ. ಇನ್ನೊಬ್ಬ ಯುವಕ ವೀರಭದ್ರ ಎಂಬುವನಿಗೆ ಗಂಭೀರವಾದ ಬಗ್ಗೆ ವರದಿಯಾಗಿದೆ.

ಸಂತೋಷ್ ಮತ್ತು ವೀರಭದ್ರ ಇಬ್ಬರೂ ಮೀನು ಹಿಡಿಯಲು ಬೇಕಾದ ಉಕ್ಕಡವನ್ನು ಹೊತ್ತುಕೊಂಡು ಚೋರಡಿ ಗ್ರಾಮದಿಂದ ರಿಪ್ಪನ್‌ಪೇಟೆ ಮೂಲಕ ಗರ್ತಿಕೆರೆ ಸಮೀಪದ ತಾರಿಗ ಗ್ರಾಮಕ್ಕೆ ಹೊರಟಿದ್ದರು. ಅವರು ತಾರಿಗ ಕಡೆಗೆ ಸಾಗುತ್ತಿದ್ದಾಗ, ರಸ್ತೆ ಬದಿಯಲ್ಲಿ ಸುಮಾರು 50 ಅಡಿ ಎತ್ತರದ ಒಣಮರದ ದೊಡ್ಡ ರೆಂಬೆಯೊಂದು ಏಕಾಏಕಿ ಮುರಿದು ಅವರ ಬೈಕ್ ಮೇಲೆ ಬಿದ್ದಿದೆ.

ಮರದ ರೆಂಬೆಯ ಬಿದ್ದ ರಭಸದಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಕುಸಿದಿದೆ. ಈ ಘಟನೆಯಿಂದ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ವೀರಭದ್ರ ಅವರನ್ನು ತಕ್ಷಣ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಗ್ಗೆ ತಿಳಿದಂತೆ ರಿಪ್ಪನ್‌ಪೇಟೆ ಪೊಲೀಸ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ಸಂತೋಷ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ಸಾಗಿಸಲಾಗಿದೆ. ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Comment