Malenadu Rain |  ಮಲೆನಾಡಿನಲ್ಲಿ ಮುಂದುವರೆದ ವರುಣಾರ್ಭಟ, ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ?

Written by Mahesha Hindlemane

Published on:

SHIVAMOGGA / CHIKKAMAGALURU | ಮಲೆನಾಡಿನಾದ್ಯಂತ ಆರಿದ್ರಾ ಮಳೆ ಅಬ್ಬರ ಜೋರಾಗಿದೆ. ಕಳೆದೆರಡು ದಿನಗಳಿಂದ ಬಿಟ್ಟು ಬಿಡದೆ ಧಾರಾಕಾರವಾಗಿ ಮಳೆ (Heavy Rain) ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಮಳೆ ಜೋರಾಗಿದ್ದು ಹಲವೆಡೆ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ‌.

Read More :ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಭಾರಿ ವರ್ಷಧಾರೆ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

ಇನ್ನೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಎನ್.ಆರ್. ಪುರ ತಾಲೂಕಿನಾದ್ಯಂತ ಮಳೆರಾಯ ಅಬ್ಬರಿಸುತ್ತಿದ್ದಾನೆ‌.

ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆ ವಿವರ ಹೀಗಿದೆ‌.

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  1. ಮಾಸ್ತಿಕಟ್ಟೆ (ಹೊಸನಗರ) : 118
  2. ಹುಲಿಕಲ್ (ಹೊಸನಗರ) : 117
  3. ಯಡೂರು (ಹೊಸನಗರ) : 86
  4. ಬಿದರಗೋಡು (ತೀರ್ಥಹಳ್ಳಿ) : 82
  5. ಅರೇಹಳ್ಳಿ (ತೀರ್ಥಹಳ್ಳಿ) : 75.5
  6. ಮಾಣಿ (ಹೊಸನಗರ) : 74
  7. ಹೊಸೂರು-ಸಂಪೆಕಟ್ಟೆ (ಹೊಸನಗರ) : 67.5
  8. ಬಿದನೂರುನಗರ (ಹೊಸನಗರ) : 64
  9. ಹೊಸಳ್ಳಿ (ತೀರ್ಥಹಳ್ಳಿ) : 56
  10. ಹೊಸನಗರ (ಹೊಸನಗರ) : 57
  11. ತೀರ್ಥಮತ್ತೂರು (ತೀರ್ಥಹಳ್ಳಿ) : 47
  12. ನೊಣಬೂರು (ತೀರ್ಥಹಳ್ಳಿ) : 46
  13. ಮೇಲಿನಬೆಸಿಗೆ (ಹೊಸನಗರ) : 42.5
  14. ಕೋಳೂರು (ಸಾಗರ) : 39.5
  15. ಸಾಲ್ಗಡಿ (ತೀರ್ಥಹಳ್ಳಿ) : 38

ಚಿಕ್ಕಮಗಳೂರು (ಮಿ.ಮೀ.ಗಳಲ್ಲಿ) :

  1. ಬಣಕಲ್ (ಮೂಡಿಗೆರೆ) : 124.5
  2. ಕಿರುಗುಂದ (ಮೂಡಿಗೆರೆ) : 95
  3. ಹೊರನಾಡು (ಕಳಸ) : 88
  4. ಬೇಗಾರು (ಶೃಂಗೇರಿ) : 83
  5. ಧರೆಕೊಪ್ಪ (ಶೃಂಗೇರಿ) : 77.5
  6. ಬಾಳೂರು (ಮೂಡಿಗೆರೆ) : 77.5
  7. ವಿದ್ಯಾರಣ್ಯಪುರ (ಶೃಂಗೇರಿ) : 92.5
  8. ಬೆಟ್ಟಗೆರೆ (ಮೂಡಿಗೆರೆ) : 76.5
  9. ತೋಟದೂರು (ಕಳಸ) : 75.5
  10. ಶಾನುವಳ್ಳಿ (ಕೊಪ್ಪ) : 72

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಹೆಚ್ಚಳ :

ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ಬಾರಿಗಿಂತ 7 ಅಡಿ ನೀರು ಹೆಚ್ಚು ಸಂಗ್ರಹವಾಗಿದ್ದು ಇಂದು ಬೆಳಿಗ್ಗೆ 8:00 ಗಂಟೆಗೆ ಜಲಾಶಯದ ನೀರಿನ ಮಟ್ಟ 1747.60 ಅಡಿ ತಲುಪಿದ್ದು ಜಲಾಶಯಕ್ಕೆ 16984 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೆ ಅವಧಿಗೆ ಜಲಾಶಯದ ನೀರಿನ ಮಟ್ಟ1740.20 ಅಡಿ ದಾಖಲಾಗಿತ್ತು.

Read More : Ganga kalyana ರೈತರಿಗೆ ಶುಭ ಸುದ್ದಿ ,ಗಂಗಾ ಕಲ್ಯಾಣ ಯೋಜನೆ 2024 ಅರ್ಜಿ ಅಹ್ವಾನ!

Leave a Comment