ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಶಮನಗೊಳಿಸುವಂತೆ ರಾಷ್ಟ್ರಾಧ್ಯಕ್ಷರಿಗೆ ಪತ್ರ

Written by malnadtimes.com

Updated on:

ರಿಪ್ಪನ್‌ಪೇಟೆ ; ರಾಜ್ಯ ಬಿಜೆಪಿ ಘಟಕದಲ್ಲಿ ಆಂತರಿಕ ಭಿನ್ನಮತವನ್ನು ಶಮನಗೊಳಿಸಲು ಪಕ್ಷದ ವರಿಷ್ಟರು ಮುಂದಾಗಬೇಕು. ಪಕ್ಷದ ಗೆಲುವು ಹಿರಿಯ ಮುಖಂಡರುಗಳ ಆಂತರಿಕ ಭಿನ್ನಮತವನ್ನು ಮಾಧ್ಯಮಗಳ ಮೂಲಕ ಬಹಿರಂಗವಾಗಿ ಚರ್ಚೆ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹಿನ್ನಡೆ ಆಗುತ್ತಿದ್ದು ಇದರಿಂದ ಕಾರ್ಯಕರ್ತರು ಗೊಂದಲಕ್ಕೀಡಾಗುತ್ತಿದ್ದಾರೆ. ರಾಜ್ಯದಲ್ಲಿನ ಪಕ್ಷದ ಪ್ರಮುಖ ಮುಖಂಡರುಗಳ ಆಂತರಿಕ ಭಿನ್ನಮತವನ್ನು ಶಮನಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ಹೊಸನಗರ ತಾಲ್ಲೂಕು ಉಪಾಧ್ಯಕ್ಷ ಹಾಗೂ ಮಹಾಶಕ್ತಿ ಕೇಂದ್ರದ ಮಾಜಿ ಆಧ್ಯಕ್ಷ ಎಂ.ಬಿ.ಮಂಜುನಾಥ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿನ ಬಿಜೆಪಿಯ ಕೆಲವು ಹಿರಿಯ ಮುಖಂಡರುಗಳ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ಉಲ್ಬಣ ಗೊಳ್ಳುತ್ತಿರುವುದರಿಂದ ರಾಜ್ಯದಲ್ಲಿನ ಬಿಜೆಪಿ ಕಾರ್ಯಕರ್ತರು ಗೊಂದಲದಲ್ಲಿ ಹಾಗೂ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇದು ರಾಜ್ಯದ ಮತದಾರರ ಮೇಲೆ ಹಾಗೂ ಮುಂದಿನ ಚುನಾವಣೆಗಳಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಭಿನ್ನಮತಕ್ಕೆ ಕಡಿವಾಣ ಹಾಕುವುರ ಮೂಲಕ ಕೂಡಲೇ ಶಮನಗೊಳಿಸುವಂತೆ ಪಕ್ಷದ ಕಾರ್ಯಕರ್ತರು ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷದ ಉತ್ತಮ ಸಂಘಟನೆಯನ್ನು ಹೊಂದಿದ್ದು ಆದರೆ ಇತ್ತೀಚಿನಕೆಲವು ತಿಂಗಳುಗಳಿಂದ ರಾಜ್ಯದ ಕೆಲವು ಮುಖಂಡರು ವೈಯಕ್ತಿಕ ಟೀಕೆಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿರುವುದು ಕಾರ್ಯಕರ್ತರಿಗೆ ಇರಿಸು-ಮುರಿಸು ಉಂಟಾಗಿದೆ ಎಂದು ರಾಷ್ಟ್ರಾಧ್ಯಕ್ಷರು ಈ ಬಗ್ಗೆ ಸೂಕ್ತ ಗಮನಹರಿಸುವುದರ ಮೂಲಕ ರಾಜ್ಯದಲ್ಲಿನ ಬಿಜೆಪಿಯ ಕೆಲ ಮುಖಂಡರುಗಳ ಭಿನ್ನಮತವನ್ನು ಶಮನಗೊಳಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ನಾಗೇಂದ್ರ ಕಲ್ಲೂರು, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಸುಂದರೇಶ್, ಮುಖಂಡರಾದ ಸುರೇಶ್‌ಸಿಂಗ್, ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಗಿರೀಶ ಜಂಬಳ್ಳಿ, ರಾಮಚಂದ್ರ ಬಳೆಗಾರ್, ರೇಖಾರವಿ, ಮುರುಳಿ ಕೆರೆಹಳ್ಳಿ ಹಾಜರಿದ್ದರು.


ಮಾಂಸದಂಗಡಿ ಪರವಾನಗಿ ವಿತರಣೆಯಲ್ಲಿ ಗ್ರಾಮಾಡಳಿತದಿಂದ ತಾರತಮ್ಯ ; ಆರೋ

ರಿಪ್ಪನ್‌ಪೇಟೆ ; ಇಲ್ಲಿನ ಮಾಂಸದ ಅಂಗಡಿಯ ಲೆಸೆನ್ಸ್ ವಿತರಣೆಯಲ್ಲಿ ಗ್ರಾಮಡಳಿತ ತಾರತಮ್ಯ ಎಸಗುವುದರರೊಂದಿಗೆ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದೆ ಎಂದು ಗ್ರಾಮ ಪಂಚಾಯಿತ್ ಸದಸ್ಯ ಹಾಗೂ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುಂದರೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪಟ್ಟಣದ ಗ್ರಾಮ ಆಡಳಿತ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರುವುದರ
ಮೂಲಕ ಯಾವುದೇ ಹರಾಜು ಪ್ರಕ್ರಿಯೆಯನ್ನು ನಡೆಸದೆ ಬೇಕಾಬಿಟ್ಟಿ ಕೋಳಿ ಮಾಂಸದ ಅಂಗಡಿಗಳ ಲೈಸನ್ಸ್ಗಳನ್ನು ಕಾನೂನು ಬಾಹಿರವಾಗಿ ವಿತರಿಸುತ್ತಿದ್ದಾರೆ.ಈ ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೇಂದು ತಿಳಿಸಿದರು.

ಪಟ್ಟಣದ ಸಂತೆ ಮಾರುಕಟ್ಟೆ ಸೇರಿದಂತೆ ಸಾಗರ ಮತ್ತು ಹೊಸನಗರ ರಸ್ತೆಯಲ್ಲಿ ಜನವಸತಿ ಪ್ರದೇಶದಲ್ಲಿರುವ ಮಾಂಸದ ಅಂಗಡಿಗಳ ಸುತ್ತಮುತ್ತ ಯಾವುದೇ ಸ್ವಚ್ಚತೆ ಇಲ್ಲದೆ ಹಾಗೂ ಪಶು ವೈದ್ಯಕೀಯ ಇಲಾಖೆಯ ನಿಯಮಗಳನ್ನು ಪಾಲಿಸದೆ ಇರುವುದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮಾಂಸದ ಅಂಗಡಿಗಳನ್ನು ಮಾಂಸದ ಮಾರಾಟಕ್ಕಾಗಿ ಪ್ರತ್ಯೇಕ ನಿರ್ಮಿಸಿರುವ ಕಟ್ಟಡದಲ್ಲೇ ಮಾತ್ರ ಕಡ್ಡಾಯವಾಗಿ ಮಾರಾಟ ಮಾಡಲು ಅದೇಶವನ್ನು ನೀಡಲು ಈಗಾಗಲೇ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದ್ದರೂ ಇದಕ್ಕೆ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲವೆಂದರು.

ಜನವಸತಿ ಪ್ರದೇಶಗಳಲ್ಲಿರುವ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಲಿರುವ ಮಾಂಸದ ಅಂಗಡಿಗಳನ್ನು ತೆರವುಗೊಳಿಸುವುದರ ಮೂಲಕ ಪಟ್ಟಣದ ನಾಗರೀಕರ ಆರೋಗ್ಯದ ರಕ್ಷಣೆಗೆ ಮುಂದಾಗಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಸುಂದರೇಶ್ ಆಗ್ರಹಿಸಿದರು.

Leave a Comment