ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ, ಒಂದು ಕಾರು ಜಖಂ ; ಓರ್ವನಿಗೆ ಗಂಭೀರ ಗಾಯ

0 66


ಹೊಸನಗರ : ವೈಯಕ್ತಿಕ ವಿಚಾರವನ್ನು ಬೇರೆಯವರ ಮೊಬೈಲ್‌ಗೆ ಚಂದನ ಎಂಬಾತ ಫಾರ್ವರ್ಡ್ ಮಾಡುತ್ತಿದ್ದ ಸಂಗತಿ ಕುರಿತಂತೆ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಘರ್ಷಣೆ ನಡೆದು ಒಂದು ಮಾರುತಿ ಕಾರನ್ನು ಜಖಂಗೊಳಿಸಿ, ಓರ್ವನಿಗೆ ರಾಡ್, ದೊಣ್ಣೆಗಳಿಂದ ದಾಳಿ ಮಾಡಿರುವ ಘಟನೆ ಪಟ್ಟಣದ ಮಾರಿಗುಡ್ಡ ಸಮೀಪದ ಹೆಲಿಪ್ಯಾಡ್‌ನಲ್ಲಿ ಬುಧವಾರ ತಡ ರಾತ್ರಿ ನಡೆದಿದೆ.


ಈ ಸಂಬಂಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ 8 ಜನರ ವಿರುದ್ದ ಪ್ರಕರಣ ದಾಖಲಾಗಿದ್ದು ಪೊಲೀಸರು ಈಗಾಗಲೇ 4 ಜನರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಂದು ಇನೋವಾ ಕಾರು, ಡಸ್ಟರ್ ಕಾರು ಹಾಗೂ ಒಂದು ಓಮ್ನಿ ಕಾರನ್ನು ವಶಕ್ಕೆ ಪಡೆದಿದ್ದಾರೆ.


ಘಟನೆಯ ವಿವರ :

ಇದೇ ಮಂಗಳವಾರ ತನ್ನ ಮೊಬೈಲಿಗೆ ಬಂದ ಬಳ್ಳಿಬೈಲು ವಿನಯ್‌ಗೌಡ ಎಂಬಾತನಿಗೆ ಸೇರಿದ ವಿಡಿಯೋ ತುಣುಕನ್ನು ಪಟ್ಟಣದ ಐಬಿ ರಸ್ತೆಯ ಚಂದನ ಎಂಬಾತನು ವಿವಿಧ ಮೊಬೈಲ್‌ಗಳಿಗೆ ಫಾರ್ವರ್ಡ್‌ ಮಾಡುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ, ನಿನ್ನೊಂದಿಗೆ ಸ್ವಲ್ಪ ಮಾತನಾಡಬೇಕೆಂದು ಆರೋಪಿ ವಿನಯ್‌ಗೌಡ, ನೆರಟೂರಿನ ದರ್ಶನ ಎಂಬಾತನೊಂದಿಗೆ ಸೇರಿ, ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಸಮೀಪದ ಚೌಡಮ್ಮ ರಸ್ತೆಯಲ್ಲಿ ದೂರುದಾರರ ಜೊತೆಯಲ್ಲಿದ್ದ ಮಿತ್ರರಾದ ಅರಳಿಕೊಪ್ಪ ಬಸವರಾಜ, ಮಾವಿನಕೊಪ್ಪ ಸುಧೀರ್ ಹಾಗೂ ಚಂದನ ಎಂಬಾತನ ಜೊತೆ ಗಲಾಟೆ ಮಾಡಿಕೊಂಡಿದ್ದು, ಘಟನೆಯಿಂದ ಬೇಸರಗೊಂಡಿದ್ದ ನಾವುಗಳು ಸುಧೀರನ ಮಾರುತಿ ಕಾರಿನಲ್ಲಿ ಕೋರ್ಟ್ ಸಮೀಪದ ಹೆಲಿಪ್ಯಾಡ್ ತೆರಳಿ ಪರಸ್ಪರ ನಾವುಗಳು ಮಾತನಾಡುತ್ತಿರುವಾಗ, ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ ಒಂದು ಇನೋವಾ ಕಾರಿನಲ್ಲಿ 4ಜನ (ಕೆ-32-ಎನ್-5355), ಡಸ್ಟರ್ ಕಾರಿನಲ್ಲಿ ಓರ್ವ (ಕೆ20-ಜೆಡ್-7716) ಹಾಗೂ ಒಮಿನಿ ಕಾರಿನಲ್ಲಿ 3 ಜನ (ಕೆ20-ಎಂಸಿ-6376) ನಮ್ಮ ಬಳಿ ಕಾರಿನಿಂದ ವಿನಯ್‌ಗೌಡ, ದರ್ಶನ, ಪ್ರವೀಣ, ರವಿ, ವಿನಾಯಕ, ಮೋಹನ, ಅನಿಲ ಹಾಗೂ ರಮೇಶ್ ಆಗಿದ್ದು, ಇವರೆಲ್ಲಾ ಆರೋಪಿ ವಿನಯ್‌ಗೌಡನ ಸಹಚರರಾಗಿದ್ದು, ಅವರಲ್ಲಿ ವಿನಯ್‌ಗೌಡ, ದರ್ಶನ, ಪ್ರವೀಣ ಹಾಗೂ ರವಿ ಎಂಬುವವರು ಏಕಾಏಕೀ ಜಗಳಕ್ಕಿಳಿದು ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸಿ, ಜೀವ ಬೆದರಿಕೆ ಹಾಕಿ ಮೂವರು ಪರ‍್ಯಾದಿಗಳ ಮೇಲೆ ಹಲ್ಲೆ ಮಾಡಿದ್ದು, ಉಳಿದ ನಾಲ್ಕು ಆರೋಪಿಗಳು ಸಹ ಈ ಕೃತ್ಯಕ್ಕೆ ಕೈ ಜೊಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳು ತಮ್ಮ ಕಾರಿನಲ್ಲಿ ತಂದಿದ್ದ ದೊಣ್ಣೆಗಳಿಂದ ದೂರುದಾರ ಸುಧೀರ್ ಎಂಬಾತನ ಕಾರನ್ನು ಜಖಂಗೊಳಿಸಿದ್ದು, ಸುಧೀರ್, ಚಂದನ್ ಎಂಬುವವರು ಸ್ಥಳದಿಂದ ಪರಾರಿಯಾಗಿದ್ದು, ಇನ್ನೊಬ್ಬ ದೂರುದಾರ ಮುರಳಿ ಮೋಹನ್ ಎಂಬಾತನ ಎರಡು ಕೈ ಹಾಗೂ ಒಂದು ಕಾಲನ್ನು ಸಂಪೂರ್ಣ ಜಖಂಗೊಳಿಸಿದ್ದಾರೆ. ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರ ಮುರಳಿ, ಮೋಹನ್ ನೀಡಿದ ದೂರಿನ ಅನ್ವಯ ಹೊಸನಗರ ಪೊಲೀಸರು ಕಲಂ 143, 144, 147, 148, 504, 323, 326, 427, 505 ಆರ್/ಡ್ಯೂ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.