ಕಾಲೇಜಿಗೆ ಹೋಗುವ ಅಪ್ರಾಪ್ತೆ ತಂಗಿಯನ್ನೇ 7 ತಿಂಗಳ ಗರ್ಭಿಣಿ ಮಾಡಿದ ಅಣ್ಣ !

Written by malnadtimes.com

Updated on:

ಚಿಕ್ಕಮಗಳೂರು ; ನಾಗರೀಕ ಸಮಾಜ ತಲೆತಗ್ಗಿಸುವ ಘಟನೆಯೊಂದು ಜಿಲ್ಲೆಯ ಶೃಂಗೇರಿ ವಿಧಾನಸಭಾ ವ್ಯಾಪ್ತಿಯ ಕುಗ್ರಾಮವೊಂದರಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಹೌದು, ವಯಸ್ಸಿಗೆ ಬಂದಿರುವ ತಂಗಿಯನ್ನು ಕಾಲೇಜಿನಲ್ಲಿ ಕಿಡಿಗೇಡಿಗಳಿಂದ ರಕ್ಷಣೆ ಮಾಡಬೇಕಾದ ಅಣ್ಣನೇ ತನ್ನ ತಂಗಿಯನ್ನು ಗರ್ಭಿಣಿ ಮಾಡಿದ ಪ್ರಸಂಗ ನಡೆದಿದ್ದು ಇದೀಗ ಆತನ ತಂಗಿ 7 ತಿಂಗಳ ಗರ್ಭಿಣಿಯಾಗಿದ್ದಾಳೆ.

ಕಳೆದ ವರ್ಷವಷ್ಟೇ ಹೈಸ್ಕೂಲು ಮುಗಿಸಿ ಕಾಲೇಜು ಮೆಟ್ಟಿಲೇರಿದ್ದ ಚಿಕ್ಕಪ್ಪನ ಮಗಳನ್ನು ಕಾಲೇಜಿಗೆ ಬಿಡುವುದು ಹಾಗೂ ಕರೆದುಕೊಂಡು ಬರುವುದನ್ನು ಮಾಡಿದ್ದಾನೆ. ಆದರೆ, ಅದ್ಯಾವಾಗ ತಂಗಿಯ ಮೇಲೆ ಕಣ್ಣು ಹಾಕಿದ್ದಾನೋ ಗೊತ್ತಿಲ್ಲ. ಇದೀಗ ಸ್ವಂತ ಚಿಕ್ಕಪ್ಪನ ಮಗಳನ್ನೇ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ.

ಈ ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳದಂತೆ ಗುಟ್ಟಾಗಿ ಕಾಪಾಡುವಂತೆ ಬೆದರಿಕೆಯನ್ನೂ ಹಾಕಿದ್ದಾನೆ. ಇನ್ನು ಕಾಲೇಜಿಗೆ ಹೋಗುತ್ತಿದ್ದ ಮಗಳಿಗೆ ಸುಸ್ತಾಗುವುದು ಹಾಗೂ ಹೊಟ್ಟೆ ಮುಂದಕ್ಕೆ ಬಂದಿರುವುದನ್ನು ಮನೆಯವರು ಗಮನಿಸಿದ್ದಾರೆ. ಆಗ ಪರೀಕ್ಷೆ ಮಾಡಿದಾಗ ಆಕೆ ಗರ್ಭಿಣಿ ಎಂಬ ಮಾಹಿತಿ ತಿಳಿದುಬಂದಿದೆ. ಆಗ ಅಪ್ರಾಪ್ತ ವಯಸ್ಸಿನ ಮಗಳನ್ನು ಗರ್ಭಿಣಿ ಮಾಡಿದ ಪಾಪಿ ಯಾರೆಂದು ಮಗಳಿಂದ ಬಾಯಿ ಬಿಡಿಸಿದ್ದಾರೆ.

ಬೇರೆ ಯಾರೋ ಅಲ್ಲ, ಮನೆಯಲ್ಲಿಯೇ ಇರುವ ದೊಡ್ಡಪ್ಪನ ಮಗ ಶಶಾಂಕ್ (20) ತಂಗಿಯ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.

ಈ ಘಟನೆಯ ಬೆನ್ನಲ್ಲಿಯೇ ಸಂತ್ರಸ್ತ ಬಾಲಕಿಯ ಪೋಷಕರು ಶಶಾಂಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಶಶಾಂಕ್ ವಿರುದ್ಧ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಶಾಂಕ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Comment