ರಿಪ್ಪನ್‌ಪೇಟೆ ; ಯುಗಾದಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಬ್ಬದ ನಿಮಿತ್ತ ರಿಪ್ಪನ್‌ಪೇಟೆಯ ಸಂತೆ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಬಲು ಜೋರಾಗಿ ಸಾಗಿತ್ತು.
ತರಕಾರಿ, ದಿನಸಿ ಬೆಲೆ ಗಗನಕ್ಕೇರಿದ್ದು ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದರರು.
ಬೆಲೆ ಏರಿಕೆ ನಡುವೆಯೂ ಹಬ್ಬದ ಸಿದ್ದತೆ ಮಾತ್ರ ಜೋರಾಗಿಯೇ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಶನಿವಾರ ಜನಜಂಗುಲಿ ತುಂಬಿ ತುಳುಕುತ್ತಿದ್ದು ಕಂಡುಬಂತು. ಇಲ್ಲಿನ ವಿನಾಯಕ ವೃತ್ತದಲ್ಲಿನ ದಿನಸಿ, ಬಟ್ಟೆ, ತರಕಾರಿ ಅಂಗಡಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗ್ರಾಹಕರುಗಳ ಸಂಖ್ಯೆ ಹೆಚ್ಚಾಗಿತ್ತು.

ಹಿಂದೂಗಳಿಗೆ ಯುಗಾದಿ ಹಬ್ಬ ಬಂದರೆ, ಮುಸ್ಲಿಂ ಜನಾಂಗಕ್ಕೆ ರಂಜಾನ್ ಹಬ್ಬ ಸಹ ಸೋಮವಾರ ಬಂದಿರುವುದರಿಂದ ಎಲ್ಲೆಡೆ ದಿನಸಿ ಮತ್ತು ಬಟ್ಟೆ ಹಾಗೂ ಮಾಲ್‌ಗಳಲ್ಲಿ ಜನಜಂಗುಳಿ ತುಂಬಿ ತುಳುಕುವಂತಾಗಿದೆ.
ಹೂವು, ಹಣ್ಣಿನ ದರ ಸಹ ಏರಿಕೆಯಾಗಿದ್ದರೂ ಕೂಡಾ ಜನರು ಹಬ್ಬಕ್ಕಾಗಿ ಎಷ್ಟು ಹಣವಾದರೂ ಕೊಳ್ಳುವುದನ್ನು ಬಿಡಲು ಬರುತ್ತದೂ ಎಂದು ಹೇಳಿ ಖರೀದಿಯಲ್ಲಿ ಮಗ್ನರಾಗಿದ್ದರು.
ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳಾದ ಸೇಬು, ದ್ರಾಕ್ಷಿ, ನಿಂಬೆ, ಬಾಳೆಹಣ್ಣು, ಹೀಗೆ ಬಗೆಬಗೆಯ ಹಣ್ಣುಗಳನ್ನು ಕೊಳ್ಳಲು ಹಾಗೂ ಬಟ್ಟೆ ಅಂಗಡಿಯಲ್ಲಿ ಜನಜಾತ್ರೆಯೇ ಸೇರಿತ್ತು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.